ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ; ಬಿಗ್​ ಬಾಸ್​ ಮನೆಯಲ್ಲಿ ಶಮಂತ್​-ಪ್ರಿಯಾಂಕಾ ಪ್ರೇಮಕಥೆ ಆರಂಭ?

ಮಂಜು ಪಾವಗಡ ಜತೆ ದಿವ್ಯಾ ಹೆಚ್ಚು ಆಪ್ತರಾದರು. ದಿವ್ಯಾ ಉರುಡುಗ ಅವರು ಅರವಿಂದ್​ ಕೆ.ಪಿ. ಜತೆ ಹೆಚ್ಚು ಕ್ಲೋಸ್​ ಆದರು. ಹೀಗಾಗಿ, ಶಮಂತ್​ಗೆ ಜೋಡಿ ಆಗೋಕೆ ಯಾರೊಬ್ಬರೂ ಸಿಕ್ಕಿಲ್ಲ.

ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ; ಬಿಗ್​ ಬಾಸ್​ ಮನೆಯಲ್ಲಿ ಶಮಂತ್​-ಪ್ರಿಯಾಂಕಾ ಪ್ರೇಮಕಥೆ ಆರಂಭ?
ಶಮಂತ್​-ಪ್ರಿಯಾಂಕಾ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 06, 2021 | 4:13 PM

ಬಿಗ್​ ಬಾಸ್ ಎಂಟನೇ ಸೀಸನ್​ನಲ್ಲಿ ಈಗಾಗಲೇ ಎರಡು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಇದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಹೀಗಿರುವಾಗಲೇ ಮತ್ತೊಂದು ಲವ್​ಸ್ಟೋರಿ ಹುಟ್ಟಿಕೊಳ್ಳುವ ಎಲ್ಲಾ ಲಕ್ಷಣ ಗೋಚರವಾಗುತ್ತಿದೆ! ಅದು ಶಮಂತ್​ ಬ್ರೋ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ನಡುವೆ ಅನ್ನೋದು ವಿಶೇಷ.

ಬಿಗ್​ ಬಾಸ್​ ಮನೆ ಸೇರಿದ ನಂತರದಲ್ಲಿ ದಿವ್ಯಾ ಸುರೇಶ್​ ಹಿಂದೆ ಬಿದ್ದಿದ್ದರು ಶಮಂತ್. ಆದರೆ, ಅವರ ಲೆಕ್ಕಾಚಾರ ತಲೆಕೆಳಗಾಗಿತ್ತು. ಮಂಜು ಪಾವಗಡ ಜತೆ ದಿವ್ಯಾ ಹೆಚ್ಚು ಆಪ್ತರಾದರು. ದಿವ್ಯಾ ಉರುಡುಗ ಅವರು ಅರವಿಂದ್​ ಕೆ.ಪಿ. ಜತೆ ಹೆಚ್ಚು ಕ್ಲೋಸ್​ ಆದರು. ಹೀಗಾಗಿ, ಶಮಂತ್​ಗೆ ಜೋಡಿ ಆಗೋಕೆ ಯಾರೊಬ್ಬರೂ ಸಿಕ್ಕಿಲ್ಲ.

ಇತ್ತೀಚೆಗೆ ಪ್ರಿಯಾಂಕಾ ತಿಮ್ಮೇಶ್​ ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಮನೆಗೆ ಬಂದಿದ್ದರು. ಇದು ಶಮಂತ್​ಗೆ ಖುಷಿ ನೀಡಿತ್ತು. ಅಲ್ಲದೆ, ಅವರ ಜತೆ ಹೆಚ್ಚು ಕ್ಲೋಸ್​ ಆಗಿ ವರ್ತಿಸೋಕೆ ಪ್ರಾರಂಭಿಸಿದ್ದರು. ಇದು ಚಕ್ರವರ್ತಿ ಚಂದ್ರಚೂಡ್​ ಗಮನಕ್ಕೆ ಬಂದಿದೆ. ಮೇ 5ರ ಎಪಿಸೋಡ್​ನಲ್ಲಿ ಈ ಬಗ್ಗೆ ಚರ್ಚೆ ಆಗಿದೆ.

ಚಕ್ರವರ್ತಿ, ಶಮಂತ್, ಪ್ರಿಯಾಂಕಾ, ಪ್ರಶಾಂತ್​ ಸಂಬರಗಿ ಕುಳಿತು ಮಾತನಾಡುತ್ತಿದ್ದರು. ಆಗ ಚಕ್ರವರ್ತಿ, ಶಮಂತ್​ ಮೇಲೆ ಪ್ರಿಯಾಂಕಾಗೆ ಒಂದು ಅಫೆಕ್ಷನ್​ ಇದೆ. ನಾನು ಕಣ್ಣನ್ನು ನೋಡಿಯೇ ಎಲ್ಲವನ್ನೂ ಹೇಳುತ್ತೇನೆ ಎಂದರು​. ಆಗ ಪ್ರಶಾಂತ್​ ಸಂಬರಗಿ ನಾನೇ ನಿಂತು ಮದುವೆ ಮಾಡಿಸುತ್ತೇನೆ ಎನ್ನುವ ಭರವಸೆ ಕೂಡ ನೀಡಿದರು.

ವಿಚಿತ್ರ ಎಂದರೆ ಈ ವಿಚಾರವನ್ನು ಶಮಂತ್​ ಗಂಭೀರವಾಗಿ ಸ್ವೀಕರಿಸಬೇಕಿತ್ತು. ಆದರೆ, ಅವರು ಅಷ್ಟಾಗಿ ಚಿಂತಿಸಿಲ್ಲ. ಇದನ್ನು ತುಂಬಾನೇ ಸೀರಿಯಸ್​ ಆಗಿ ತೆಗೆದುಕೊಂಡಿದ್ದು ಚಕ್ರವರ್ತಿ. ನಿನಗೆ ಶಮಂತ್​ ಮೇಲೆ ಪ್ರೀತಿ ಇದೆ ಅಲ್ಲವೇ? ಇಂದೇ ನಿರ್ಧಾರವಾಗಲಿ, ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಪ್ರಿಯಾಂಕಾ ಅವರನ್ನು ಚಕ್ರವರ್ತಿ ಒತ್ತಾಯಿಸಿದರು.

ಇದಕ್ಕೆ ಪ್ರಿಯಾಂಕಾ ಇರಿಟೇಷನ್​ಗೆ ಒಳಗಾದರು. ಏನೋ ಹಾಸ್ಯ ಮಾಡುತ್ತಿದ್ದೀರ ಎಂದುಕೊಂಡೆ. ನೀವು ನೋಡಿದ್ರೆ ಗಂಭೀರವಾಗಿದೀರಲ್ಲ ಎಂದು ಪ್ರಿಯಾಂಕಾ ಹೇಳಿದಾಗ, ನಾನು ನಿಮ್ಮ ಬಗ್ಗೆ ಕೇರ್​ ಮಾಡುತ್ತಿದ್ದೆನೆ ಎನ್ನುವ ಉತ್ತರ ಚಕ್ರವರ್ತಿ ಕಡೆಯಿಂದ ಬಂತು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ, ನನ್ನನ್ನು ಕೇರ್​ ಮಾಡೋಕೆ ಮನೆಯಲ್ಲಿ ಜನರಿದ್ದಾರೆ. ನನ್ನನ್ನು ಕೇರ್​ ಮಾಡೋಕೆ ನೀವು ಯಾರು ಎಂದು ಪ್ರಿಯಾಂಕಾ ಸಿಟ್ಟಿನಿಂದಲೇ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ಕನ್ನಡ ಬಿಗ್​ ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್​!

 ಹೆಣ್ಣಿನ ಶಾಪ; ಈ ವಾರ ಮನೆಯಿಂದ ಹೊರ ಹೋಗೋ ಸ್ಪರ್ಧಿ ಶಮಂತ್?

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?