Lal Salaam: ಮೊಯಿದ್ದೀನ್​ ಭಾಯ್​ ಆಗಿ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಬಂದ ರಜನಿಕಾಂತ್​

|

Updated on: Feb 06, 2024 | 12:14 PM

ಭಾರಿ ನಿರೀಕ್ಷೆ ಮೂಡಿಸಿರುವ ‘ಲಾಲ್​ ಸಲಾಂ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಫೆ.9ರಂದು ರಿಲೀಸ್​ ಆಗಲಿರುವ ಈ ಚಿತ್ರದಲ್ಲಿ ರಜನಿಕಾಂತ್​, ವಿಷ್ಣು ವಿಶಾಲ್​, ವಿಕ್ರಾಂತ್, ಕಪಿಲ್​ ದೇವ್​ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಗೆ ಐಶ್ವರ್ಯಾ ರಜನಿಕಾಂತ್​ ನಿರ್ದೇಶನ ಮಾಡಿದ್ದು, ಟ್ರೇಲರ್​ ಮೂಲಕ ಕುತೂಹಲ ಕೆರಳಿಸಲಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್​ ಅವರಿಗೆ ವಿಶೇಷವಾದ ಪಾತ್ರವಿದೆ.

Lal Salaam: ಮೊಯಿದ್ದೀನ್​ ಭಾಯ್​ ಆಗಿ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಬಂದ ರಜನಿಕಾಂತ್​
ರಜನಿಕಾಂತ್​
Follow us on

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಲಾಲ್​ ಸಲಾಂ’ ಸಿನಿಮಾ (Lal Salaam Movie) ಈಗಾಗಲೇ ತೆರೆಕಂಡಿರಬೇಕಿತ್ತು. ಈ ಸಿನಿಮಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರತಂಡವು ಕಾರಣಾಂತರಗಳಿಂದ ರಿಲೀಸ್​ ದಿನಾಂಕವನ್ನು ಮುಂಡೂಡಿಕೊಂಡಿತ್ತು. ಈಗ ಈ ಸಿನಿಮಾದ ಬಿಡುಗಡೆಗೆ ಸಮಯ ಕೂಡಿಬಂದಿದೆ. ರಜನಿಕಾಂತ್​ (Rajinikanth) ಅವರು ‘ಲಾಲ್​ ಸಲಾಂ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಫೆಬ್ರವರಿ 9ರಂದು ಈ ಚಿತ್ರ ತೆರೆಕಾಣಲಿದೆ. ಈಗ ಟ್ರೇಲರ್​ (Lal Salaam Trailer) ಬಿಡುಗಡೆ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಮೊಯಿದ್ದೀನ್​ ಭಾಯ್​ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟ್ರೇಲರ್​ನಲ್ಲಿ ಅವರ ಪಾತ್ರ ಹೈಲೈಟ್​ ಆಗಿದೆ.

‘ಲಾಲ್​ ಸಲಾಂ’ ಸಿನಿಮಾಗೆ ರಜನಿಕಾಂತ್​ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್​ ಜೊತೆ ವಿಷ್ಣು ವಿಶಾಲ್​, ವಿಕ್ರಾಂತ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಆರ್​. ರೆಹಮಾನ್​ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಲಾಲ್​ ಸಲಾಂ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಟ್ರೇಲರ್​ ಬಿಡುಗಡೆ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ರಜನಿಕಾಂತ್ ಸ್ಟೈಲ್ ಕಾಪಿ ಮಾಡಿದ ಮೊಮ್ಮೊಗ; ವಿಡಿಯೋ ವೈರಲ್

ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ‘ಲಾಲ್​ ಸಲಾಂ’ ಸಿನಿಮಾ ವಿವರಿಸಲಿದೆ. ಕಥೆಯ ಬಗ್ಗೆ ಸುಳಿವು ನೀಡುವಂತಹ ಅನೇಕ ಡೈಲಾಗ್​ಗಳು ಟ್ರೇಲರ್​ನಲ್ಲಿವೆ. ‘ಜನರು ಯಾವ ದೇವರ ಮೇಲೆ ನಂಬಿಕೆ ಇಡುತ್ತಾರೆ ಎಂಬುದು ಮುಖ್ಯವಲ್ಲ. ಎಲ್ಲ ದೇವರೂ ಒಂದೇ’ ಎಂಬಿತ್ಯಾದಿ ಡೈಲಾಗ್​ಗಳು ಗಮನ ಸೆಳೆಯುತ್ತಿವೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳೂ ಇವೆ.

‘ಲಾಲ್​ ಸಲಾಂ’ ಸಿನಿಮಾ ಟ್ರೇಲರ್​:

‘ಲಾಲ್​ ಸಲಾಂ’ ಚಿತ್ರದಲ್ಲಿ ಕ್ರೀಡೆಯ ಕುರಿತಾದ ಕಥೆ ಕೂಡ ಇದೆ. ಕ್ರಿಕೆಟ್​ನ ಕೇಂದ್ರವಾಗಿ ಇಟ್ಟುಕೊಂಡು ಕಥೆ ಹೇಳಿದ್ದಾರೆ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್​. ಹಾಗಾಗಿ ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಕಪಿಲ್​ ದೇವ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರದ್ದು ಈ ಸಿನಿಮಾದಲ್ಲಿ ಅತಿಥಿ ಪಾತ್ರ. ರಜನಿಕಾಂತ್​ ಮತ್ತು ಕಪಿಲ್​ ದೇವ್​ ಅವರು ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಈ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ‘ಲೈಕಾ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ಮೂಡಿಬಂದಿದ್ದು, ಸುಭಾಸ್ಕರನ್​ ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ