ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಸಖತ್ ಸಂತಸ ಆಗಿದೆ. ಏಪ್ರಿಲ್ 13ರಂದು ಚೆನ್ನೈನ ವೇಲ್ಸ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್ (Honorary Doctorate) ಪ್ರದಾನ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾ ಮೂಲಕ ರಾಮ್ ಚರಣ್ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಲು ಆರಂಭಿಸಿದ್ದಾರೆ. ಅಭಿಮಾನಿಗಳಂತೂ ಈಗಲೇ ‘ಡಾಕ್ಟರ್ ರಾಮ್ ಚರಣ್’ (Dr Ram Charan) ಎಂದು ಕರೆಯಲು ಆರಂಭಿಸಿದ್ದಾರೆ.
ರಾಮ್ ಚರಣ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2007ರಲ್ಲಿ. ಅವರ ಮೊದಲ ಸಿನಿಮಾ ‘ಚಿರುತ’. ಅಂದಿನಿಂದ ಇಂದಿನ ತನಕ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಹಲವು ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ. ಆಂಧ್ರ ಸರ್ಕಾರದ ‘ನಂದಿ ಪ್ರಶಸ್ತಿ’, ಫಿಲ್ಮ್ಫೇರ್, ಸೈಮಾ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ. ‘ಆರ್ಆರ್ಆರ್’ ಸಿನಿಮಾದಲ್ಲಿನ ನಟನೆಗೆ ‘ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್’ಗೆ ನಾಮಿನೇಟ್ ಆಗಿದ್ದರು. ಈಗ ಅವರ ಮುಡಿಗೆ ಗೌರವ ಡಾಕ್ಟರೇಟ್ ಮೂಲಕ ಹೊಸ ಗರಿ ಸೇರ್ಪಡೆ ಆಗುತ್ತಿದೆ.
ಇದನ್ನೂ ಓದಿ: ‘ಪುಷ್ಪ 2’ ಬಳಿಕ ರಾಮ್ ಚರಣ್ಗೆ ಸುಕುಮಾರ್ ನಿರ್ದೇಶನ; ಇಲ್ಲಿದೆ ಸಿಹಿ ಸುದ್ದಿ
ಸದ್ಯ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಚುನಾವಣೆ ಕುರಿತ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ರಾಮ್ ಚರಣ್ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅವರು ನಟಿಸುತ್ತಿದ್ದಾರೆ. ಮೈಸೂರಿನಲ್ಲಿಯೂ ‘ಗೇಮ್ ಚೇಂಜರ್’ ಶೂಟಿಂಗ್ ಆಗಿದೆ ಎಂಬುದು ವಿಶೇಷ.
DR.MEGASTAR RAM CHARAN 🦁👑😎
GLOBAL STAR 🌟 @AlwaysRamCharan 👑Is Awarded an Honorary Doctorate by the University of VELS…He shall be inferred with the title at the 14th Convocation on 13th April in Chennai 🤟🏻🕺🤞🏻🔥💥💥💥#GameChanger #RamCharan 👑🌟✨ pic.twitter.com/vrVJeAuj3z
— 𝐀𝐤𝐚𝐬𝐡𝐡 𝐑𝐂™ (@AlwaysAkashRC) April 11, 2024
ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಾಮ್ ಚರಣ್ ಒಪ್ಪಿಕೊಳ್ಳುತ್ತಿದ್ದಾರೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಎಗ್ಸೈಟಿಂಗ್ ಸುದ್ದಿ ಈಗಾಗಲೇ ಸಿಕ್ಕಿದೆ. ‘ಪುಷ್ಪ 2’ ಸಿನಿಮಾದ ನಿರ್ದೇಶಕ ಸುಕುಮಾರ್ ಅವರು ರಾಮ್ ಚರಣ್ ಜೊತೆ ಹೊಸ ಸಿನಿಮಾ ಮಾಡುವುದು ಖಚಿತವಾಗಿದೆ. ಈ ಮೊದಲು ರಾಮ್ ಚರಣ್ ಹಾಗೂ ಸುಕುಮಾರ್ ಕಾಂಬಿನೇಷನ್ನಲ್ಲಿ ‘ರಂಗಸ್ಥಲಂ’ ಸಿನಿಮಾ ಮೂಡಿಬಂದಿತ್ತು. ಈಗ ಅವರು ಮತ್ತೊಮ್ಮೆ ಒಂದಾಗುತ್ತಿರುವುದರಿಂದ ನಿರೀಕ್ಷೆ ಜಾಸ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.