Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!

Indira Nagar Ka Gunda: ರಾಹುಲ್​ ದ್ರಾವಿಡ್​ ಜಾಹೀರಾತು ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋವನ್ನು ನೋಡಿ ಅನೇಕರು ನಗೆ ಚಟಾಕಿ ಹಾರಿಸಿದ್ದರು.

Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!
ರಾಹುಲ್​-ದೀಪಿಕಾ

Updated on: Apr 10, 2021 | 5:36 PM

ಶುಕ್ರವಾರದಿಂದ ಎಲ್ಲೆಲ್ಲೂ ಒಂದೇ ಚರ್ಚೆ. ಅದು ರಾಹುಲ್​ ದ್ರಾವಿಡ್​ ಅವರ ವಿಡಿಯೋ. ಜಾಹೀರಾತಿಗಾಗಿ ಅವರು ಭಿನ್ನ ಅವತಾರ ತಾಳಿದ್ದು ಎಲ್ಲರಿಗೂ ಇಷ್ಟವಾಗಿತ್ತು. ಅಷ್ಟೇ ಅಲ್ಲ, ಈ ಆ್ಯಡ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಈಗ ದೀಪಿಕಾ ಪಡುಕೋಣೆ ಕೂಡ ದ್ರಾವಿಡ್​ ನಡೆದ ಹಾದಿಯನ್ನೇ ಅನುಸರಿಸಿದ್ದಾರೆ!

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ವಿಶೇಷ ಜಾಹೀರಾತಿನೊಂದಿಗೆ ಕ್ರೆಡ್​ ಬಂದಿದೆ. ಜಾಹೀರಾತಿನಲ್ಲಿ ಕಾಣಿಸುವಂತೆ, ದ್ರಾವಿಡ್​ ಟ್ರಾಫಿಕ್​ನಲ್ಲಿ ಸಿಲುಕಿರುತ್ತಾರೆ. ಅಷ್ಟೇ ಅಲ್ಲ, ಒತ್ತಡಕ್ಕೆ ಒಳಗಾಗಿ ಅಕ್ಕ ಪಕ್ಕದಲ್ಲಿ ನಿಂತಿರುವ ಕಾರು ಚಾಲಕರ ಮೇಲೆ ಸಿಟ್ಟಿಗೆ ಒಳಗಾಗಿ, ಪಕ್ಕದಲ್ಲಿ ನಿಂತಿರುವ ಕಾರಿನ ಕನ್ನಡಿ ಒಡೆದು ಹಾಕುತ್ತಾರೆ. ಕೊನೆಯಲ್ಲಿ ನಾನು ಇಂದಿರಾ ನಗರದ ಗೂಂಡಾ ಎಂದು ಉದ್ಘರಿಸಿದ್ದಾರೆ.

ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋವನ್ನು ನೋಡಿ ಅನೇಕರು ನಗೆ ಚಟಾಕಿ ಹಾರಿಸಿದ್ದರು. ಇದಕ್ಕೆ ದೀಪಿಕಾ ಪಡುಕೋಣೆ ಕೂಡ ಹೊರತಾಗಿಲ್ಲ. ಚಿಕ್ಕ ವಯಸ್ಸಿನ ಫೋಟೋ ಒಂದನ್ನು ಪೋಸ್ಟ್ ಮಾಡಿರುವ ದೀಪಿಕಾ, ಇಂದಿರಾ ನಗರದ ಗೂಂಡಾ ನಾನು ಎಂದು ಕ್ಯಾಪ್ಶನ್​ ನೀಡಿದ್ದಾರೆ.

 

ಇದನ್ನೂ ಓದಿ: ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​

Rahul Dravid: ರಾಹುಲ್​ ದ್ರಾವಿಡ್​ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us