‘ಕರಾವಳಿ’ ಸಿನಿಮಾನಲ್ಲಿ ಸಿದ್ ಶ್ರೀರಾಮ್ ದನಿ: ಮುದ್ದು ಗುಮ್ಮ ಹಾಡು ರಿಲೀಸ್

Prajwal Devaraj movie: ‘ಕರಾವಳಿ’ ಸಿನಿಮಾ ತನ್ನ ಟೀಸರ್, ಪೋಸ್ಟರ್​​​ಗಳ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಪ್ರತಿಯೊಂದು ಪೋಸ್ಟರ್ ಸಹ ಭಿನ್ನವಾಗಿದ್ದು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿವೆ. ಇದೀಗ ‘ಕರಾವಳಿ’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಈ ಮೆಲೋಡಿ ಹಾಡು ಸಹ ಸಿನಿಮಾ ಪ್ರಿಯರ ಗಮನ ಸೆಳೆಯುವಂತಿದೆ.

‘ಕರಾವಳಿ’ ಸಿನಿಮಾನಲ್ಲಿ ಸಿದ್ ಶ್ರೀರಾಮ್ ದನಿ: ಮುದ್ದು ಗುಮ್ಮ ಹಾಡು ರಿಲೀಸ್
Karqvali

Updated on: Jan 22, 2026 | 10:40 PM

ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ ಸೇರಿದಂತೆ ಹಲವಾರು ಪ್ರತಿಭಾವಂತ ನಟ, ನಟಿಯರು ಒಟ್ಟಿಗೆ ನಟಿಸುತ್ತಿರುವ ‘ಕರಾವಳಿ’ ಸಿನಿಮಾ ತನ್ನ ಟೀಸರ್, ಪೋಸ್ಟರ್​​​ಗಳ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಪ್ರತಿಯೊಂದು ಪೋಸ್ಟರ್ ಸಹ ಭಿನ್ನವಾಗಿದ್ದು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿವೆ. ಇದೀಗ ‘ಕರಾವಳಿ’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಈ ಮೆಲೋಡಿ ಹಾಡು ಸಹ ಸಿನಿಮಾ ಪ್ರಿಯರ ಗಮನ ಸೆಳೆಯುವಂತಿದೆ.

‘ಮುದ್ದು ಗುಮ್ಮ’ ಎಂಬ ‘ಕರಾವಳಿ’ ಸಿನಿಮಾದ ಹಾಡ ಬಿಡುಗಡೆ ಆಗಿದ್ದು, ಹಾಡಿಗೆ ಖ್ಯಾತ ಗಾಯಕ ಸಿದ್ ಶ್ರೀರಾಮ್ ದನಿಯಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಹಾಡು ಬಿಡುಗಡೆ ಆಗಿದ್ದು, ಹಾಡಿನ ಜೊತೆಗೆ ವಿಡಿಯೋ ಸಹ ಗಮನ ಸೆಳೆದಿದೆ. ಮನಮೋಹಕ ಹಿನ್ನೆಲೆಯಲ್ಲಿ ಹಾಡಿನ ಚಿತ್ರೀಕರಣವನ್ನು ನಿರ್ದೇಶಕ ಗುರುದತ್ ಗಣಿಗ ಮಾಡಿರುವುದು ವಿಡಿಯೋ ಮೂಲಕ ತಿಳಿಯುತ್ತಿದೆ. ಈಗ ಬಿಡುಗಡೆ ಆಗಿರುವ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ನಟಿಸಿದ್ದು ಇವರ ಜೋಡಿ ಮುದ್ದಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ:ರನ್ನರ್ ಅಪ್ ಆದರೂ ಕಡಿಮೆಯಲ್ಲ ಕರಾವಳಿ ಚಿನಕುರಳಿ ರಕ್ಷಿತಾ ಸಾಧನೆ

‘ಕರಾವಳಿ’ ಸಿನಿಮಾಕ್ಕೆ ಸಚಿನ್ ಬಸ್ರೂರು ಸಂಗೀತ ನೀಡಿದ್ದು, ಈಗ ಬಿಡುಗಡೆ ಆಗಿರುವ ‘ಮುದ್ದು ಗುಮ್ಮ’ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಟೀಸರ್ ಮೂಲಕ ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ‘ಕರಾವಳಿ’ ಈಗ ಹಾಡು ರಿಲೀಸ್ ಮಾಡಿ ನಿರೀಕ್ಷೆಯನ್ನು ಹೆಚ್ಚಿಸಿದೆ. ‘ಕರಾವಳಿ’ ಹೆಸರೆ ಹೇಳುತ್ತಿರುವಂತೆ ಕರಾವಳಿ ಭಾಗದ ಸಂಸ್ಕೃತಿ, ಸೊಗಡು, ಆಚರಣೆಗಳ ಬಗೆಗಿನ ಕತೆ ಹೊಂದಿರುವ ಸಿನಿಮಾ ಇದಾಗಿದೆ. ಪ್ರಜ್ವಲ್ ದೇವರಾಜ್ ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾವೀರ ಎನ್ನುವ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಸಿನಿಮಾನಲ್ಲಿ ಹಲವು ಪವರ್​​ಫುಲ್ ಪಾತ್ರಗಳಿದ್ದು ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಅವರುಗಳು ನಟಿಸಿದ್ದಾರೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.

ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಅಭಿಮನ್ಯೂ ಸದಾನಂದನ್ ಕ್ಯಾಮರ ವರ್ಕ್ ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ