AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಸೀಕ್ವೆಲ್​ ಶೂಟಿಂಗ್ ಶುರು; ಪ್ರಭಾಸ್ ಜನ್ಮದಿನಕ್ಕೆ ಹೊಸ ಪೋಸ್ಟ್

ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕಲ್ಕಿ 2’ ಚಿತ್ರದ ಹೊಸ ವಿಡಿಯೋ ರಿಲೀಸ್ ಆಗಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ಬಳಿಕ ಬರುತ್ತಿರುವ ಈ ಸೀಕ್ವೆಲ್‌ನಿಂದ ದೀಪಿಕಾ ಹೊರನಡೆದಿದ್ದು, ಅವರ ಜಾಗಕ್ಕೆ ಹೊಸ ನಾಯಕಿಯನ್ನು ಕರೆತರುವ ಪ್ರಯತ್ನಗಳನ್ನು ಚಿತ್ರತಂಡ ಈಗ ಚುರುಕುಗೊಳಿಸಿದೆ. ಈ ಸಿನಿಮಾ 2028ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

‘ಕಲ್ಕಿ 2898 ಎಡಿ’ ಸೀಕ್ವೆಲ್​ ಶೂಟಿಂಗ್ ಶುರು; ಪ್ರಭಾಸ್ ಜನ್ಮದಿನಕ್ಕೆ ಹೊಸ ಪೋಸ್ಟ್
ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on: Oct 23, 2026 | 10:38 AM

Share

ಮುಖ್ಯಾಂಶಗಳು

  • ಕಲ್ಕಿ 2 ಶೂಟಿಂಗ್ ಶುರು
  • ಭೈರವನಾಗಿ ಮತ್ತೆ ಕಣಕ್ಕಿಳಿದ ರೆಬೆಲ್ ಸ್ಟಾರ್ ಪ್ರಭಾಸ್
  • ಹೊಸ ನಾಯಕಿಗಾಗಿ ಹುಡುಕಾಟ

ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರಕ್ಕೆ ಆಗಲೇ ಸೀಕ್ವೆಲ್ ಘೋಷಣೆ ಆಗಿತ್ತು. ಆದರೆ, ಹಲವು ಅಡೆತಡೆಗಳಿಂದ ಸಿನಿಮಾ ರಿಲೀಸ್ ವಿಳಂಬ ಆಗಿದೆ. ಈಗ ‘ಕಲ್ಕಿ 2’ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ನಟನ ಜನ್ಮದಿನದ ಸಂದರ್ಭದಲ್ಲಿ ಚಿತ್ರತಂಡ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ.ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರವು 2028ರಲ್ಲಿ ತೆರೆಕಾಣುವ ಸಾಧ್ಯತೆಯಿದೆ.

ಇಂದು (ಅಕ್ಟೋಬರ್ 23) ಪ್ರಭಾಸ್ ಜನ್ಮದಿನ. ಈ ವಿಶೇಷ ದಿನದಂದು ಅವರ ನಟಮೆಯ ಸಿನಿಮಾ ಕಡೆಯಿಂದ ಭರ್ಜರಿ ಅಪ್​ಡೇಟ್​​ಗಳು ಬರುತ್ತಿವೆ. ಅದೇ ರೀತಿ ‘ಕಲ್ಕಿ 2898 ಎಡಿ’ ಸೀಕ್ವೆಲ್​ ವಿಡಿಯೋ ಕೂಡ ಹೊರ ಬಂದಿದೆ. ತಂಡದವರಿಗೆ ವಿಶೇಷ ಊಟವನ್ನು ಹಾಕಲಾಗಿದೆ. ಪ್ರಭಾಸ್ ಅವರ ವಿಶೇಷ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ.

‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೃಷ್ಟಿಸಿದ ಭರ್ಜರಿ ಯಶಸ್ಸು ಹಾಗೂ ಅತಿ ದೊಡ್ಡ ಕಲೆಕ್ಷನ್ ಸೀಕ್ವೆಲ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮೊದಲ ಭಾಗದ ಪ್ರಚಂಡ ವಿಜಯದ ಬಳಿಕ ಈಗ ನಿರ್ಮಾಪಕರು ಸೀಕ್ವೆಲ್ ಅನ್ನು ಅತ್ಯಂತ ಅದ್ಧೂರಿಯಾಗಿ ತರಲು ಸಜ್ಜಾಗಿದ್ದಾರೆ.

ಆದರೆ, ಮೊದಲ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದ ದೀಪಿಕಾ ಪಡುಕೋಣೆ ಅವರು ಈ ಮುಂದುವರಿದ ಭಾಗದಿಂದ ಹೊರನಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಸೀಕ್ವೆಲ್‌ನಲ್ಲಿ ಮುಂದುವರಿಯುತ್ತಿಲ್ಲ. ಈ ವಿಷಯವನ್ನು ತಂಡದವರೇ ಅಧಿಕೃತ ಮಾಡಿದ್ದಾರೆ.

ಇದನ್ನೂ ಓದಿ: ‘ಫೌಜಿ’ ನಟಿ ಇಮಾನ್ವಿ ಜನ್ಮದಿನಕ್ಕೆ ಪ್ರಭಾಸ್ ಕಡೆಯಿಂದ ಭೋಜನ ಸತ್ಕಾರ

ಹೀಗಾಗಿ ಚಿತ್ರತಂಡವು ಪ್ರಮುಖ ಪಾತ್ರಕ್ಕಾಗಿ ಹೊಸ ನಾಯಕಿಯನ್ನು ಕರೆತರುವ ಪ್ರಯತ್ನಗಳನ್ನು ನಡೆದಿವೆ. ಈ ಪಾತ್ರಕ್ಕೆ ಜೀವ ತುಂಬಲು ಬೇರೆ ಸ್ಟಾರ್ ನಾಯಕಿಯನ್ನು ತರುವ ಕುರಿತು ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ. ಪ್ರಭಾಸ್ ಜತೆ ತೆರೆ ಹಂಚಿಕೊಳ್ಳಲಿರುವ ಆ ಹೊಸ ನಾಯಕಿ ಯಾರೆಂಬ ಕುತೂಹಲ ಸದ್ಯ ಸಿನಿಪ್ರಿಯರಲ್ಲಿ ಮನೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ