ಹೃತಿಕ್​ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್​!

ವಾರ್​​ಅನ್ನು ನಿರ್ದೇಶನ ಮಾಡಿದ್ದ ಸಿದ್ಧಾರ್ಥ್​ ಆನಂದ್​ ಈ ಹೊಸ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾದ ಬಜೆಟ್​ ಕೂಡ ದೊಡ್ಡ ಮಟ್ಟದಲ್ಲಿದೆ ಎನ್ನಲಾಗುತ್ತಿದೆ.

ಹೃತಿಕ್​ ಜತೆ ಕೈ ಜೋಡಿಸಲಿದ್ದಾರೆ ದಕ್ಷಿಣ ಭಾರತದ ಹೀರೋ: 150 ಕೋಟಿ ದಾಟಲಿದೆ ಸಿನಿಮಾ ಬಜೆಟ್​!
ಹೃತಿಕ್​-ಯಶ್​
Edited By:

Updated on: Mar 09, 2021 | 5:31 PM

2019ರ ಅಕ್ಟೋಬರ್​ ತಿಂಗಳಲ್ಲಿ ತೆರೆಗೆ ಬಂದಿದ್ದ ವಾರ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್​ ಮಾಡಿತ್ತು. 150 ಕೋಟಿ ಬಜೆಟ್​ನ ಈ ಚಿತ್ರ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಕಲೆ ಹಾಕಿದ್ದು ಬರೋಬ್ಬರಿ 317 ಕೋಟಿ ರೂಪಾಯಿ. ಹೃತಿಕ್​ ರೋಷನ್​ ಹಾಗೂ ಟೈಗರ್​ ಶ್ರಾಫ್​ ಕಾಂಬಿನೇಷನ್​ನ ಈ ಆ್ಯಕ್ಷನ್​ ಸಿನಿಮಾ​ ಪ್ರೇಕ್ಷಕರಿಗೆ ಸಖತ್​ ಇಷ್ಟವಾಗಿತ್ತು. ಈಗ ಇದೇ ಮಾದರಿಯ ಸಿನಿಮಾವೊಂದು ಬಾಲಿವುಡ್​ನಲ್ಲಿ ಸಿದ್ಧಗೊಳ್ಳಲಿದೆಯಂತೆ. ಇದಕ್ಕೆ ಹೃತಿಕ್​ ಹಾಗೂ ದಕ್ಷಿಣ ಭಾರತದ ಹೀರೋ ಪ್ರಭಾಸ್​ ಒಂದಾಗಲಿದ್ದಾರಂತೆ. ಸದ್ಯ, ಬಾಲಿವುಡ್​ ಅಂಗಳದಲ್ಲಿ ಹೀಗೊಂದು ವಿಚಾರ ಹರಿದಾಡುತ್ತಿದೆ.

ರಾಧೆ ಶ್ಯಾಮ್​ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಆದಿ ಪುರುಷ್​ ಚಿತ್ರದ ಶೂಟಿಂಗ್​ ನಡೆಯುತ್ತಿದ್ದು, ಇದರ ಜತೆ ಜತೆಗೆ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದ ಕೆಲಸದಲ್ಲೂ ಪ್ರಭಾಸ್​ ತೊಡಗಿಕೊಂಡಿದ್ದಾರೆ. ಇನ್ನು, ನಾಗ್​ ಅಶ್ವಿನ್​ ನಿರ್ದೇಶನ ಮಾಡುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲೂ ಪ್ರಭಾಸ್​ ಬಣ್ಣ ಹಚ್ಚುತ್ತಿದ್ದಾರೆ. ಇವುಗಳ ಮಧ್ಯೆ ಪ್ರಭಾಸ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

ವಾರ್​​ಅನ್ನು ನಿರ್ದೇಶನ ಮಾಡಿದ್ದ ಸಿದ್ಧಾರ್ಥ್​ ಆನಂದ್​ ಈ ಹೊಸ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಹೃತಿಕ್​ ಜತೆ ಪ್ರಭಾಸ್​ ನಟಿಸಿದರೆ ಉತ್ತಮ ಎನ್ನುವ ಆಶಯ ಸಿದ್ಧಾರ್ಥ್​ ಅವರದ್ದು. ಈಗಾಗಲೇ ಪ್ರಭಾಸ್​ ಅವರ ಜತೆ ಒಂದು ಹಂತದ ಮಾತುಕತೆ ಪೂರ್ಣಗೊಂಡಿದೆ ಎನ್ನಲಾಗಿದೆ.

ಬಾಹುಬಲಿ ಸಿನಿಮಾ ಮೂಲಕ ಪ್ರಭಾಸ್​ ಹಿಂದಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಮಟ್ಟದ ಫ್ಯಾನ್ಸ್ ಇದ್ದಾರೆ. ಇನ್ನು, ದಕ್ಷಿಣ ಭಾರತದಲ್ಲಂತೂ ಪ್ರಭಾಸ್​ ಹವಾ ಸಣ್ಣ ಮಟ್ಟದ್ದೇನಲ್ಲ. ಈ ಎಲ್ಲಾ ಕಾರಣಕ್ಕೆ ಪ್ರಭಾಸ್​ ಸೂಕ್ತ ಎಂದು ನಿರ್ಧರಿಸಲಾಗಿದೆ.

ವಾರ್​ ಸಿನಿಮಾದ ಬಜೆಟ್​ ಬರೋಬ್ಬರಿ 150 ಕೋಟಿ ರೂಪಾಯಿ ಇತ್ತು. ಈಗ ಸಿದ್ಧಗೊಳ್ಳುತ್ತಿರುವ ಸಿನಿಮಾದ ಬಜೆಟ್​ ವಾರ್​ ಸಿನಿಮಾವನ್ನೂ ಮೀರಿಸಲಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಎಗ್ಸೈಟ್​ ಆಗಿದ್ದಾರೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us