
ಪ್ರಭಾಸ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಅಪ್ಡೇಟ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ.
ಜಗಪತಿ ಬಾಬು ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಅವರು ಸಲಾರ್ಗೆ ವಿಲನ್ ಆಗುತ್ತಾರೆ ಎನ್ನುವ ವಿಚಾರ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅವರ ಖಡಕ್ ಲುಕ್ ನೋಡಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ.
ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ‘ಸಲಾರ್’ ಮೇಲೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2022ರ ಏಪ್ರಿಲ್ 14ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಅದೇ ದಿನಾಂಕದಲ್ಲೇ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ತೆರೆಕಾಣಲಿದೆ ಎಂದು ನಿರ್ಮಾಪಕರು ಮಾಹಿತಿ ಬಹಿರಂಗ ಮಾಡಿದ್ದಾರೆ. ಹಾಗಾಗಿ ‘ಸಲಾರ್’ ರಿಲೀಸ್ ಡೇಟ್ ಬದಲಾಗುವುದು ಅನಿವಾರ್ಯ ಆಗಿದೆ.
ಬಾಹುಬಲಿ ಸರಣಿ ಸಿನಿಮಾಕ್ಕಾಗಿ ಹೆಚ್ಚು ಸಮಯ ತೆಗೆದುಕೊಂಡಿದ್ದ ಪ್ರಭಾಸ್ ಅವರು ಈಗ ವೇಗವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಾಹೋ ನಂತರ ಅವರು ಬ್ಯಾಕ್ ಟು ಬ್ಯಾಕ್ ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ‘ರಾಧೆ ಶ್ಯಾಮ್’, ‘ಸಲಾರ್’, ‘ಆದಿಪುರುಷ್’ ಮುಂತಾದ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತ ಪ್ರಶಾಂತ್ ನೀಲ್ ಕೂಡ ಬ್ಯುಸಿ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಕೆಲಸಗಳು ಲಾಕ್ಡೌನ್ ಕಾರಣದಿಂದ ತಡವಾಗಿವೆ
ಯಶ್ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್; ‘ಕೆಜಿಎಫ್ 2’ ಚಿತ್ರಕ್ಕಾಗಿ ‘ಸಲಾರ್’ ರಿಲೀಸ್ ದಿನಾಂಕ ಬದಲು?
Published On - 10:37 am, Mon, 23 August 21