ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಲಕ್ಷಾಂತರ ಟಿಕೆಟ್ಗಳು ಮಾರಾಟ ಆಗಿವೆ. ಇದು ಸಿನಿಮಾ ಹೈಪ್ಗೆ ಸೃಷ್ಟಿ ಆಗಿರೋ ಉದಾಹರಣೆ. ಈ ಚಿತ್ರ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವ ಸಾಧ್ಯತೆ ಇದೆ. ಈಗ ‘ಪುಷ್ಪ 2’ ಚಿತ್ರ 2ಡಿ ಜೊತೆ 3ಡಿಯಲ್ಲೂ ರಿಲೀಸ್ ಆಗಬೇಕಿತ್ತು. ಆರಂಭದಲ್ಲಿ ಇದಕ್ಕೆ ಬುಕಿಂಗ್ ಕೂಡ ಓಪನ್ ಆಗಿತ್ತು. ಆದರೆ, ಈಗ ಬುಕಿಂಗ್ ಸ್ಥಗಿತ ಮಾಡಲಾಗಿದೆ.
‘ಪುಷ್ಪ 2’ ಚಿತ್ರದ 3ಡಿ ವರ್ಷನ್ ರಿಲೀಸ್ ಮಾಡೋದಾಗಿ ತಂಡ ಹೇಳಿಕೊಂಡಿತ್ತು. ಆದರೆ, ಈಗ ತಂಡ ತನ್ನ ನಿಲುವು ಬದಲಿಸಿದೆ. ಕಾರಣಾಂತರಗಳಿಂದ ಈ ವಾರ ‘ಪುಷ್ಪ 2’ ಚಿತ್ರದ 3ಡಿ ವರ್ಷನ್ ರಿಲೀಸ್ ಆಗುತ್ತಿಲ್ಲ. ಈ ಬಗ್ಗೆ ಬಾಕ್ಸ್ ಆಫೀಸ್ ಪಂಡಿತ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದು ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಈಗಾಗಲೇ ತೆಲುಗು ಹಾಗೂ ಹಿಂದಿ 3ಡಿ ವರ್ಷನ್ ಬುಕಿಂಗ್ ಆಯ್ಕೆಯನ್ನು ‘ಬುಕ್ ಮೈ ಶೋ’ನಿಂದ ತೆಗೆದು ಹಾಕಲಾಗಿದೆ. ಮುಂದಿನ ವಾರಗಳಲ್ಲಿ 3ಡಿ ವರ್ಷನ್ ರಿಲೀಸ್ ಆಗುವ ಸಾಧ್ಯತೆ ಇದೆ. ‘ಪುಷ್ಪ’ ಚಿತ್ರ ಕೇವಲ 2ಡಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ‘ಪುಷ್ಪ 2’ ಚಿತ್ರವನ್ನು ತಂಡದವರು ಹೊಸ ರೀತಿಯಲ್ಲಿ ಬಿಡುಗಡೆ ಮಾಡುವ ಸಾಹಸಕ್ಕೆ ಮುಂದಾದರು. ಆದರೆ, ಈಗ ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
#BreakingNews… ‘PUSHPA 2’ *3D VERSION* NOT RELEASING THIS WEEK… The *3D version* of #Pushpa2 will not release this Thursday [5 Dec 2024]… The *2D version* will arrive as scheduled on 5 Dec 2024.
Additionally, there will be *no midnight shows* for the #Hindi version of… pic.twitter.com/AJn5T2LRtT
— taran adarsh (@taran_adarsh) December 3, 2024
ಇದನ್ನೂ ಓದಿ: ‘ಪುಷ್ಪ 2’ ಚಿತ್ರದ 10 ಸಾವಿರ ಟಿಕೆಟ್ ಗಿವ್ಅವೇ ಕೊಟ್ಟ ಎಬಿ ಡಿವಿಲಿಯರ್ಸ್
‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ಅವರ ನಿರ್ದೇಶನ ಇದೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಹವಾ ಸೃಷ್ಟಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.