ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್

Prabhas Birthday surprise: ಪ್ರಭಾಸ್ ನಟನೆಯ ಯಾವ ಸಿನಿಮಾ ಸಹ ಈ ವರ್ಷ ಬಿಡುಗಡೆ ಆಗುತ್ತಿಲ್ಲ. ಮಾತ್ರವಲ್ಲ ಪ್ರಭಾಸ್ ಸಿನಿಮಾಗಳ ಅಪ್​​ಡೇಟ್ ಹೊರಬಿದ್ದೇ ತಿಂಗಳುಗಳಾಗಿವೆ. ಆದರೆ ಕೆಲವೇ ದಿನಗಳಲ್ಲಿ ಬರಲಿರುವ ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಕೆಲ ವಿಷಯಗಳು ಸಿಗಲಿವೆ.

ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್
Prabhas

Updated on: Oct 16, 2025 | 4:47 PM

ಪ್ರಭಾಸ್ (Prabhas) ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಒಂದೂವರೆ ವರ್ಷವಾಯ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಗಳಿಸಿತು. ಆದರೆ ಇತ್ತೀಚೆಗೆ ಪ್ರಭಾಸ್ ಸಿನಿಮಾಗಳ ಬಗ್ಗೆ ಯಾವುದೇ ಸುದ್ದಿ, ಸದ್ದು ಇಲ್ಲದಂತಾಗಿದೆ. ‘ಕಾಂತಾರ: ಚಾಪ್ಟರ್ 1’ ಜೊತೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿ ಅಭಿಮಾನಿಗಳು ನಿರಾಶೆ ಹೊಂದಿದರು. ಆದರೆ ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಟ್ಟೊಟ್ಟಿಗೆ ನಾಲ್ಕು ಸಿನಿಮಾಗಳ ಅಪ್​​ಡೇಟ್​​ ಸಿಗಲಿದೆ.

ಪ್ರಭಾಸ್ ಹುಟ್ಟುಹಬ್ಬ ಅಕ್ಟೋಬರ್ 23 ರಂದು ಇದ್ದು, ‘ದಿ ರಾಜಾ ಸಾಬ್’ ಸಿನಿಮಾದ ವಿಶೇಷ ಹಾಡೊಂದು ಅಂದು ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ. ‘ದಿ ರಾಜಾ ಸಾಬ್’ ಅಸಲಿಗೆ ಕೆಲ ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ವಿಎಫ್​​ಎಕ್ಸ್ ಗುಣಮಟ್ಟ ಪ್ರಭಾಸ್​​ಗೆ ತೃಪ್ತಿ ತರಲಿಲ್ಲವಾದ್ದರಿಂದ ಸಿನಿಮಾದ ಹಲವು ಭಾಗಗಳನ್ನು ಮರು ಚಿತ್ರೀಕರಣ ಮಾಡಲಾಯ್ತು, ವಿಎಫ್​​ಎಕ್ಸ್​​ ಮೇಲೆ ಹೆಚ್ಚುವರಿ ಕೆಲಸ ಮಾಡಲಾಯ್ತು. ಇದೀಗ ಅಂತಿಮವಾಗಿ ಸಿನಿಮಾದ ಬಿಡುಗಡೆಯನ್ನು ಸಂಕ್ರಾಂತಿಗೆ ನಿಗದಿಪಡಿಸಲಾಗಿದೆ. ಅಲ್ಲಿಗೆ 2025ರಲ್ಲಿ ಪ್ರಭಾಸ್​​ನ ಒಂದೂ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಪ್ರಭಾಸ್ ‘ಫೌಜಿ’ ಹೆಸರಿನ ಆಕ್ಷನ್-ರೊಮ್ಯಾಂಟಿಕ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಸಣ್ಣ ಅಪ್​​ಡೇಟ್ ಸಹ ಈ ವರೆಗೆ ಹೊರಗೆ ಬಂದಿಲ್ಲ. ಬ್ಲಾಕ್ ಬಸ್ಟರ್​ ಸಿನಿಮಾ ‘ಸೀತಾ-ರಾಮಂ’ ನಿರ್ದೇಶನ ಮಾಡಿರುವ ರಘು ಹನುಪುಡಿ ಅವರು ಈ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಅಪ್ಪಟ ಪ್ರೇಮಕತೆಯನ್ನು ಒಳಗೊಂಡಿದೆಯಂತೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಪ್ರಭಾಸ್ ಹುಟ್ಟುಹಬ್ಬದಂದು ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ:ಅನುಷ್ಕಾ ಶೆಟ್ಟಿ-ಪ್ರಭಾಸ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ಇನ್ನು ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಸ್ಪಿರಿಟ್’ ಸಿನಿಮಾದ ಸಣ್ಣ ಅಪ್​​ಡೇಟ್ ಸಹ ಪ್ರಭಾಸ್ ಹುಟ್ಟುಹಬ್ಬದಂದು ಹೊರಬೀಳಲಿದೆ ಎನ್ನಲಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ ಈ ಸಿನಿಮಾದ ಚಿತ್ರೀಕರಣ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದಲ್ಲಿ ಪ್ರಭಾಸ್ ಲುಕ್​​ನ ಪೋಸ್ಟರ್​​ ಅನ್ನು ಪ್ರಭಾಸ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಪ್ರಭಾಸ್​​ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಅನ್ನಾಗಿಸಿದ ಸಿನಿಮಾ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳು ಇದೇ ತಿಂಗಳು ಅಕ್ಟೋಬರ್ 31ರಂದು ಮರು ಬಿಡುಗಡೆ ಆಗುತ್ತಿವೆ. ಎರಡೂ ಸಿನಿಮಾಗಳನ್ನು ಒಟ್ಟು ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಎಂಬ ಹೆಸರಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದ್ದು, ಪ್ರಭಾಸ್ ಹುಟ್ಟುಹಬ್ಬದಂದು ‘ಬಾಹುಬಲಿ: ದಿ ಎಪಿಕ್’ ತಂಡದಿಂದಲೂ ವಿಶೇಷ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಪ್ರಭಾಸ್ ಅವರ ಈ ವರ್ಷದ ಹುಟ್ಟುಹಬ್ಬ ಅಭಿಮಾನಿಗಳಿಗೆ ಹಬ್ಬವೇ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Thu, 16 October 25

Follow Us