‘ಮಿರ್ಜಾಪುರ್’, ‘ಸೇಕ್ರೆಡ್ ಗೇಮ್ಸ್’ ಅಲ್ಲ, 500 ಕೋಟಿ ಬಜೆಟ್ನಲ್ಲಿ ಸಿದ್ಧವಾಗಿದೆ ಭಾರತದ ಈ ಸೀರಿಸ್
ಪೊರುಸ್ ಒಂದು ಸಿನಿಮಾ ರೀತಿಯೇ ಇತ್ತು. ಇದನ್ನು ಸಿದ್ದಾರ್ಥ್ ಕುಮಾರ್ ತೆವಾರಿ ಅವರು ನಿರ್ಮಾಣ ಮಾಡಿದ್ದರು. ಅಲೆಕ್ಸಾಂಡರ್ ಕಾಲದ ಕಥೆಯನ್ನು ಅವರು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಪ್ರಯತ್ನಿಸಿದ್ದರು.
ಕೊವಿಡ್ ಕಾಣಿಸಿಕೊಂಡ ಬಳಿಕ ಒಟಿಟಿ ವ್ಯಾಪ್ತಿ ವಿಸ್ತಾರವಾಯಿತು. ಇದರ ಬೆನ್ನಲ್ಲೇ ಅನೇಕರು ವೆಬ್ ಸೀರಿಸ್ನತ್ತ ಗಮನ ಹರಿಸಿದರು. ಕ್ರೈಮ್, ಲವ್, ಫ್ಯಾಮಿಲಿ ಡ್ರಾಮಾ ಸೇರಿ ಎಲ್ಲಾ ರೀತಿಯ ಸೀರಿಸ್ಗಳನ್ನು ಸಿದ್ಧಪಡಿಸಲಾಗಿದೆ. ‘ದಿ ಫ್ಯಾಮಿಲಿ ಮ್ಯಾನ್’, ‘ಮಿರ್ಜಾಪುರ್’ (Mirzapur), ‘ಸೇಕ್ರೆಡ್ ಗೇಮ್ಸ್’ ಸೇರಿ ಅನೇಕ ಸೀರಿಸ್ಗಳು ಮೆಚ್ಚುಗೆ ಪಡೆದಿವೆ. ಇವುಗಳೆಲ್ಲ ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಸೀರಿಸ್ಗಳು. ಭಾರತದ ದುಬಾರಿ ಸೀರಿಸ್ ಎಂಬ ಖ್ಯಾತಿ ‘ಪೊರಸ್’ಗೆ ಸಿಕ್ಕಿದೆ. ಈ ಸೀರಿಸ್ನ ಬಜೆಟ್ 500 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ವರದಿ ಆಗಿದೆ.
ಥೈಲ್ಯಾಂಡ್ನಲ್ಲಿ ಶೂಟ್
‘ಬ್ಯಾಟಲ್ ಆಫ್ ಝೇಲಂ’ ಆಧರಿಸಿ ಪೊರಸ್’ ಸೀರಿಸ್ ಸಿದ್ಧವಾಗಿತ್ತು. ಈ ಸೀರಿಸ್ನ ಥೈಲ್ಯಾಂಡ್ನಲ್ಲಿ ಶೂಟ್ ಮಾಡಲಾಯಿತು. ಲಕ್ಷ್ ಲ್ವಾಣಿ ಪೊರಸ್ ಪಾತ್ರದಲ್ಲಿ ನಟಿಸಿದ್ದರು. ಅಲೆಕ್ಸಾಂಡರ್ ಪಾತ್ರದಲ್ಲಿ ರೋಹಿತ್ ಪುರೋಹಿತ್ ಬಣ್ಣ ಹಚ್ಚಿದ್ದರು. ಲಕ್ಷ್ ಲಾಲ್ವಾಣಿ ಅವರು ಇದನ್ನು ಅತ್ಯಂತ ದುಬಾರಿ ಸೀರಿಸ್ ಎಂದಿದ್ದರು. ಇದರ ಪ್ರೋಮೋನ ಥೈಲ್ಯಾಂಡ್ನಲ್ಲಿ ಶೂಟ್ ಮಾಡಲಾಗಿತ್ತು.
ಬಜೆಟ್
ಈ ಸೀರಿಸ್ ಬರೋಬ್ಬರಿ 249 ಎಪಿಸೋಡ್ಗಳನ್ನು ಹೊಂದಿದೆ. 2017ರಿಂದ 2018ರವರೆಗೆ ಈ ಸೀರಿಸ್ ಪ್ರಸಾರ ಕಂಡಿದೆ. ಅದ್ದೂರಿ ಗ್ರಾಫಿಕ್ಸ್ನಿಂದ ದೃಶ್ಯಗಳು ಉತ್ತಮವಾಗಿ ಮೂಡಿ ಬಂದಿದ್ದವು. ಇದರ ಬಜೆಟ್ 500 ಕೋಟಿ ರೂಪಾಯಿ ಆಗಿತ್ತು.
ಸಿನಿಮಾ ರೀತಿಯೇ ಇತ್ತು
ಪೊರುಸ್ ಒಂದು ಸಿನಿಮಾ ರೀತಿಯೇ ಇತ್ತು. ಇದನ್ನು ಸಿದ್ದಾರ್ಥ್ ಕುಮಾರ್ ತೆವಾರಿ ಅವರು ನಿರ್ಮಾಣ ಮಾಡಿದ್ದರು. ಅಲೆಕ್ಸಾಂಡರ್ ಕಾಲದ ಕಥೆಯನ್ನು ಅವರು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಪ್ರಯತ್ನಿಸಿದ್ದರು.
ಸೆಟ್ ನೋಡಿ ಶಾಕ್
‘ಪೊರಸ್’ ಸೀರಿಸ್ ಪೌರವ ಕಿಂಗ್ಡಮ್ನ ರಾಜ ಹಾಗೂ ಗ್ರೀಕ್ ವಾರಿಯರ್ ಅಲೆಕ್ಸಾಂಡರ್ ಕಥೆಯನ್ನು ಹೊಂದಿತ್ತು. ಇದಕ್ಕೆ 7.9 ರೇಟಿಂಗ್ ಸಿಕ್ಕಿದೆ. ಇದರ ಕೊನೆಯ ಎಪಿಸೋಡ್ 2018ರ ನವೆಂಬರ್ 13ರಂದು ಪ್ರಸಾರ ಕಂಡಿದೆ.
ಇದಾದ ಬಳಿಕ ಚಂದ್ರಗುಪ್ತ ಮೌರ್ಯ ಸೀರಿಸ್ ಆರಂಭ ಆಯಿತು. ಇದು ‘ಪೊರಸ್’ನ ಮುಂದುವರಿದ ಭಾಗ ಆಗಿತ್ತು. 2018ರ ನವೆಂಬರ್ 14ರಿಂದ ಇದು ಪ್ರಸಾರ ಕಂಡಿತು. ಆದರೆ, ‘ಪೊರಸ್’ ಸೀರಿಸ್ನಷ್ಟು ಇದು ಖ್ಯಾತಿ ಗಳಿಸಿಲ್ಲ.
‘ಬಾಹುಬಲಿ 2 ಬಜೆಟ್
ಎಸ್ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಈ ಸೀರಿಸ್ನ ಬಜೆಟ್ 250 ಕೋಟಿ ರೂಪಾಯಿ ಆಗಿತ್ತು. ಇದರ ದ್ವಿಗುಣ ಹಣವನ್ನು ಸೀರಿಸ್ಗಾಗಿ ಖರ್ಚುಮಾಡಲಾಗಿತ್ತು.
ಇದನ್ನೂ ಓದಿ: ಟಿಆರ್ಪಿ ರೇಸ್ನಲ್ಲಿ ಈ ಧಾರಾವಾಹಿಗಳ ಮಧ್ಯೆ ಇದೆ ಭರ್ಜರಿ ಸ್ಪರ್ಧೆ; ಇಲ್ಲಿದೆ ಟಾಪ್ ಐದು ಸೀರಿಯಲ್
ಮಿರ್ಜಾಪುರ್
ದೊಡ್ಡ ಮಟ್ಟದಲ್ಲಿ ಗಮನ ಸೆಳೆದ ಸೀರಿಸ್ ಎಂದರೆ ಅದು ‘ಮಿರ್ಜಾಪುರ್’. ಈ ಸೀರಿಸ್ನ ಕೇವಲ 60 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿತ್ತು. ‘ಫ್ಯಾಮಿಲಿ ಮ್ಯಾನ್’ ಬಜೆಟ್ ‘ಮಿರ್ಜಾಪುರ್’ ಬಜೆಟ್ಗಿಂತಲೂ ಕಡಿಮೆ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ