
ಪ್ರಶಾಂತ್ ನೀಲ್ ಬೇಡಿಕೆಯ ನಿರ್ದೇಶಕ. ‘ಕೆಜಿಎಫ್’ ತೆರೆಕಂಡ ನಂತರದಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಸ್ಟಾರ್ ನಟರ ಜತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈಗ ರಾಮ್ ಚರಣ್ ಹಾಗೂ ಚಿರಂಜೀವಿ ಜತೆ ಕಾಣಿಸಿಕೊಂಡಿದ್ದಾರೆ ಪ್ರಶಾಂತ್ ನೀಲ್. ಈ ಭೇಟಿ ಹಿಂದಿನ ಉದ್ದೇಶ ಬೇರೆಯೇ ಇದೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಪ್ರಶಾಂತ್ ನೀಲ್ ಜತೆ ಕೆಲಸ ಮಾಡಬೇಕು ಎಂದು ದೊಡ್ಡ ಪ್ರೊಡಕ್ಷನ್ ಹೌಸ್ಗಳು ಕಾದು ಕೂತಿವೆ. ಸ್ಟಾರ್ ನಟರ ಜತೆ ಸಿನಿಮಾ ಮಾಡೋಕೆ ಪ್ರಶಾಂತ್ ನೀಲ್ ಆಸಕ್ತಿ ತೋರಿಸುತ್ತಿದ್ದಾರೆ. ಈಗ ಅವರು ಚಿರಂಜೀವಿ ಜತೆ ಕಾಣಿಸಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲ, ಆರ್ಆರ್ಆರ್ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಈ ಟ್ವೀಟ್ನಲ್ಲಿ ಟ್ಯಾಗ್ ಮಾಡಲಾಗಿದೆ.
‘ಲೆಜೆಂಡ್ ನಟರನ್ನು ಭೇಟಿ ಮಾಡಿದೆ. ಆತಿಥ್ಯ ನೀಡಿದ್ದಕ್ಕೆ ಧನ್ಯವಾದ. ಚಿರಂಜೀವಿಯನ್ನು ಭೇಟಿ ಮಾಡಬೇಕು ಎನ್ನುವ ಬಾಲ್ಯದ ಕನಸು ನನಸಾಯಿತು’ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಆರ್ಆರ್ಆರ್ ಸಿನಿಮಾ ನಿರ್ಮಾಣ ಸಂಸ್ಥೆ ಡಿವಿವಿ ಮೂವಿಸ್ ಅನ್ನು ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಸಾಕಷ್ಟು ಕುತೂಹಲ ಹುಟ್ಟಿಸಿದ್ದಾರೆ.
ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದಕ್ಕೆ ಇತ್ತೀಚೆಗೆ ಉತ್ತರ ಸಿಕ್ಕಿತ್ತು. 2022ರ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ‘ಕೆಜಿಎಫ್ 2’ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ವೈರಸ್ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಈ ಚಿತ್ರದ ಕೊನೆಯ ಹಂತದ ಕೆಲಸದಲ್ಲಿ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ ಬೆಡಗಿಗೆ ‘ಸಲಾರ್’ ಚಿತ್ರದಲ್ಲಿ ಪ್ರಶಾಂತ್ ನೀಲ್ ಚಾನ್ಸ್ ಕೊಟ್ಟಿದ್ದು ನಿಜವೇ? ಇಲ್ಲಿದೆ ಅಸಲಿಯತ್ತು
Published On - 4:54 pm, Fri, 15 October 21