
ಬಹುನಿರೀಕ್ಷಿತ ‘ಆರ್ಆರ್ಆರ್’ (RRR Movie) ಸಿನಿಮಾ ಈಗಾಗಲೇ ಅನೇಕ ಕಾರಣಗಳಿಂದಾಗಿ ಹೈಪ್ ಸೃಷ್ಟಿ ಮಾಡಿದೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ ಎಂಬ ಒಂದೇ ಕಾರಣ ಸಾಕು ‘ಆರ್ಆರ್ಆರ್’ ಬಗ್ಗೆ ನಿರೀಕ್ಷೆ ಮೂಡಲು. ಅದರ ಜೊತೆಗೆ ಜ್ಯೂ. ಎನ್ಟಿಆರ್ (Jr NTR) ಮತ್ತು ರಾಮ್ ಚರಣ್ ಅವರ ಭರ್ಜರಿ ಕಾಂಬಿನೇಷನ್ನಿಂದಾಗಿ ಸಿನಿಮಾದ ಚಾರ್ಮ್ ಹೆಚ್ಚಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಆರ್ಆರ್ಆರ್’ ಹಾಡುಗಳು ಈಗಾಗಲೇ ಜನಮನ ಗೆದ್ದಿವೆ. ಅದರಲ್ಲೂ ‘ಹಳ್ಳಿ ನಾಟು..’ ಹಾಡು ಸಖತ್ ವೈರಲ್ ಆಗಿದೆ. ಈಗ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲು ಸಮಯ ನಿಗದಿ ಆಗಿದೆ. ಚಿಕ್ಕದೊಂದು ಟೀಸರ್ ಮೂಲಕ ಆ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಆರ್ಆರ್ಆರ್ ತಂಡ.
ಈ ಸಿನಿಮಾದಲ್ಲಿ ಜ್ಯೂ. ಎನ್ಟಿಆರ್ ಅವರು ಕೊಮರಾಮ್ ಭೀಮ್ ಪಾತ್ರವನ್ನು ಮಾಡಿದ್ದಾರೆ. ಆ ಪಾತ್ರ ಹೇಗಿದೆ ಎಂಬುದಕ್ಕೆ ಈಗಾಗಲೇ ಸಾಕ್ಷಿ ಸಿಕ್ಕಿದೆ. ವಿವಿಧ ಗೆಟಪ್ನಲ್ಲಿ ಜ್ಯೂ. ಎನ್ಟಿಆರ್ ಕಾಣಿಸಿಕೊಂಡಿದ್ದಾರೆ. ಆ ಪಾತ್ರವನ್ನು ವಿವರಿಸುವ ಹಾಡು ಡಿ.24ರಂದು ಸಂಜೆ ನಾಲ್ಕು ಗಂಟೆಗೆ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ವರ್ಷನ್ನಲ್ಲಿ ಈ ಗೀತೆ ಬಿಡುಗಡೆ ಆಗಲಿದೆ. ಇಂದು (ಡಿ.23) ಈ ಹಾಡಿನ ಚಿಕ್ಕ ಪ್ರೋಮೋ ರಿಲೀಸ್ ಆಗಿದ್ದು, ಜ್ಯೂ, ಎನ್ಟಿಆರ್ ಅಭಿಮಾನಿಗಳ ಕಾತರ ಹೆಚ್ಚಿಸಿದೆ.
ಜ.7ರಂದು ವಿಶ್ವಾದ್ಯಂತ ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್ ದೇವಗನ್ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಟ್ರೇಲರ್ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ‘ಜನನಿ..’ ಹಾಡು ಕೂಡ ಗಮನ ಸೆಳೆದಿದೆ.
ಟ್ರೇಲರ್ನಲ್ಲಿ ಎಲ್ಲಾ ಪಾತ್ರಗಳ ಪರಿಚಯವಾಗಿದೆ. ಸಿನಿಮಾ ಎಷ್ಟು ಅದ್ದೂರಿಯಾಗಿ ಇರಲಿದೆ ಎನ್ನುವುದರ ಸಣ್ಣ ಝಲಕ್ ಟ್ರೇಲರ್ನಲ್ಲಿ ಸಿಕ್ಕಿದೆ. ‘ಆರ್ಆರ್ಆರ್’ ಸಿನಿಮಾ ಮೇಕಿಂಗ್ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಹಲವು ರಾಜ್ಯಗಳಿಗೆ ತೆರಳಿ ತಂಡ ಸಿನಿಮಾ ಪ್ರಚಾರ ಕಾರ್ಯ ನಡೆಸಿದೆ. ಬೆಂಗಳೂರಿಗೂ ಚಿತ್ರತಂಡ ಆಗಮಿಸಿತ್ತು. ರಾಮ್ ಚರಣ್, ಆಲಿಯಾ ಭಟ್, ಜ್ಯೂ. ಎನ್ಟಿಆರ್ ಅವರು ಮಾಧ್ಯಮಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ:
ಆರ್ಆರ್ಆರ್ ಚಿತ್ರ ಓಟಿಟಿಯಲ್ಲಿ ಬರೋದು ಯಾವಾಗ? ಕಾತರದ ಪ್ರಶ್ನೆಗೆ ಸಿಕ್ತು ಉತ್ತರ
Jr NTR: ಆರ್ಆರ್ಆರ್ ಪತ್ರಿಕಾಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡಿದ ಜೂ. ಎನ್ಟಿಆರ್
Published On - 1:21 pm, Thu, 23 December 21