ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್​ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ

Rashmika Mandanna Instagram: ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಆ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ 2.5 ಕೋಟಿ ಹಿಂಬಾಲಕರನ್ನು ಪಡೆದಿರುವುದಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ಗೆಲುವಿನ ಬೆನ್ನಲ್ಲೇ ಅವರಿಗೆ ಸಂಭ್ರಮಿಸಲು ಈ ಕಾರಣ ಕೂಡ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್​ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ
ರಶ್ಮಿಕಾ ಮಂದಣ್ಣ
Edited By:

Updated on: Oct 08, 2026 | 8:03 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ’ ಸಿನಿಮಾದ (Pushpa Movie) ಗೆಲುವಿನಲ್ಲಿ ತೇಲುತ್ತಿದ್ದಾರೆ. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಒಂದು ವರ್ಗದ ನೆಟ್ಟಿಗರು ಈ ಕೊಡಗಿನ ಕುವರಿಯನ್ನು ಯಾವಾಗಲೂ ಟ್ರೋಲ್​ ಮಾಡುತ್ತಾರೆ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವರ ಖ್ಯಾತಿ ಕಮ್ಮಿ ಆಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈಗ ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಬರೋಬ್ಬರಿ 25 ಮಿಲಿಯನ್​ಗಿಂತಲೂ (2.5 ಕೋಟಿ) ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಇದು ಅವರ ಸಂತಸಕ್ಕೆ ಕಾರಣ ಆಗಿದೆ. ಅದಕ್ಕಾಗಿ ಅವರು ಕುಣಿದು ಕುಪ್ಪಳಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಆ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಆಗಾಗ ಫ್ಯಾನ್ಸ್​ ಕೇಳುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಾರೆ. ಈ ಎಲ್ಲ ಕಾರಣದಿಂದ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2.5 ಕೋಟಿ ಜನರು ರಶ್ಮಿಕಾ ಮಂದಣ್ಣ ಅವರನ್ನು ಈಗ ಫಾಲೋ ಮಾಡುತ್ತಿದ್ದಾರೆ. ಈ ಮೈಲಿಗಲ್ಲು ಮುಟ್ಟಿರುವುದಕ್ಕೆ ಅವರು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ 2.5 ಕೋಟಿ ಹಿಂಬಾಲಕರನ್ನು ಪಡೆದಿರುವುದಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ಭರ್ಜರಿ ಗೆಲುವಿನ ಬೆನ್ನಲ್ಲೇ ಅವರಿಗೆ ಸಂಭ್ರಮಿಸಲು ಈ ಕಾರಣ ಕೂಡ ಸಿಕ್ಕಿದೆ. ರಶ್ಮಿಕಾ ಎಷ್ಟೇ ಸಾಧನೆ ಮಾಡಿದರೂ, ಅವರನ್ನು ಟ್ರೋಲ್​ ಮಾಡುವ ಒಂದು ವರ್ಗ ಇದ್ದೇ ಇದೆ. ಅವರು ಓವರ್​ ಆ್ಯಕ್ಟಿಂಗ್​ ಮಾಡುತ್ತಾರೆ ಎಂದು ಇತ್ತೀಚೆಗೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು.

ಟ್ರೋಲ್​ ಆಗಿದ್ದ ರಶ್ಮಿಕಾ:

ಕೆಲವೇ ದಿನಗಳ ಹಿಂದೆ ‘ಪುಷ್ಪ’ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ರಶ್ಮಿಕಾ ಅವರು ಹಿಂದಿಯಲ್ಲಿ ಮಾತನಾಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದನ್ನು ಕಂಡವರು ನೆಗೆಟಿವ್ ಕಮೆಂಟ್​ ಮಾಡಿದ್ದಾರೆ. ‘ಇವರ ಅದೃಷ್ಟ ಚೆನ್ನಾಗಿತ್ತು. ಅದೇ ಕಾರಣಕ್ಕೆ ಗೀತಾ ಗೋವಿಂದಂ, ಡಿಯರ್​ ಕಾಮ್ರೇಡ್​ ರೀತಿಯ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಇವರು ಹೇಗೆ ನ್ಯಾಷನಲ್​ ಕ್ರಶ್​ ಆಗಲು ಸಾಧ್ಯ? ಇವರಿಗಿಂತ ಚೆನ್ನಾಗಿ ಬೇರೆ ನಟಿಯರು ಇದ್ದಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ರಶ್ಮಿಕಾ ಅವರದ್ದು ಬರೀ ಓವರ್​ ಆ್ಯಕ್ಟಿಂಗ್​’ ಎಂದು ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇವರು ಓವರ್​ ಆ್ಯಕ್ಟಿಂಗ್​ನ ನ್ಯಾಷನಲ್​ ಕ್ರಶ್​’ ಎಂದು ಒಬ್ಬರು ಹೇಳಿದ್ದರೆ, ‘ರಶ್ಮಿಕಾ ವರ್ತನೆ ಕಿರಿಕಿರಿ ಎನಿಸುತ್ತದೆ’ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಈ ಲವ್​ ಅಪರಿಮಿತ’; ಫೋರ್ಬ್ಸ್​ ಪಟ್ಟಿಯಲ್ಲಿ ನಂ.1 ಆಗಿದ್ದಕ್ಕೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

 

Published On - 2:56 pm, Wed, 22 December 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us