ನಾನು ಶಮಂತ್​ಗೆ ಲೈನ್​ ಹೊಡಿತಿದೀನಿ, ಆದರೆ…; ಮನದಾಳದ ಮಾತು ಹೇಳಿಕೊಂಡ ಪ್ರಿಯಾಂಕಾ

ಈಗೆಲ್ಲ ಲೈನ್​ ವರ್ಕೌಟ್​ ಆಗಲ್ಲ. ಇಂದಿನ ಕಾಲದಲ್ಲಿ ಲವ್ ಯೂ ಅಂತ ಹೇಳದೆ ಪ್ರೀತಿ ಮಾಡುತ್ತಾರೆ. ಮನಸ್ಸಿನ ಮೂಲಕವೇ ಮಾತನಾಡಿಕೊಳ್ಳುತ್ತಾರೆ ಎಂದು ಪ್ರಿಯಾಂಕಾ ಹೇಳಿದರು.

ನಾನು ಶಮಂತ್​ಗೆ ಲೈನ್​ ಹೊಡಿತಿದೀನಿ, ಆದರೆ...; ಮನದಾಳದ ಮಾತು ಹೇಳಿಕೊಂಡ ಪ್ರಿಯಾಂಕಾ
ಶಮಂತ್​-ಪ್ರಿಯಾಂಕಾ
Edited By:

Updated on: May 08, 2021 | 7:20 AM

ಬಿಗ್​ ಬಾಸ್​ ಮನೆಯಲ್ಲಿ ಕೆಲವೊಂದು ಲವ್​​ಸ್ಟೋರಿಗಳು ಅದಾಗೇ ಹುಟ್ಟಿಕೊಳ್ಳುತ್ತವೆ. ಇನ್ನೂ ಕೆಲವು ಲವ್​ಸ್ಟೋರಿಗಳನ್ನು ಕೆಲವರು ಹುಟ್ಟುಹಾಕಲು ಪ್ರಯತ್ನಿಸುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲೂ ಅದೇ ನಡೆಯುತ್ತಿದೆ. ಶಮಂತ್​ ಬ್ರೋ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರನ್ನು ಜೋಡಿ ಮಾಡಲು ಚಕ್ರವರ್ತಿ ಚಂದ್ರಚೂಡ್​ ಪ್ರಯತ್ನಿಸಿದ್ದಾರೆ. ಈ ವೇಳೆ ಪ್ರಿಯಾಂಕಾ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡರು.

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಮಾತನಾಡುತ್ತಿದ್ದರು. ‘ಲೈನ್​ ಹೊಡ್ಯೋದು ಅಂದರೆ ಏನು’ ಎಂದು ಪ್ರಿಯಾಂಕಾ ಬಳಿ ಚಕ್ರವರ್ತಿ ಕೇಳಿದ್ದಾರೆ. ‘ಲೈನ್​ ಹೊಡೆಯೋದು ಅಂದ್ರೆ ನಾನು ಶಮಂತ್​ಗೆ ಹೊಡಿತೀನಲ್ಲ ಅದು. ಅವನು ಏನೋ ಮಾಡ್ತಾ ಇರುತ್ತಾನೆ. ನಾನು ಏನೋ ಮಾಡ್ತಾ ಇರುತ್ತೇನೆ. ಇಬ್ಬರೂ ಒಮ್ಮೆ ನೋಡ್ತೀವಿ. ಆಗ ನಾನು ನಗುತ್ತೇನೆ. ನನ್ನ ಪ್ರಕಾರ ಅದು ಲೈನ್​ ಹೊಡ್ಯೋದು’ ಎಂದು ಪ್ರಿಯಾಂಕಾ ವಿವರಣೆ ನೀಡಿದರು.

ಈ ಮಾತಿಗೆ ಚಕ್ರವರ್ತಿ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ, ‘ಶಮಂತ್ ಒಳ್ಳೆಯ ಹುಡುಗ, ನೀನು ಆತನಿಗೆ ಲೈನ್​ ಹೊಡೆಯಬಹುದು’ ಎಂದರು. ಈ ವೇಳೆ ಪ್ರಿಯಾಂಕಾ ಮನದಾಳದ ಮಾತನ್ನು ಹೇಳಿಕೊಂಡರು. ನನಗೆ ಅವನು ಸೂಟ್​ ಆಗಲ್ಲ. ನನಗೆ ಇನ್ನೂ ಚೆನ್ನಾಗಿರೋ ಹುಡುಗಬೇಕು ಎಂದು ಮಾತು ಆರಂಭಿಸಿದರು.

‘ಈಗೆಲ್ಲ ಲೈನ್​ ವರ್ಕೌಟ್​ ಆಗಲ್ಲ. ಇಂದಿನ ಕಾಲದಲ್ಲಿ ಲವ್ ಯೂ ಅಂತ ಹೇಳದೆ ಪ್ರೀತಿ ಮಾಡುತ್ತಾರೆ. ಮನಸ್ಸಿನ ಮೂಲಕವೇ ಮಾತನಾಡಿಕೊಳ್ಳುತ್ತಾರೆ. ಇಷ್ಟ ಆದರೆ ಲವ್​ ಯೂ ಹೇಳೋದೇಕೆ? ಮಾತನಾಡದೆಯೂ ಇಬ್ಬರಿಗೂ ಗೊತ್ತಾಗುತ್ತದೆ. ನಡೆದುಕೊಳ್ಳುವ ರೀತಿಯಲ್ಲೇ ಗೊತ್ತಾಗುತ್ತದೆ,’ ಎಂದರು ಪ್ರಿಯಾಂಕಾ.

ಈ ವೇಳೆ ಪ್ರೀತಿ ಎಂದರೇನು ಎಂದು ಚಕ್ರರ್ತಿ ಪ್ರಶ್ನೆ ಎಸೆದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ‘ಪ್ರೀತಿ ಎಂದರೆ, ಲವ್, ನಂಬಿಕೆ, ವಾತ್ಸಲ್ಯ, ವಿಶ್ವಾಸ, ಮಮತೆ. 21ರಿಂದ 26ವರೆಗೆ ಆಗೋದು ಮಾತ್ರ ನಿಜವಾದ ಲವ್’​ ಎಂದರು.

ಚಕ್ರವರ್ತಿ ಚಂದ್ರಚೂಡ್​ ಸುತ್ತಿ-ಬಳಸಿ ಶಮಂತ್​ ವಿಷಯಕ್ಕೆ ಪ್ರೀತಿಯನ್ನು ಎಳೆದುಕೊಂಡು ಹೋಗುತ್ತಿದ್ದರು. ಇದು ಪ್ರಿಯಾಂಕಾಗೆ ಅಸಮಾಧಾನ ತರಿಸಿದೆ. ನೀವು ಯಾವುದಾದರೂ ವಿಚಾರ ಹೇಳುವಾಗ ಅದನ್ನು ನಾನು ನೆಗ್ಲೆಟ್​ ಮಾಡುತ್ತೇನೆ ಎಂದರೆ ಅದು ನನಗೆ ಇಷ್ಟವಿಲ್ಲ ಎಂದರ್ಥ ಎಂದು ಕಠಿಣವಾಗಿಯೇ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ; ಬಿಗ್​ ಬಾಸ್​ ಮನೆಯಲ್ಲಿ ಶಮಂತ್​-ಪ್ರಿಯಾಂಕಾ ಪ್ರೇಮಕಥೆ ಆರಂಭ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us