‘ಚಂದ್ರಮುಖಿ 2’ ಫಸ್ಟ್​ ಲುಕ್ ಬಿಡುಗಡೆ ಮಾಡಿದ ರಜನಿಕಾಂತ್​; ಗಣೇಶ ಚತುರ್ಥಿಗೆ ಬರಲಿದೆ ಬಹುನಿರೀಕ್ಷಿತ ಸಿನಿಮಾ

Chandramukhi 2: ರಾಘವ ಲಾರೆನ್ಸ್​ ಅಭಿನಯದ ‘ಚಂದ್ರಮುಖಿ 2’ ಚಿತ್ರಕ್ಕೆ ಪಿ. ವಾಸು ನಿರ್ದೇಶನ ಮಾಡಿದ್ದಾರೆ. ಚಂದ್ರಮುಖಿಯ ಪಾತ್ರಕ್ಕೆ ಕಂಗನಾ ರಣಾವತ್​ ಬಣ್ಣ ಹಚ್ಚಿದ್ದಾರೆ.

‘ಚಂದ್ರಮುಖಿ 2’ ಫಸ್ಟ್​ ಲುಕ್ ಬಿಡುಗಡೆ ಮಾಡಿದ ರಜನಿಕಾಂತ್​; ಗಣೇಶ ಚತುರ್ಥಿಗೆ ಬರಲಿದೆ ಬಹುನಿರೀಕ್ಷಿತ ಸಿನಿಮಾ
ರಾಘವ ಲಾರೆನ್ಸ್​

Updated on: Jul 31, 2023 | 6:31 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಚಂದ್ರಮುಖಿ 2’ (Chandramukhi 2) ಚಿತ್ರ ಕೂಡ ಇದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಅನೇಕ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಾಘವ ಲಾರೆನ್ಸ್​ (Raghava Lawrence) ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಅವರ ಗೆಟಪ್​ ಹೇಗಿರಲಿದೆ ಎಂಬುದು ಈಗ ರಿವೀಲ್​​ ಆಗಿದೆ. ‘ಚಂದ್ರಮುಖಿ 2’ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಸೂಪರ್​ ಸ್ಟಾರ್​ ರಜನಿಕಾಂತ್​ (Rajinikanth) ಅವರು ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಕಂಗನಾ ರಣಾವತ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆ ದಿನಾಂಕದ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ.

ರಾಘವ್ ಲಾರೆನ್ಸ್ ಮತ್ತು ಕಂಗನಾ ರಣಾವತ್ ಅವರು ತೆರೆ ಹಂಚಿಕೊಂಡಿರುವುದರಿಂದ ‘ಚಂದ್ರಮುಖಿ 2’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಕ್ರೇಜ್​ ಸೃಷ್ಟಿ ಆಗಿದೆ. ಈಗ ಈ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಗಣೇಶ ಚತುರ್ಥಿ ಪ್ರಯುಕ್ತ ಈ ಸಿನಿಮಾ ರಿಲೀಸ್​ ಆಗಲಿದೆ ಎಂಬುದನ್ನು ಹೊಸ ಪೋಸ್ಟರ್​ ಮೂಲಕ ತಿಳಿಸಲಾಗಿದೆ. ರಜನಿಕಾಂತ್ ಅವರು ಫಸ್ಟ್ ಲುಕ್ ಪೋಸ್ಟರ್​ ಬಿಡುಗಡೆ ಮಾಡಿರುವುದರಿಂದ ಚಿತ್ರತಂಡದ ಬಲ ಹೆಚ್ಚಿದೆ. ರಜನಿಕಾಂತ್​ಗೆ ಚಿತ್ರತಂಡದವರು ಧನ್ಯವಾದ ತಿಳಿಸಿದ್ದಾರೆ.

ಈ ಸಿನಿಮಾದಲ್ಲಿ ರಾಘವ್ ಲಾರೆನ್ಸ್ ಅವರು ವೆಟ್ಟೈಯನ್ ರಾಜ ಎಂಬ ಪಾತ್ರ ಮಾಡುತ್ತಿದ್ದಾರೆ. ಆ ಗೆಟಪ್​ನಲ್ಲಿ ಅವರು ಕಾಣಿಸಿಕೊಂಡಿರುವ ಪೋಸ್ಟರ್​ ವೈರಲ್​ ಆಗಿದೆ. ಅಂದಹಾಗೆ, ಇದು ಪ್ಯಾನ್​ ಇಂಡಿಯಾ ಸಿನಿಮಾ. ಗಣಪತಿ ಹಬ್ಬದ ಸಂದರ್ಭದಲ್ಲಿ ತಮಿಳು, ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ‘ಚಂದ್ರಮುಖಿ 2’ ಬಿಡುಗಡೆ ಆಗಲಿದೆ. ಅನುಭವಿ ನಿರ್ದೇಶಕ ಪಿ. ವಾಸು ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದಾರೆ. ಚಂದ್ರಮುಖಿಯ ಪಾತ್ರಕ್ಕೆ ಕಂಗನಾ ರಣಾವತ್​ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ‘ಆ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುವಾಗ ನಿದ್ದೆ ಬಂದಿಲ್ಲ’; ದೆವ್ವದ ಚಿತ್ರಕ್ಕೆ ಹೆದರಿದ್ರಾ ಕೀರವಾಣಿ?

ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಯ ಮೂಲಕ ಸುಭಾಷ್ ಕರಣ್ ಅವರು ತುಂಬಾ ಅದ್ದೂರಿಯಾಗಿ ‘ಚಂದ್ರಮುಖಿ 2’ ಸಿನಿಮಾವನ್ನು ನಿರ್ಮಿಸಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಎಂ.ಎಂ. ಕೀರವಾಣಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್.ಡಿ. ರಾಜಶೇಖರ್ ಅವರ ಛಾಯಾಗ್ರಹಣ, ಅಂಥೋನಿ ಅವರ ಸಂಕಲನ ಈ ಸಿನಿಮಾಗೆ ಇದೆ. ಲಕ್ಷ್ಮೀ ಮೆನನ್, ವಡಿವೇಲು, ರಾಧಿಕಾ ಶರತ್ ಕುಮಾರ್, ಮಹಿಮಾ ನಂಬಿಯಾರ್, ಸುರೇಶ್ ಮೆನನ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಚಂದ್ರುಮುಖಿ-2 ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ಇದು ಆಪ್ತಮಿತ್ರ 2 ರೀಮೇಕಾ?

ರಜನಿಕಾಂತ್​ ನಟಿಸಿದ್ದ ‘ಚಂದ್ರಮುಖಿ’ ಸಿನಿಮಾ 2005ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಅದಾಗಿ 18 ವರ್ಷಗಳ ನಂತರ ‘ಚಂದ್ರಮುಖಿ’ ಚಿತ್ರಕ್ಕೆ ಸೀಕ್ವೆಲ್ ಬರುತ್ತಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:26 pm, Mon, 31 July 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us