Radhika Apte: ಕೊವಿಡ್​ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ; ಸುತ್ತಿಬಳಸಿ ಕಾಲೆಳೆದ ನಟ ವಿಜಯ್​ ವರ್ಮಾ

ರಾಧಿಕಾ ವ್ಯಾಕ್ಸಿನ್​ ಪಡೆಯುತ್ತಿರುವ ಫೋಟೋಗೆ ಪ್ರತಿಕ್ರಿಯಿಸಿರುವ​ ವಿಜಯ್​ ವರ್ಮಾ ಅವರು, ‘ನಿಮಗಾಗಿ ಒಂದು ಸ್ಟೋರಿ ಶೇರ್ ಮಾಡಿದ್ದೇನೆ ನೋಡಿ’ ಎಂದು ಕಮೆಂಟ್ ಮಾಡಿದ್ದಾರೆ.

Radhika Apte: ಕೊವಿಡ್​ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ; ಸುತ್ತಿಬಳಸಿ ಕಾಲೆಳೆದ ನಟ ವಿಜಯ್​ ವರ್ಮಾ
ರಾಧಿಕಾ ಆಪ್ಟೆ
Edited By:

Updated on: May 22, 2021 | 5:20 PM

ಕೊರೊನಾ ವೈರಸ್​ ಹಾವಳಿಗೆ ದೇಶವೇ ತತ್ತರಿಸಿದೆ. ನಿತ್ಯ ಸಾವಿರಾರು ಜನರು ಈ ಮಹಾಮಾರಿಗೆ ಬಲಿ ಆಗುತ್ತಿರುವುದು ನೋವಿನ ಸಂಗತಿ. ಈ ಸಂದರ್ಭದಲ್ಲಿ ಲಸಿಕೆ ಪಡೆಯುವುದು ಮಾತ್ರವೇ ಸೂಕ್ತ ಪರಿಹಾರ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಮುಂದೆ ಬಂದು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದ ನಂತರ ತಮ್ಮ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ಇತರರಿಗೂ ಲಸಿಕೆ ಪಡೆಯುವಂತೆ ಪ್ರೇರೇಪಿಸುತ್ತಿದ್ದಾರೆ. ನಟಿ ರಾಧಿಕಾ ಆಪ್ಟೆ ಅವರು ಇತ್ತೀಚೆಗೆ ವಾಕ್ಸಿನ್​ ಪಡೆದುಕೊಂಡಿದ್ದಾರೆ.

ಬಾಲಿವುಡ್​ನ ಹಲವು ಸಿನಿಮಾ ಮತ್ತು ವೆಬ್​ ಸರಣಿಗಳಲ್ಲಿ ನಟಿಸಿ ಫೇಮಸ್​ ಆಗಿರುವ ರಾಧಿಕಾ ಆಪ್ಟೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವ್ಯಾಕ್ಸಿನ್​ ಪಡೆದ ಬಳಿಕ ರಾಧಿಕಾ ಫೋಟೋ ಹಂಚಿಕೊಂಡಿದ್ದಾರೆ. ಅದಕ್ಕೆ ಫ್ಯಾನ್ಸ್​ ಮಾತ್ರವಲ್ಲದೆ ಕೆಲವು ಸೆಲೆಬ್ರಿಟಿಗಳು ಕೂಡ ಕಮೆಂಟ್​ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಓಕೆ ಕಂಪ್ಯೂಟರ್​’ ವೆಬ್​ ಸಿರೀಸ್​ನಲ್ಲಿ ವಿಜಯ್​ ವರ್ಮಾ ಮತ್ತು ರಾಧಿಕಾ ಆಪ್ಟೆ ತೆರೆ ಹಂಚಿಕೊಂಡಿದ್ದಾರೆ.

ರಾಧಿಕಾ ವ್ಯಾಕ್ಸಿನ್​ ಪಡೆಯುತ್ತಿರುವ ಫೋಟೋಗೆ ಪ್ರತಿಕ್ರಿಯಿಸಿರುವ​ ವಿಜಯ್​ ವರ್ಮಾ ಅವರು, ‘ನಿಮಗಾಗಿ ಒಂದು ಸ್ಟೋರಿ ಶೇರ್ ಮಾಡಿದ್ದೇನೆ ನೋಡಿ’ ಎಂದು ಕಮೆಂಟ್ ಮಾಡಿದ್ದಾರೆ. ಅದನ್ನು ಗಮನಿಸಿದ ಎಲ್ಲರೂ ವಿಜಯ್​ ವರ್ಮಾ ಅವರ ಇನ್​ಸ್ಟಾಗ್ರಾಮ್​ ಸ್ಟೋರಿಯತ್ತ ಕಣ್ಣು ಹಾಯಿಸಿದ್ದಾರೆ. ಸಾರಾಭಾಯ್​ ವರ್ಸಸ್​ ಸಾರಾಭಾಯ್​ ಕಾಮಿಡಿ ಧಾರಾವಾಯಿಯ ರತ್ನಾ ಪಾಟಕ್​ ಶಾ ಅವರ ಡೈಲಾಗ್​ ಅನುಕರಿಸಿರುವ ಒಂದು ಮೀಮ್​ ಅನ್ನು ವಿಜಯ್​ ಶೇರ್ ಮಾಡಿಕೊಂಡಿದ್ದಾರೆ. ‘ಜಾಬ್ಡ್​ ಎಂದು ಹೇಳು. ವ್ಯಾಕ್ಸಿನೇಡೆಟ್ ಎಂಬುದು ತೀರಾ ಮಿಡಲ್​ ಕ್ಲಾಸ್​ ಆಗುತ್ತದೆ’ ಎಂಬ ಡೈಲಾಗ್​ ಅದರಲ್ಲಿ ಇದೆ.

ಕೆಲವು ವರ್ಷಗಳ ಹಿಂದೆ ರಾಧಿಕಾ ಆಪ್ಟೆ ಅವರದ್ದು ಎನ್ನಲಾದ ನಗ್ನ ವಿಡಿಯೋ ಲೀಕ್ ಆಗಿತ್ತು. ಆ ಬಗ್ಗೆ ಅವರು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದರು. ‘ನನ್ನನ್ನು ಕೆಟ್ಟದಾಗಿ ಟ್ರೋಲ್​ ಮಾಡಲಾಯಿತು. ಅದು ನನ್ನ ಮೇಲೆ ಪರಿಣಾಮ ಬೀರಿತು. ನಾಲ್ಕು ದಿನ ನಾನು ಮನೆಯಿಂದ ಹೊರಬರಲೇ ಇಲ್ಲ. ಮಾಧ್ಯಮಗಳು ಏನು ಹೇಳುತ್ತವೆ ಎಂಬುದು ಅದಕ್ಕೆ ಕಾರಣ ಆಗಿರಲಿಲ್ಲ. ನನ್ನ ಡ್ರೈವರ್​, ವಾಚ್​ಮ್ಯಾನ್​ ಮುಂತಾದವರು ಆ ಇಮೇಜ್​ಗಳನ್ನು ನೋಡಿ ನಾನು ಎಂದು ಗುರುತಿಸಿದ್ದರು’ಎಂದು ರಾಧಿಕಾ ಆಪ್ಟೆ ಹೇಳಿದ್ದರು.​

ಇದನ್ನೂ ಓದಿ:

Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್​ ವಿರುದ್ಧ ತಿರುಗಿಬಿದ್ದ ವೈದ್ಯರು

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us