ಚೈತ್ರಾಗೆ ಕುತಂತ್ರ ಬುದ್ಧಿಯ ರೋಗ ಇದೆ; ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಿರಿಕ್ ತೆಗೆದ ರಜತ್
ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಹಲವು ಬಾರಿ ಜಗಳ ಮಾಡಿದ್ದಾರೆ. ಆ ಜಗಳ ಈ ವಾರ ಕೂಡ ಮುಂದುವರಿಯುತ್ತಿದೆ. ಚೈತ್ರಾ ಅವರ ಗುಣಗಳನ್ನು ರಜತ್ ಮೊದಲಿನಿಂದಲೂ ಟೀಕಿಸುತ್ತಾ ಬಂದಿದ್ದಾರೆ. ಈಗ ‘ಕಲರ್ಸ್ ಕನ್ನಡ’ ವಾಹಿನಿಯು ಹೊಸ ಪ್ರೋಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ಕೂಡ ಅವರಿಬ್ಬರ ಜಟಾಪಟಿ ಕಾಣಿಸಿದೆ.
ಚೈತ್ರಾ ಕುಂದಾಪುರ ಮತ್ತು ರಜತ್ ಅವರ ನಡುವಿನ ಜಟಾಪಟಿ ಮುಂದುವರಿದಿದೆ. ಚೈತ್ರಾ ಅವರಿಗೆ ಕುತಂತ್ರ ಬುದ್ಧಿಯ ರೋಗ ಇದೆ ಎಂದು ರಜತ್ ಹೇಳಿದ್ದಾರೆ. ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಅವರು ಈ ಅಭಿಪ್ರಾಯ ತಿಳಿಸಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಬೇರೆ ಬೇರೆ ಕೆಟ್ಟ ಗುಣಗಳು ಯಾರಿಗೆ ಇದೆ ಎಂಬುದನ್ನು ಹೇಳಿದ್ದಾರೆ. ಡಿಸೆಂಬರ್ 30ರ ಎಪಿಸೋಡ್ನಲ್ಲಿ ಇದು ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.