ಬಿಗ್​ ಬಾಸ್​ ಮನೆಯಲ್ಲಿ ತುಪ್ಪದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ ಪ್ರಶಾಂತ್​ಗೆ ಗೆಳೆಯರು ಕೊಟ್ರು ಅಚ್ಚರಿಯ ಗಿಫ್ಟ್​

ಬಿಗ್​ ಬಾಸ್​ ಮನೆಯಲ್ಲಿ ತುಪ್ಪ ಖಾಲಿ ಮಾಡಿದ್ದಾರೆ ಎನ್ನುವ ಆರೋಪ ಪ್ರಶಾಂತ್​ ಸಂಬರಗಿ ಅವರ ಮೇಲೆ ಬಂದಿತ್ತು. ಅಲ್ಲದೆ, ಮನೆಯಲ್ಲಿ ಎರಡು ದಿನ ಈ ವಿಚಾರ ಭಾರೀ ಚರ್ಚೆ ಆಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ತುಪ್ಪದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ ಪ್ರಶಾಂತ್​ಗೆ ಗೆಳೆಯರು ಕೊಟ್ರು ಅಚ್ಚರಿಯ ಗಿಫ್ಟ್​
ಪ್ರಶಾಂತ್​ ಸಂಬರಗಿ
Edited By:

Updated on: May 14, 2021 | 7:19 AM

ಪ್ರಶಾಂತ್​ ಸಂಬರಗಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡವರು. ಅವರು ಬಿಗ್​ ಬಾಸ್​ ಮನೆಗೆ ಹೋಗುವುದಕ್ಕೂ ಮೊದಲು ಸಾಕಷ್ಟು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದರು. ಸಾಕಷ್ಟು ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಂಡಿದ್ದರು. ಹೀಗಾಗಿ, ಬಿಗ್​ ಬಾಸ್​ ಮನೆಗೆ ಸೇರಿದ ನಂತರ ಅವರು ವಿವಾದ ಮಾಡಿಯೇ ಮಾಡುತ್ತಾರೆ ಎನ್ನುವುದು ಅನೇಕರ ನಂಬಿಕೆ ಆಗಿತ್ತು. ಮನೆಯಲ್ಲಿ ಸದಾ ಧ್ವನಿ ಏರಿಸಿಕೊಂಡು ಮಾತನಾಡುವ ಪ್ರಶಾಂತ್​ ತುಪ್ಪದ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದರು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಅವರಿಗೆ ಅಚ್ಚರಿಯ ಗಿಫ್ಟ್ ಒಂದು ಸಿಕ್ಕಿದೆ.

ಬಿಗ್​ ಬಾಸ್​ ಮನೆಯಲ್ಲಿ ತುಪ್ಪ ಖಾಲಿ ಮಾಡಿದ್ದಾರೆ ಎನ್ನುವ ಆರೋಪ ಪ್ರಶಾಂತ್​ ಸಂಬರಗಿ ಅವರ ಮೇಲೆ ಬಂದಿತ್ತು. ಅಲ್ಲದೆ, ಮನೆಯಲ್ಲಿ ಎರಡು ದಿನ ಈ ವಿಚಾರ ಭಾರೀ ಚರ್ಚೆ ಆಗಿತ್ತು. ಇದಕ್ಕೆ ಪ್ರಶಾಂತ್​ ತುಂಬಾನೇ ಬೇಸರಗೊಂಡಿದ್ದರು. ಅಷ್ಟೇ ಅಲ್ಲ, ‘ತುಪ್ಪಾ ತಿಂದಿದ್ದೇ ತಪ್ಪಾ?’ ಎನ್ನುವ ಪುಸ್ತಕ ಬರೆಯುವುದಾಗಿ ಹೇಳಿದ್ದರು. ವೀಕೆಂಡ್​ನಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

ಈಗ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಪ್ರತೀ ಸ್ಪರ್ಧಿಗಳು ಲೈವ್​​ನಲ್ಲಿ ಬಂದು ಅಭಿಮಾನಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಪ್ರಶಾಂತ್​ ಸಂಬರಗಿ ಕೂಡ ಕಲರ್ಸ್​ ಕನ್ನಡ ವಾಹಿನಿ ಫೇಸ್​ಬುಕ್​ಲೈವ್​ನಲ್ಲಿ ಬಂದು ಮಾತನಾಡಿದ್ದಾರೆ. ಈ ವೇಳೆ ಅವರು ಗೆಳೆಯರು ಕಳಿಸಿಕೊಟ್ಟ ವಸ್ತು ಒಂದರ ಬಗ್ಗೆ ಮಾತನಾಡಿದ್ದಾರೆ.

ನನ್ನ ಬೆಸ್ಟ್​ ಫ್ರೆಂಡ್ಸ್​ 5 ಕೆಜಿ ತುಪ್ಪ ಕಳಿಸಿಕೊಟ್ಟಿದ್ದಾರೆ. ನೀನು ತುಂಬಾ ಸಣ್ಣ ಆಗಿದೀಯಾ. ಅಲ್ಲಿ ನಿನಗೆ ಊಟ ಸರಿ ಸಿಕ್ಕಿದೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಹೀಗಾಗಿ, ಇದನ್ನು ಬಳಸಿಕೋ ಎಂದು ಕೊಟ್ಟಿದ್ದಾರೆ. ಅವರು ಸರ್ಕ್ಯಾಸ್ಟಿಕ್​ ಆಗಿ ತಂದುಕೊಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ಕೊಟ್ಟಿದ್ದಾರೆ ಎಂದು ಪ್ರಶಾಂತ್ ಲೈವ್​ನಲ್ಲಿ ಹೇಳಿಕೊಂಡರು.

ಇದೇ ಲೈವ್​ನಲ್ಲಿ ಮಂಜು ಬಗ್ಗೆ ಪ್ರಶಾಂತ್​ ಮಾತನಾಡಿದ್ದಾರೆ. ‘ಮಂಜು ಸ್ಕ್ರಿಪ್ಟೆಡ್​ ಲೈನ್​ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದರು. ಹೀಗಾಗಿ, ಬಿಗ್​ ಬಾಸ್​ ಮನೆಯಲ್ಲಿ ಅವರಿಗೆ ಕಷ್ಟವಾಗುತ್ತಿತ್ತು. ಯಾವುದಾದರೂ ಸಿನಿಮಾ ತೆಗೆದುಕೊಂಡರೆ ಹೀರೋ ಹೀರೋನೆ, ಕಾಮಿಡಿಯನ್​ ಕಾಮಿಡಿಯನ್ನೇ. ಕಾಮಿಡಿಯನ್​ ಯಾವಾಗಲೂ ಹೀರೋ ಆಗೋಕೆ ಆಗಲ್ಲ. ಮಂಜು ಅವರ ಸ್ಟಫ್​ ಬರುಬರುತ್ತಾ ಕಡಿಮೆ ಆಯಿತು’ ಎಂದು ಪ್ರಶಾಂತ್ ಹೇಳಿದ್ದರು.

ಇದನ್ನೂ ಓದಿ: ಮಂಜು ಕೇವಲ ಕಾಮಿಡಿಯನ್​, ಹೀರೋ ಆಗಲ್ಲ; ಮನೆಯಿಂದ ಹೊರ ಬಂದ ಸಂಬರಗಿ ಮಾತು

‘ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು’; ಕೊನೆಯ ದಿನ ಅಚ್ಚರಿಯ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ಸಂಬರಗಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us