ಪ್ರಭಾಸ್​​ಗೆ ಪ್ರಶಾಂತ್ ನೀಲ್ ಪಂಚ್, ‘ಸಲಾರ್ 2’ ಬಗ್ಗೆಯೂ ಮಾತು

‘ಫೌಜಿ’, ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ-ಪಾರ್ಟ್ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಪ್ರಭಾಸ್. ಪ್ರಭಾಸ್ ಅವರು ‘ಸಲಾರ್’ ಸಿನಿಮಾನಲ್ಲಿ ಈಗಾಗಲೇ ನಟನೆ ಮಾಡಿದ್ದು, ‘ಸಲಾರ್ 2’ನಲ್ಲಿ ನಟಿಸಬೇಕಿದೆ. ಆದರೆ ಅದರ ಚಿತ್ರೀಕರಣ ಇನ್ನೂ ಪ್ರಾರಂಭ ಆಗಿಲ್ಲ. ‘ಸಲಾರ್ 2’ ಸಿನಿಮಾ ಸೆಟ್ಟೇರುವುದಿಲ್ಲ, ಪ್ರಭಾಸ್ ಅವರಿಗೆ ‘ಸಲಾರ್ 2’ ಬಗ್ಗೆ ಆಸಕ್ತಿ ಇಲ್ಲ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಇದೀಗ ಎಲ್ಲದಕ್ಕೂ ತೆರೆ ಎಳೆದು ಖುದ್ದು ಪ್ರಭಾಸ್ ಅವರೇ ‘ಸಲಾರ್ 2’ ಬಗ್ಗೆ ಮಾತನಾಡಿದ್ದಾರೆ.

ಪ್ರಭಾಸ್​​ಗೆ ಪ್ರಶಾಂತ್ ನೀಲ್ ಪಂಚ್, ‘ಸಲಾರ್ 2’ ಬಗ್ಗೆಯೂ ಮಾತು
Prashant Neel Prabhas

Updated on: Oct 23, 2026 | 8:21 PM

ಮುಖ್ಯಾಂಶಗಳು

  • ‘ಸಲಾರ್ 2’ ಸಿನಿಮಾ ನಿಂತು ಹೋಗಿದೆ ಎನ್ನಲಾಗಿತ್ತು
  • ಈಗ ಖುದ್ದು ಪ್ರಭಾಸ್, ‘ಸಲಾರ್ 2’ ಬಗ್ಗೆ ಮಾತನಾಡಿದ್ದಾರೆ
  • ‘ಸಲಾರ್ 2’ ಗ್ಯಾರೆಂಟಿ ಎಂಬ ಸುಳಿವು ನೀಡಿದ್ದಾರೆ ಪ್ರಭಾಸ್

ಪ್ರಭಾಸ್ ಹುಟ್ಟುಹಬ್ಬ ಇಂದು (ಅಕ್ಟೋಬರ್ 23). ಪ್ರಭಾಸ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಪ್ರಸ್ತುತ ‘ಫೌಜಿ’, ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ-ಪಾರ್ಟ್ 2’ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಅಂದಹಾಗೆ ಪ್ರಭಾಸ್ ಅವರು ‘ಸಲಾರ್’ ಸಿನಿಮಾನಲ್ಲಿ ಈಗಾಗಲೇ ನಟನೆ ಮಾಡಿದ್ದು, ‘ಸಲಾರ್ 2’ನಲ್ಲಿ ನಟಿಸಬೇಕಿದೆ. ಆದರೆ ಅದರ ಚಿತ್ರೀಕರಣ ಇನ್ನೂ ಪ್ರಾರಂಭ ಆಗಿಲ್ಲ. ‘ಸಲಾರ್ 2’ ಸಿನಿಮಾ ಸೆಟ್ಟೇರುವುದಿಲ್ಲ, ಪ್ರಭಾಸ್ ಅವರಿಗೆ ‘ಸಲಾರ್ 2’ ಬಗ್ಗೆ ಆಸಕ್ತಿ ಇಲ್ಲ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಇದೀಗ ಎಲ್ಲದಕ್ಕೂ ತೆರೆ ಎಳೆದು ಖುದ್ದು ಪ್ರಭಾಸ್ ಅವರೇ ‘ಸಲಾರ್ 2’ ಬಗ್ಗೆ ಮಾತನಾಡಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಅವರು ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಪ್ರಭಾಸ್ ಅವರು ಪ್ರಶಾಂತ್ ನೀಲ್​​ ಕಾಲೆಳೆದರೆ ಪ್ರಶಾಂತ್ ನೀಲ್, ಪ್ರಭಾಸ್ ಅವರಿಗೆ ಪಂಚ್ ಕೊಟ್ಟಿದ್ದಾರೆ. ಅದೇ ವಿಡಿಯೋದ ಅಂತ್ಯದಲ್ಲಿ ಪ್ರಭಾಸ್ ಅವರು ‘ಸಲಾರ್ 2’ ಸಿನಿಮಾದ ಬಗ್ಗೆ ಮಾತನಾಡಿದ್ದು, ಆ ಮೂಲಕ ‘ಸಲಾರ್ 2’ ಸಿನಿಮಾ ನಿರ್ಮಾಣ ಆಗಲಿದೆ ಎಂಬ ದೊಡ್ಡ ಸುಳಿವನ್ನು ನೀಡಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋನಲ್ಲಿ ಪ್ರಭಾಸ್ ಅವರು ಪ್ರಶಾಂತ್ ನೀಲ್ ಬಳಿ ‘418’ ಸಿನಿಮಾದ ಬಗ್ಗೆ ವಿಚಾರಿಸಿದ್ದಾರೆ. ‘418’ ಹಾರರ್ ಸಿನಿಮಾ ಇಂದು (ಅಕ್ಟೋಬರ್ 23) ರಿಲೀಸ್ ಆಗಿದ್ದು, ಆ ಸಿನಿಮಾ ಅನ್ನು ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್. ಸಿನಿಮಾದ ಬಗ್ಗೆ ಮಾತನಾಡಿರುವ ಪ್ರಭಾಸ್, ಪ್ರಶಾಂತ್ ಅವರನ್ನು ಉದ್ದೇಶಿಸಿ, ‘ನಿಮ್ಮ ಇತರೆ ಸಿನಿಮಾಗಳ ರೀತಿ ಈ ಸಿನಿಮಾ ಸಹ ಡಾರ್ಕ್ ಆಗಿದೆ ಎಂಬ ಕಾರಣಕ್ಕೆ ಈ ಸಿನಿಮಾ ನೀವು ಪ್ರೆಸೆಂಟ್ ಮಾಡಿರುವುದಾ?’ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ನೀಲ್, ‘ಹೌದು, ಸಾರ್, ಎಲ್ಲ ಸಿನಿಮಾವನ್ನು ನಿಮ್ಮ ‘ರಾಧೆ-ಶ್ಯಾಮ್’ ರೀತಿ ತೆಗೆಯಲು ಆಗುವುದಿಲ್ಲವಲ್ಲ’ ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ:‘ಫೌಜಿ’ ನಟಿ ಇಮಾನ್ವಿ ಜನ್ಮದಿನಕ್ಕೆ ಪ್ರಭಾಸ್ ಕಡೆಯಿಂದ ಭೋಜನ ಸತ್ಕಾರ

ನೀಲ್ ಉತ್ತರಕ್ಕೆ ನಕ್ಕ ಪ್ರಭಾಸ್, ‘ನನಗೇ ಪಂಚಾ, ಸರಿ ನಿಮ್ಮನ್ನು ‘ಸಲಾರ್ 2’ ಸಮಯದಲ್ಲಿ ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ. ಆ ಬಳಿಕವೂ ಮಾತು ಮುಂದುವರೆಸಿ, ‘ಈ ಸಿನಿಮಾನಲ್ಲಿ ಕಾಮಿಡಿ ಏನಾದರೂ ಇದೆಯಾ?’ ಎಂದು ಕೇಳಿದ್ದಾರೆ, ಅದಕ್ಕೆ ನೀಲ್, ‘ಕಾಮಿಡಿ ಇದಕ್ಕೆ ಸೂಟ್ ಆಗುವುದಿಲ್ಲ’ ಎನ್ನುತ್ತಾರೆ. ಬಳಿಕ, ‘ನಿಮಗೆ ಯಾಕೆ ರೊಮ್ಯಾನ್ಸ್, ಕಾಮಿಡಿ ಇಷ್ಟ ಆಗೊಲ್ಲ’ ಎಂದು ಪ್ರಭಾಸ್ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ನೀಲ್, ‘ನನಗೆ ಅವು ಬಿಲ್ ಕುಲ್ ಇಷ್ಟವಾಗಲ್ಲ’ ಎಂದಿದ್ದಾರೆ. ಕೊನೆಗೆ ಪ್ರಭಾಸ್, ‘ಆದರೂ ಟ್ರೈಲರ್​​ನ ಕೊನೆಯಲ್ಲಿ ಒಳ್ಳೆಯ ಪಂಚ್ ಡೈಲಾಗೇ ಇದೆ’ ಎಂದಿದ್ದಾರೆ.

‘418’ ಹಾರರ್ ಸಿನಿಮಾ ಅನ್ನು ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಸಿನಿಮಾನಲ್ಲಿ ಚೈತ್ರಾ ಜೆ ಆಚಾರ್ ಸೇರಿದಂತೆ ಇನ್ನೂ ಕೆಲವು ಜನಪ್ರಿಯ ನಟ-ನಟಿಯರು ನಟಿಸಿದ್ದಾರೆ. ಇಂದು ಬಿಡುಗಡೆ ಆಗಿರುವ ಈ ಸಿನಿಮಾಕ್ಕೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us