ರಕ್ಷಿತ್ ಶೆಟ್ಟಿ ಅವರು ಕನ್ನಡದ ಸ್ಟಾರ್ ಹೀರೋ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ‘ರಿಚರ್ಡ್ ಆ್ಯಂಟನಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಪ್ರಾಣಿಗಳ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇತ್ತು ಎಂಬುದನ್ನು ಕೇಳಿದರೆ ನೀವು ಅಚ್ಚರಿ ಪಡೋದು ಗ್ಯಾರಂಟಿ. ಆದರೆ, ರಕ್ಷಿತ್ ಶೆಟ್ಟಿ ಅವರ ಬದುಕನ್ನು ಆ ಶ್ವಾನ ಬದಲಿಸಿಬಿಟ್ಟಿತ್ತು. ಅಷ್ಟಕ್ಕೂ ಏನಿದು ಸಮಾಚಾರ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಓದಿ.
ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದರು. ಅವರಿಗೆ ಸಖತ್ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಇದು. ಈ ಸಿನಿಮಾದಿಂದ ನಿರ್ಮಾಪಕರಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು. ಈ ಚಿತ್ರ ಒಟ್ಟಾರೆ 100 ಕೋಟಿ ರೂಪಾಯಿ ಮೇಲೆ ಬಿಸ್ನೆಸ್ ಮಾಡಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಶ್ವಾನ ‘ಚಾರ್ಲಿ’ ಕೂಡ ಕಮಾಲ್ ಮಾಡಿತ್ತು.
ಈ ಮೊದಲು ಸಂದರ್ಶನ ಒಂದರಲ್ಲಿ ಅಲ್ಲು ಅರ್ಜುನ್ ಅವರು ಶ್ವಾನಗಳ ಬಗ್ಗೆ ಮಾತನಾಡಿದ್ದರು. ‘ಪ್ರಾಣಿಗಳ ಬಗ್ಗೆ ನಿಮ್ಮ ಭಾವನೆ ಹೇಗೆ’ ಎಂದು ಕೇಳಲಾಗಿತ್ತು. ಇದಕ್ಕೆ ರಕ್ಷಿತ್ ಶೆಟ್ಟಿ ಉತ್ತರಿಸಿದ್ದರು. ‘ಪ್ರಾಣಿಗಳ ಮೇಲೆ ದ್ವೇಷ ಇಲ್ಲ. ಹಾಗಂತ ಇಷ್ಟನೂ ಇಲ್ಲ. ಅವರ ಪಾಡಿಗೆ ಅವು ಇವೆ. ನಮ್ಮ ಪಾಡಿಗೆ ನಾವು ಇದ್ದೇವೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಈಗ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಆ ಡೈಲಾಗ್ ಹೇಳಿದ ಬಳಿಕ ರಕ್ಷಿತ್ ಅವರ ‘777 ಚಾರ್ಲಿ’ ಸಿನಿಮಾದ ಪ್ರಮೋಷನ್ ಘಟನೆಯ ವಿಡಿಯೋ ಹಂಚಿಕೊಳ್ಳಲಾಗಿದೆ.
‘777 ಚಾರ್ಲಿ’ ಸಿನಿಮಾ ಶೂಟ್ ವೇಳೆ ರಕ್ಷಿತ್ ಶೆಟ್ಟಿಗೆ ಚಾರ್ಲಿ ಜೊತೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ಈ ಬಾಂಡಿಂಗ್ ಸಾಕಷ್ಟು ಡೀಪ್ ಆಗಿತ್ತು. ಅದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಈಗ ವಿಡಿಯೋ ವೈರಲ್ ಆಗಿದೆ.
‘777 ಚಾರ್ಲಿ’ ಸಿನಿಮಾದ ಕಥೆಯೂ ಹೀಗೆಯೇ ಇದೆ. ಶ್ವಾನವನ್ನು ದ್ವೇಷ ಮಾಡುವ ವ್ಯಕ್ತಿ, ನಂತರ ಅದರ ಜೊತೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ. ಇಬ್ಬರೂ ಸಾಕಷ್ಟು ಕಡೆಗಳಲ್ಲಿ ಸುತ್ತಾಟ ನಡೆಸುತ್ತಾರೆ. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. 2022ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ