ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ತುಂಬಾನೇ ಸ್ಟ್ರೆಟಿಜಿಕ್​ ಆಗಿ ಆಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಜತೆ ಸೇರಿಕೊಂಡು ಯಾರನ್ನು ಹೇಗೆ ಸೋಲಿಸಬೇಕು ಎನ್ನುವುದನ್ನು ಸಂಬರಗಿ ಚರ್ಚೆ ಮಾಡುತ್ತಲೇ ಇರುತ್ತಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?
ಪ್ರಶಾಂತ್​ ಸಂಬರಗಿ
Edited By:

Updated on: Apr 19, 2021 | 8:43 AM

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಅತಿ ಹೆಚ್ಚು ಸುಳ್ಳು ಹೇಳುತ್ತಾರೆ. ಒಬ್ಬರ ಎದುರು ಒಮ್ಮೆ ಒಳ್ಳೆ ರೀತಿಯಲ್ಲಿ ನಡೆದುಕೊಂಡರೆ ಹಿಂದಿನಿಂದ ಅವರ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಮನೆ ಮಂದಿಗೆಲ್ಲ ಗೊತ್ತಾದರೂ ಸುಮ್ಮನಿದ್ದಾರೆ. ಆದರೆ, ವೀಕ್ಷಕರು ಇದೆಲ್ಲವನ್ನೂ ಗಮನಿಸುತ್ತಲೇ ಇರುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ಗೆ ತೀವ್ರ ಅವಮಾನ ಆಗುವಂತಹ ಘಟನೆ ಒಂದು ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ತುಂಬಾನೇ ಸ್ಟ್ರೆಟಿಜಿಕ್​ ಆಗಿ ಆಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಜತೆ ಸೇರಿಕೊಂಡು ಯಾರನ್ನು ಹೇಗೆ ಸೋಲಿಸಬೇಕು ಎನ್ನುವುದನ್ನು ಸಂಬರಗಿ ಚರ್ಚೆ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ದಿವ್ಯಾ ಸುರೇಶ್​ ಬಳಿ ತೆರಳಿ ಒಳ್ಳೆಯ ಮಾತನಾಡುವ ಚಕ್ರವರ್ತಿ ನಂತರ ಹಿಂದಿನಿಂದ ಅವರ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ.

ವೀಕ್ಷಕರು ಬಿಗ್​ ಬಾಸ್​ ಮನೆ ಸ್ಪರ್ಧಿಗಳ ಜತೆ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಕಾಲರ್​ ಒಬ್ಬರು ಅರವಿಂದ್​ ಜತೆ ಮಾತನಾಡಿದ್ದರು. ಯುಗಾದಿ ಹಬ್ಬದ ದಿನದಂದು ಅರವಿಂದ್​ ಸಣ್ಣ ವಿಚಾರಕ್ಕೆ ಪ್ರಶಾಂತ್​ ಜತೆ ಜಗಳ ಮಾಡಿಕೊಂಡಿದ್ದರು. ದೂರವಾಣಿ ಕರೆ ಮಾಡಿದವರು ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಅಷ್ಟೇ ಅಲ್ಲ, ಪ್ರಶಾಂತ್​ಗೆ ಅವಮಾನ ಕೂಡ ಮಾಡಿದ್ದರು.

ಪ್ರಶಾಂತ್​ ಸುಳ್ಳುಗಾರ. ಮುಂದೆ ಒಂದು ರೀತಿ ಇರುತ್ತಾರೆ, ಹಿಂದೊಂದು ರೀತಿ ನಡೆದುಕೊಳ್ಳುತ್ತಾರೆ. ಅದೇನೆ ಇರಬಹುದು. ಆದರೆ, ಯುಗಾದಿ ದಿನ ಅವರು ಏನನ್ನೂ ಮಾತನಾಡಿರಲಿಲ್ಲವಲ್ಲ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದರು. ಹೌದು, ಅವರ ಜತೆ ಕೂಗಾಡಬಾರದಿತ್ತು ಎಂದು ಅರವಿಂದ್ ಒಪ್ಪಿಕೊಂಡರು.

ಸುಳ್ಳುಗಾರ ಎಂದು ಹೇಳುವಾಗ ಪ್ರಶಾಂತ್​ ಮುಖ ಕೆಂಪುಗಟ್ಟಿತ್ತು. ಅವರಿಗೆ ಈ ಪದ ಅವಮಾನ ತರಿಸಿದೆ. ವೀಕ್ಷಕರು ತಮ್ಮನ್ನು ಗಮನಿಸುತ್ತಿರುವ ವಿಚಾರ ಅವರಿಗೆ ಮನದಟ್ಟಾದಂತೆ ಕಾಣುತ್ತಿದೆ.

ಇದನ್ನೂ ಓದಿ: Kichcha Sudep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us