ಯುಪಿ ಮಾಜಿ ಸಿಎಂ ಮಾಯಾವತಿ ಬಗ್ಗೆ ಕೀಳು ಜೋಕ್​ ಹೇಳಿ ಟ್ರೋಲ್​ ಆಗುತ್ತಿರುವ ‘ರಾಧೆ’ ನಟ ರಣದೀಪ್​ ಹೂಡಾ

ಒಬ್ಬ ಮಹಿಳೆ ಮೇಲೆ ನೀವು ಇಂಥ ಕೆಟ್ಟ ಮಾತುಗಳನ್ನು ಆಡುತ್ತೀರಿ ಎನ್ನುವುದಾದರೆ ನಿಮ್ಮ ಮನಸ್ಸಲ್ಲಿ ಎಷ್ಟು ಕೆಟ್ಟತನ ಇದೆ ಎಂಬುದು ಗೊತ್ತಾಗುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಣದೀಪ್​ ಹೂಡಾಗೆ ನೆಟ್ಟಿಗರು ಛಾಟಿ ಬೀಸುತ್ತಿದ್ದಾರೆ.

ಯುಪಿ ಮಾಜಿ ಸಿಎಂ ಮಾಯಾವತಿ ಬಗ್ಗೆ ಕೀಳು ಜೋಕ್​ ಹೇಳಿ ಟ್ರೋಲ್​ ಆಗುತ್ತಿರುವ ‘ರಾಧೆ’ ನಟ ರಣದೀಪ್​ ಹೂಡಾ
ರಣದೀಪ್​ ಹೂಡಾ, ಮಾಯಾವತಿ

Updated on: May 27, 2021 | 12:24 PM

ಬಾಲಿವುಡ್​ನ ಖ್ಯಾತ ನಟ ರಣದೀಪ್​ ಹೂಡಾ ಅವರು ಅತ್ಯುತ್ತಮ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಭಿನ್ನ ಪಾತ್ರಗಳ ಮೂಲಕ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಡೆಟ್​ ಭಾಯ್​’ ಸಿನಿಮಾದಲ್ಲಿ ರಣದೀಪ್​ ಹೂಡಾ ಮುಖ್ಯ ವಿಲನ್​ ಆಗಿ ಕಾಣಿಸಿಕೊಂಡು, ಫ್ಯಾನ್​ ಫಾಲೋಯಿಂಗ್​ ಹೆಚ್ಚಿಸಿಕೊಂಡರು. ಅದರ ಬೆನ್ನಲ್ಲೇ ಅವರಿಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಗಾದರೆ ರಣದೀಪ್ ಹೂಡ ಮಾಡಿದ ತಪ್ಪೇನು? ಒಂದು ಕೀಳು ಅಭಿರುಚಿಯ ಜೋಕ್​ ಹೇಳಿದ್ದು!

ರಾಧೆ ಸಿನಿಮಾದಲ್ಲಿ ತಮ್ಮ ನಟನೆಗೆ ಅಭಿಮಾನಿಗಳಿಂದ ಚಪ್ಪಾಳೆ ಪಡೆಯುತ್ತಿರುವ ರಣದೀಪ್​ ಹೂಡಾ ಅವರು ಈಗ ಸುಖಾಸುಮ್ಮನೆ ಒಂದು ಕಾಂಟ್ರವರ್ಸಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ ಅವರು ಕೆಟ್ಟದಾಗಿ ಮಾತನಾಡಿರುವ ಒಂದು ವಿಡಿಯೋ ವೈರಲ್​ ಆಗುತ್ತಿದೆ. ಆ ವಿಡಿಯೋದಲ್ಲಿ ಮಾಯಾವತಿ ಬಗ್ಗೆ ರಣದೀಪ್​ ಕೆಟ್ಟ ಜೋಕ್​ ಹೇಳುತ್ತಿರುವ ದೃಶ್ಯ ಇದೆ.

ಅಂದಹಾಗೆ, ಅದು ಹಲವು ವರ್ಷಗಳ ಹಿಂದೆಯೇ ನಡೆದ ಒಂದು ಕಾರ್ಯಕ್ರಮದ ವಿಡಿಯೋ. ಖಾಸಗಿ ಟಿವಿ ವಾಹಿನಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಣದೀಪ್​ ಹೂಡಾ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಮಾಯಾವತಿ ಕುರಿತಂತೆ ಕೆಟ್ಟದಾಗಿ ಜೋಕ್​ ಮಾಡಿದ್ದರು. ಆ ವಿಡಿಯೋವನ್ನು ನೆಟ್ಟಿಗರೊಬ್ಬರು ಈಗ ಶೇರ್​ ಮಾಡಿಕೊಂಡು ರಣದೀಪ್​ಗೆ ಛೀಮಾರಿ ಹಾಕಿದ್ದಾರೆ. ಬಳಿಕ ಅದು ಎಲ್ಲೆಡೆ ವೈರಲ್​ ಆಗುತ್ತಿದೆ. ಅದನ್ನು ಕಂಡವರೆಲ್ಲೆ ರಣದೀಪ್​ರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಿದ್ದಾರೆ.

ಈ ಮನುಷ್ಯನಿಗೆ ಏನಾಗಿದೆ? ರಣದೀಪ್​ ಹೂಡಾ ಅವರೇ, ನಿಮ್ಮ ಮೇಲಿದ್ದ ಎಲ್ಲ ಅಭಿಮಾನ ಇವತ್ತು ಕಳೆದು ಹೋಯಿತು. ಒಬ್ಬ ಮಹಿಳೆ ಮೇಲೆ ನೀವು ಇಂಥ ಕೆಟ್ಟ ಮಾತುಗಳನ್ನು ಆಡುತ್ತೀರಿ ಎನ್ನುವುದಾದರೆ ನಿಮ್ಮ ಮನಸ್ಸಲ್ಲಿ ಎಷ್ಟು ಕೆಟ್ಟತನ ಇದೆ ಎಂಬುದು ಗೊತ್ತಾಗುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ರಣದೀಪ್​ ಹೂಡಾ ಅವರನ್ನು ಜೈಲಿಗೆ ಕಳಿಸಬೇಕು ಎಂದು ಕೂಡ ಹಲವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ರಾಧೆ ಸಿನಿಮಾ ಕಳಪೆ ಎಂದ ನಟನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಲ್ಮಾನ್​ ಖಾನ್​

ಥಿಯೇಟರ್​ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್​ ಖಾನ್​ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ