ರಾಹತ್ ಫತೇ ಅಲಿ ಖಾನ್ ಅವರು ಬಾಲಿವುಡ್ನಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅವರು ಇತ್ತೀಚೆಗೆ ದುಬೈಗೆ ತೆರಳಿದ್ದರು. ಅವರು ಅಲ್ಲಿ ಬಂಧನಕ್ಕೆ ಒಳಗಾದರು ಎನ್ನುವ ಸುದ್ದಿ ಹರಿದಾಡಿತ್ತು. ಕೆಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗಿತ್ತು. ಈ ವಿಚಾರದ ರಾಹತ್ ಫತೇ ಅಲಿ ಖಾನ್ ಅವರು ಸ್ಪಷ್ಟನೆ ನೀಡಿ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಕೆಲವು ವಿಚಾರಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಬಂಧನ ವಿಚಾರ ಸುಳ್ಳು ಎಂದು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
‘ನಾನು ಹಾಡುಗಳ ರೆಕಾರ್ಡ್ಗೋಸ್ಕರ ಇಲ್ಲಿಗೆ ಬಂದಿದ್ದೇನೆ. ದೇವರ ದೆಯೆಯಿಂದ ಎಲ್ಲವೂ ಚೆನ್ನಾಗಿ ಸಾಗುತ್ತಿದೆ’ ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ. ಈ ಮೂಲಕ ಎಲ್ಲವೂ ಸರಿಯಾಗಿದೆ ಎಂಬ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋಗೆ ನೀಡಿದ ಕ್ಯಾಪ್ಶನ್ನಲ್ಲಿ ‘ರಾಹತ್ ಫತೇ ಅಲಿ ಖಾನ್ ಅರೆಸ್ಟ್ ಆಗಿದ್ದಾರೆ ಅನ್ನೋದು ಸುಳ್ಳು ಮತ್ತು ಆಧಾರ ರಹಿತ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಶಾರುಖ್ ಅಥವಾ ಸಲ್ಮಾನ್.. ಇಬ್ಬರಲ್ಲಿ ಝೈದ್ ಖಾನ್ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್ ಪುತ್ರ
ರಾಹತ್ ಮಾಜಿ ಮ್ಯಾನೇಜರ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ರಾಹತ್ ಅವರನ್ನು ಬಂಧನ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿರೋದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
ರಾಹತ್ ಅವರು ಪಾಕಿಸ್ತಾನಿ ಗಾಯಕ. ಅವರು ಗಜಲ್ಸ್, ಸೂಫಿ ಮ್ಯೂಸಿಕ್ ಮೂಲಕ ಫೇಮಸ್ ಆಗಿದ್ದಾರೆ. ಪಾಕಿಸ್ತಾನದ ಸಿನಿಮಾ, ಧಾರಾವಾಹಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ‘ಜೂಮ್ ಬರಾಬರ್ ಜೂಮ್’, ‘ನಮಸ್ತೆ ಲಂಡನ್’, ‘ಐ ಹೇಟ್ ಲವ್ ಸ್ಟೋರಿ’, ‘ದಬಾಂಗ್’, ‘ಬಾಡಿಗಾರ್ಡ್’, ‘ಸುಲ್ತಾನ್’ ಸೇರಿ ಅನೇಕ ಸಿನಿಮಾಗಳ ಹಾಡನ್ನು ಅವರು ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.