‘ಕನ್ನಡ ಬಿಗ್ ಬಾಸ್ ಸೀಸನ್ 8’ರ ಮೊದಲ ಇನ್ನಿಂಗ್ಸ್ನ ಆರಂಭದ ದಿನಗಳಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಚೆನ್ನಾಗಿಯೇ ಇದ್ದರು. ಪ್ರಶಾಂತ್ ಅವರನ್ನು ಮಂಜು ಪ್ರೀತಿಯಿಂದ ಮಾವ ಎಂದು ಕರೆಯುತ್ತಿದ್ದರು. ಚಕ್ರವರ್ತಿ ಚಂದ್ರಚೂಡ್ ಯಾವಾಗ ಮನೆ ಒಳಗೆ ಎಂಟ್ರಿ ಕೊಟ್ಟರೋ ಅಂದಿನಿಂದ ಮಂಜು ಹಾಗೂ ಪ್ರಶಾಂತ್ ನಡುವೆ ಯಾವುದೂ ಸರಿ ಇಲ್ಲ. ಆದರೆ, ಈಗ ಇಬ್ಬರೂ ಒಂದಾಗಿದ್ದಾರೆ. ಅದೆಷ್ಟರ ಮಟ್ಟಿಗೆ ಎಂದರೆ, ಮಂಜುಗೆ ಕೈತುತ್ತು ತಿನ್ನಿಸುವಷ್ಟು.
ಬಿಗ್ ಬಾಸ್ ಎರಡನೆ ಇನ್ನಿಂಗ್ಸ್ನಲ್ಲಿ ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ನಡುವೆ ದ್ವೇಷ ಮುಂದುವರಿದಿತ್ತು. ಮೊದಲ ವಾರದಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್ ಆಡಿದ ಮಾತುಗಳು ಪ್ರಶಾಂತ್ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ, ಸಿಕ್ಕಸಿಕ್ಕಲ್ಲಿ ಅವರು ಜಗಳವಾಡುತ್ತಿದ್ದರು. ಆದರೆ, ಇದು ತಪ್ಪು ಅನ್ನೋದು ಪ್ರಶಾಂತ್ಗೆ ಅರಿವಾದಂತೆ ಕಾಣುತ್ತಿದೆ. ಈ ಕಾರಣಕ್ಕೆ ಅವರು ಮಂಜು ಸೇರಿ ಮನೆಯ ಎಲ್ಲಾ ಸದಸ್ಯರ ಜತೆ ಮೃದುವಾಗಿ ನಡೆದುಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಅನುಸಾರ, ‘ವಿಜಯ ಯಾತ್ರೆ’ ತಂಡದ ಇಬ್ಬರು ಸದಸ್ಯರು, ‘ನಿಂಗ್ ಐತೆ’ ತಂಡದ ಸದಸ್ಯರಿಗೆ ಊಟ ಮಾಡಿಸಬೇಕು. ವಿಜಯ ಯಾತ್ರೆ ತಂಡದ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಅವರು ಮಂಜುಗೆ ಕರೆದು ಕರೆದು ಊಟ ಮಾಡಿಸಿದ್ದಾರೆ. ಪ್ರಶಾಂತ್ ಅವರಂತೂ ಮಂಜುಗೆ ಬಹಳ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ್ದಾರೆ. ಈ ಮೂಲಕ ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿರೋದು ಸಾಬೀತಾಗಿದೆ. ಮನೆಯಲ್ಲಿ ಈ ಮೊದಲು ಹಾವು ಮುಂಗುಸಿಯಂತೆ ಇದ್ದ ಇಬ್ಬರೂ ಈಗ ತುಂಬಾನೇ ಬದಲಾಗಿದ್ದಾರೆ ಎನ್ನುತ್ತಿದ್ದಾರೆ ವೀಕ್ಷಕರು. ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಹಂಚಿಕೊಂಡಿದ್ದು, ಇಂದು (ಜುಲೈ 15) ಪೂರ್ತಿ ಎಪಿಸೋಡ್ ಪ್ರಸಾರವಾಗಲಿದೆ.
ಚಕ್ರವರ್ತಿ ಅವರಿಂದ ಪ್ರಶಾಂತ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪ್ರಶಾಂತ್ ಕೂಲ್ ಆಗಿರೋಕು ಇದೂ ಕೂಡ ಒಂದು ಕಾರಣ ಇದ್ದರೂ ಇರಬಹುದು.
ಇದನ್ನೂ ಓದಿ: ಪ್ರಶಾಂತ್-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ
ಬಿಗ್ ಬಾಸ್ನಿಂದ ರಘು ಎಲಿಮಿನೇಟ್ ಆಗೋಕೆ ಕಾರಣವಾಯ್ತು ಈ ಒಂದು ವಿಚಾರ
Published On - 2:42 pm, Thu, 15 July 21