
ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ (Upasana Konidela) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿದೆ. ಈ ಮೊದಲು, ಅಂದರೆ 2023ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರು ಇಟ್ಟಿದ್ದರು. ಈಗ ಅವಳಿ ಮಕ್ಕಳು (Twins) ಜನಿಸಿದ ಸುದ್ದಿಯನ್ನು ರಾಮ್ ಚರಣ್ ತಂದೆ ಮೆಗಾ ಸ್ಟಾರ್ ಚಿರಂಜೀವಿ ಅವರು ಖಚಿತಪಡಿಸಿದ್ದಾರೆ.
ಚಿರಂಜೀವಿ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ‘ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ ಅವಳಿ ಮಕ್ಕಳು ಜನಿಸಿವೆ ಎಂಬುದನ್ನು ತಿಳಿಸಲು ಬಹಳ ಸಂತೋಷ ಆಗುತ್ತಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಅಜ್ಜ-ಅಜ್ಜಿ ಆದ ನಮಗೆ ಈ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸುವುದು ಅತ್ಯಂತ ಖುಷಿಯ ಕ್ಷಣವಾಗಿದೆ’ ಎಂದು ಚಿರಂಜೀವಿ ಪೋಸ್ಟ್ ಮಾಡಿದ್ದಾರೆ.
‘ಎಲ್ಲರ ಪ್ರೀತಿ, ಆಶೀರ್ವಾದ, ಶುಭ ಹಾರೈಕೆ ಮತ್ತು ಪ್ರಾರ್ಥನೆಗಳಿಗಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ಚಿರಂಜೀವಿ ಹೇಳಿದ್ದಾರೆ. ಕಮೆಂಟ್ ಮಾಡಿರುವ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ.
ಮದುವೆಗೂ ಮುನ್ನ ರಾಮ್ ಚರಣ್ ಮತ್ತು ಉಪಾಸನಾ ಅವರು ಡೇಟಿಂಗ್ ಮಾಡುತ್ತಿದ್ದರು. 2011ರ ಡಿಸೆಂಬರ್ನಲ್ಲಿ ಅವರ ಎಂಗೇಜ್ಮೆಂಟ್ ಆಗಿತ್ತು. 2012ರಲ್ಲಿ ಅವರಿಬ್ಬರು ಮದುವೆ ಮಾಡಿಕೊಂಡಿದ್ದರು. 11 ವರ್ಷಗಳ ನಂತರ ಉಪಾಸನಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈಗ ಅವರಿಗೆ ಅವಳಿ ಮಕ್ಕಳು ಜನಿಸಿವೆ.
ಇದನ್ನೂ ಓದಿ: ‘ಚಿಕಿರಿ’ ಹಾಡಿನ ಶೂಟ್ಗೆ ರಾಮ್ ಚರಣ್ ಹಾಗೂ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ..
ಉಪಾಸನಾ ಕೊನಿಡೆಲಾ ಅವರು ಪ್ರೆಗ್ನೆಂಟ್ ಎಂಬುದನ್ನು 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಿಳಿಸಲಾಗಿತ್ತು. ಅವರಿಗೆ ಅವಳಿ ಮಕ್ಕಳು ಜನಿಸಲಿವೆ ಎಂಬ ಸೂಚನೆ ಕೂಡ ನೀಡಲಾಗಿತ್ತು. ‘ಈ ದೀಪಾವಳಿಯಲ್ಲಿ ಡಬಲ್ ಸಂಭ್ರಮ, ಡಬಲ್ ಪ್ರೀತಿ ಮತ್ತು ಡಬಲ್ ಹಾರೈಕೆ’ ಎಂಬ ಕ್ಯಾಪ್ಷನ್ನೊಂದಿಗೆ ಸೀಮಂತದ ವಿಡಿಯೋ ಹಂಚಿಕೊಳ್ಳಲಾಗಿತ್ತು. ಫ್ಯಾನ್ಸ್ ನಿರೀಕ್ಷಿಸಿದಂತೆಯೇ ಈಗ ಅವಳಿ ಮಕ್ಕಳು ಜನಿಸಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:21 am, Sun, 1 February 26