ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ

ಹಲವು ದಿನಗಳ ಹಿಂದೆಯೇ ‘ಆದಿಪುರುಷ್​’ ಚಿತ್ರಕ್ಕೆ ಶೂಟಿಂಗ್ ಆರಂಭಿಸಲಾಗಿತ್ತು. ಆದರೆ ಸೆಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಾಕ್​ಡೌನ್​ ಜಾರಿಯಾಗಿದ್ದು ಮುಂತಾದ ವಿಘ್ನಗಳ ಕಾರಣದಿಂದ ಸದ್ಯಕ್ಕೆ ಚಿತ್ರೀಕರಣ ನಿಲ್ಲಿಸಲಾಗಿದೆ.

ಪ್ರಭಾಸ್​ ಸಿನಿಮಾದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಅವಕಾಶ? ಜೋರಾಗಿ ಹಬ್ಬಿದ್ದ ಗಾಸಿಪ್​ನ ಅಸಲಿಯತ್ತು ಇಲ್ಲಿದೆ
ಪ್ರಭಾಸ್​, ಆದಿಪುರುಷ್​ ಸಿನಿಮಾ ಪೋಸ್ಟರ್​

Updated on: May 30, 2021 | 9:09 AM

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟಿಸುತ್ತಿರುವ ‘ಆದಿಪುರುಷ್​’ ಚಿತ್ರ ಹಲವು ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದೆ. ಈ ಸಿನಿಮಾದಲ್ಲಿ ರಾಮಾಯಣದ ಕಥೆ ಇರಲಿದೆ. ರಾಮನಾಗಿ ಪ್ರಭಾಸ್​ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್​ ಆಯ್ಕೆ ಆಗಿದ್ದಾರೆ. ಸೀತೆಯ ಪಾತ್ರಕ್ಕೆ ಕೃತಿ ಸನೋನ್​ ಬಣ್ಣ ಹಚ್ಚಲಿದ್ದಾರೆ. ಈ ನಡುವೆ ಅನೇಕ ಸ್ಟಾರ್​ಗಳ ಹೆಸರು ಕೂಡ ಇದರಲ್ಲಿ ಕೇಳಿಬರುತ್ತಿದೆ. ಬಿಗ್​ ಬಾಸ್​ ಸ್ಪರ್ಧಿ ಸಿದ್ಧಾರ್ಥ್​ ಶುಕ್ಲಾ ಕೂಡ ‘ಆದಿಪುರುಷ್​’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.

ಬಹುನಿರೀಕ್ಷಿತ ಆದಿಪುರುಷ್​ ಚಿತ್ರಕ್ಕೆ ಖ್ಯಾತ ನಿರ್ದೇಶಕ ಓಂ ರಾವುತ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ನಟಿಸುತ್ತಿದ್ದಾರೆ. ರಾವಣನ ಪುತ್ರನ ಪಾತ್ರದಲ್ಲಿ ಸಿದ್ಧಾರ್ಥ್​ ಶುಕ್ಲಾ ಅಭಿನಯಿಸುತ್ತಾರೆ ಎಂಬ ಗುಸುಗಸು ಬಿ-ಟೌನ್​ ಅಂಗಳಲ್ಲಿ ಹಬ್ಬಿತ್ತು. ಆ ಬಗ್ಗೆ ಸ್ವತಃ ಸಿದ್ಧಾರ್ಥ್​ ಶುಕ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ಅಚ್ಚರಿ ಎಂದರೆ ಈವರೆಗೂ ಅವರಿಗೆ ಅಂತಹ ಯಾವುದೇ ಆಫರ್​ ಹೋಗಿಲ್ಲ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ಧಾರ್ಥ್​ ಶುಕ್ಲಾ ಈ ಬಗ್ಗೆ ಮಾತನಾಡಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಆ ರೀತಿಯ ಯಾವುದೇ ಆಫರ್​ ಬಂದಿಲ್ಲ. ಹಾಗಾಗಿ, ಹರಿದಾಡುತ್ತಿರುವ ಸುದ್ದಿಯಲ್ಲಿ ನಿಜ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎನ್ನುವ ಮೂಲಕ ಎಲ್ಲ ಗಾಸಿಪ್​ಗಳಿಗೆ ಅವರು ತೆರೆ ಎಳೆದಿದ್ದಾರೆ. ಹಲವು ದಿನಗಳ ಹಿಂದೆಯೇ ‘ಆದಿಪುರುಷ್​’ ಚಿತ್ರಕ್ಕೆ ಶೂಟಿಂಗ್ ಆರಂಭಿಸಲಾಗಿತ್ತು. ಆದರೆ ಸೆಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಾಕ್​ಡೌನ್​ ಜಾರಿಯಾಗಿದ್ದು ಮುಂತಾದ ವಿಘ್ನಗಳ ಕಾರಣದಿಂದ ಸದ್ಯಕ್ಕೆ ಚಿತ್ರೀಕರಣ ನಿಲ್ಲಿಸಲಾಗಿದೆ.

ಹಿಂದಿ ಬಿಗ್​ ಬಾಸ್​ 13ನೇ ಸೀಸನ್​ನಲ್ಲಿ ಭಾಗವಹಿಸಿದ್ದ ಸಿದ್ಧಾರ್ಥ್​ ಶುಕ್ಲಾ ಅವರು ವಿನ್ನರ್​ ಆಗಿ ಹೊರಹೊಮ್ಮಿದ್ದರು. ಇದಲ್ಲದೆ ಕಿರುತೆರೆಯ ಅನೇಕ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ‘ಬ್ರೋಕನ್​ ಬಟ್​ ಬ್ಯೂಟಿಫುಲ್​ 3’ ವೆಬ್​ ಸಿರೀಸ್​ನಲ್ಲೂ ಸಿದ್ಧಾರ್ಥ್​ ನಟಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ:

Prabhas: ಆದಿಪುರುಷ್​ಗಾಗಿ ಬಾಡಿ ಬೆಳೆಸಲು ಸ್ಟಿರಾಯ್ಡ್​ ಬಳಸಿದ್ದಾರಾ ಪ್ರಭಾಸ್​? ಸಹನಟ ತೆರೆದಿಟ್ಟ ಸತ್ಯ ಇಲ್ಲಿದೆ

ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us