ಎಷ್ಟೇ ಎಚ್ಚರಿಕೆ ವಹಿಸಿದರೂ ‘ಕಲ್ಕಿ 2898 ಎಡಿ’ ಶೂಟಿಂಗ್​ ಸೆಟ್​ನಿಂದ ಫೋಟೋ ಲೀಕ್​

2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಸಹ ಇದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಶೂಟಿಂಗ್ ಸೆಟ್​ನಿಂದ ಕೆಲವು ಫೋಟೋಗಳು ಲೀಕ್​ ಆಗಿರುವುದು ಬೇಸರದ ಸಂಗತಿ. ಇದರಿಂದ ಚಿತ್ರತಂಡಕ್ಕೆ ಚಿಂತೆ ಉಂಟಾಗಿದೆ. ಫೋಟೋಗಳು ಲೀಕ್​ ಆಗಿದ್ದಕ್ಕೆ ಪ್ರಭಾಸ್​ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

ಎಷ್ಟೇ ಎಚ್ಚರಿಕೆ ವಹಿಸಿದರೂ ‘ಕಲ್ಕಿ 2898 ಎಡಿ’ ಶೂಟಿಂಗ್​ ಸೆಟ್​ನಿಂದ ಫೋಟೋ ಲೀಕ್​
‘ಕಲ್ಕಿ 2898 ಎಡಿ’ ಫೋಟೋ ಲೀಕ್​

Updated on: Feb 16, 2024 | 3:27 PM

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟ ಪ್ರಭಾಸ್​ (Prabhas) ಅವರು ಬ್ಯುಸಿ ಆಗಿದ್ದಾರೆ. ‘ಸಲಾರ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಅವರು ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಹೈಪ್​ ಸಿಗಲು ಸಾಕಷ್ಟು ಕಾರಣಗಳಿವೆ. ಆದರೆ ಚಿತ್ರತಂಡಕ್ಕೆ ನಿರಾಸೆ ಆಗುವಂತಹ ಕೆಲವು ಘಟನೆಗಳು ನಡೆಯುತ್ತಿವೆ. ‘ಕಲ್ಕಿ 2898 ಎಡಿ’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಕೆಲವು ಫೋಟೋಗಳು ಲೀಕ್​ (Kalki 2898 AD Photo leak) ಆಗಿವೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ.

ಸಿನಿಮಾದ ಶೂಟಿಂಗ್​ ವೇಳೆ ಫೋಟೋ ಅಥವಾ ವಿಡಿಯೋ ಲೀಕ್ ಆಗಬಾರದು ಎಂದು ಚಿತ್ರತಂಡದವರು ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಆ ರೀತಿ ಲೀಕ್​ ಆದರೆ ಸಿನಿಮಾದ ಮೇಲೆ ಜನರಿಗೆ ಇರುವ ನಿರೀಕ್ಷೆ ಕಡಿಮೆ ಆಗುತ್ತದೆ. ಚಿತ್ರದಲ್ಲಿನ ಸಸ್ಪೆನ್ಸ್​ ಕಾಪಾಡಿಕೊಳ್ಳಲು ಚಿತ್ರತಂಡ ವಿಫಲ ಆದಂತಾಗುತ್ತದೆ. ಆದ್ದರಿಂದ ತುಂಬ ಕಟ್ಟುನಿಟ್ಟಾಗಿ ಶೂಟಿಂಗ್ ಮಾಡಲಾಗುತ್ತದೆ. ಹಾಗಿದ್ದರೂ ಕೂಡ ಕೆಲವೊಮ್ಮೆ ಲೀಕ್​ ಸಮಸ್ಯೆ ಎದುರಾಗುತ್ತದೆ. ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಕೂಡ ಇದೇ ಕಾಟ ಅನುಭವಿಸುತ್ತಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ರಾಜಮೌಳಿ ನಟನೆ? ಹಿರಿದಾಗುತ್ತಿದೆ ಪ್ರಭಾಸ್​ ಸಿನಿಮಾದ ಪಾತ್ರವರ್ಗ

‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್​ ಅಶ್ವಿನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆದ್ದರಿಂದ ಸೆಟ್​ಗಳು ಹಾಗೂ ಪಾತ್ರಗಳ ಗೆಟಪ್​ಗಳು ಭಿನ್ನವಾಗಿವೆ. ಅದೆಲ್ಲವೂ ಮೊದಲೇ ಲೀಕ್​ ಆದರೆ ಪ್ರೇಕ್ಷಕರ ಕೌತುಕ ಕಡಿಮೆ ಆಗುತ್ತದೆ. ಹಾಗಾಗಿ ಚಿತ್ರತಂಡಕ್ಕೆ ಇದು ತಲೆ ನೋವಾಗಿ ಪರಿಣಮಿಸಿದೆ. ಈ ಮೊದಲು ಕೂಡ ‘ಕಲ್ಕಿ 2898 ಎಡಿ’ ಸಿನಿಮಾದ ಕೆಲವು ಫೋಟೋಗಳು ಲೀಕ್​ ಆಗಿದ್ದರಿಂದ ವಿಎಫ್​ಎಕ್ಸ್​ ಕಂಪನಿ ವಿರುದ್ಧ ಚಿತ್ರತಂಡ ಕಾನೂನು ಹೋರಾಟ ಮಾಡಲು ಮುಂದಾಗಿತ್ತು.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ರಿಲೀಸ್ ದಿನಾಂಕ ತಿಳಿಸಿದ ತಂಡ; ಈ ಡೇಟ್​ ಆಯ್ಕೆಗೆ ಇದೆ ವಿಶೇಷ ಕಾರಣ  

ಪ್ರಭಾಸ್​ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಕಾಲಿವುಡ್​ನ ಲೆಜೆಂಡರಿ ನಟ ಕಮಲ್​ ಹಾಸನ್​, ಬಾಲಿವುಡ್​ನ ದಿಗ್ಗಜ ಕಲಾವಿದ ಅಮಿತಾಭ್ ಬಚ್ಚನ್​, ಬಿ-ಟೌನ್​ ಬೆಡಗಿಯರಾದ ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರವರ್ಗದ ಕಾರಣದಿಂದಲೇ ಸಿನಿಮಾದ ಕ್ರೇಜ್​ ಜೋರಾಗಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಇದೆ. ಭಾರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಮೇ 9ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ಸಿನಿಮಾದ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ. ಈ ವೇಳೆ ಶೂಟಿಂಗ್​ ಸೆಟ್​ನಿಂದ ಫೋಟೋಗಳು ಲೀಕ್​ ಆಗಿರುವುದು ಬೇಸರದ ಸಂಗತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us