Ram Charan: ‘ನಮ್ಮನ್ನು ಆಸ್ಕರ್​ ವೇದಿಕೆಗೆ ಕರೆಯಲಿಲ್ಲ, ಆ ಬಗ್ಗೆ ಈಗ ಮಾತು ಬೇಡ’: ರಾಮ್​ ಚರಣ್​

Naatu Naatu Song | Oscars 2023: ಆಸ್ಕರ್​ ಸಮಾರಂಭದಲ್ಲಿ ಏನೆಲ್ಲ ನಡೆಯಿತು ಅಂತ ಹತ್ತಿರದಿಂದ ಕಂಡವರು ‘ಆರ್​ಆರ್​ಆರ್​’ ತಂಡದವರು. ಆ ದಿನದ ಬಗ್ಗೆ ರಾಮ್​ ಚರಣ್​ ಮಾತಾಡಿದ್ದಾರೆ.

Ram Charan: ‘ನಮ್ಮನ್ನು ಆಸ್ಕರ್​ ವೇದಿಕೆಗೆ ಕರೆಯಲಿಲ್ಲ, ಆ ಬಗ್ಗೆ ಈಗ ಮಾತು ಬೇಡ’: ರಾಮ್​ ಚರಣ್​
ರಾಮ್ ಚರಣ್

Updated on: Mar 20, 2023 | 10:44 AM

ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್​ ಗೆದ್ದಿದೆ ಎಂಬುದು ಸಂತಸದ ವಿಷಯ. ಆದರೆ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರ ಅಭಿಮಾನಿಗಳಿಗೆ ಒಂದು ವಿಚಾರದಲ್ಲಿ ಬೇಸರ ಆಗಿದೆ. ಆಸ್ಕರ್​ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭದ ವೇದಿಕೆಯಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರು ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್​ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೇ ಸಮಯದಲ್ಲಿ ಆ ಪ್ಲ್ಯಾನ್​ ರದ್ದಾಯಿತು. ಅದಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ರಾಮ್​ ಚರಣ್​ (Ram Charan) ಅವರು ಈಗ ಮಾತನಾಡಿದ್ದಾರೆ.

ಮಾರ್ಚ್​ 12ರಂದು ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂದು ವೇದಿಕೆಯಲ್ಲಿ ಹೆಜ್ಜೆ ಹಾಕಲು ರಾಮ್​ ಚರಣ್​ ಸಿದ್ಧವಾಗಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ‘ಅವರು ನಮ್ಮನ್ನು ಕರೆಯುತ್ತಾರೆ ಅಂತ ನಾನು ಶೇ.100ರಷ್ಟು ರೆಡಿಯಾಗಿದ್ದೆ. ಆದರೆ ನಿಜಕ್ಕೂ ಏನಾಯಿತೋ ನನಗೆ ತಿಳಿದಿಲ್ಲ. ಅವರು ನಮ್ಮನ್ನು ಕರೆಯಲಿಲ್ಲ. ಆ ಬಗ್ಗೆ ಈಗ ಮಾತನಾಡೋದು ಬೇಡ. ವೇದಿಕೆಯಲ್ಲಿ ಡ್ಯಾನ್ಸ್​ ಮಾಡಿದ ತಂಡದವರು ತುಂಬ ಚೆನ್ನಾಗಿ ಮಾಡಿದರು. ನಮಗಿಂತಲೂ ಚೆನ್ನಾಗಿ ಡ್ಯಾನ್ಸ್​ ಮಾಡಿದರು’ ಎಂದು ರಾಮ್​ ಚರಣ್​ ಹೇಳಿದ್ದಾರೆ.

ಇದನ್ನೂ ಓದಿ: ‘RRR’ ಚಿತ್ರತಂಡದಲ್ಲಿ ಒಳಜಗಳ; ಆಸ್ಕರ್​ ಗೆದ್ದ ಬಳಿಕ ಬಯಲಾಯ್ತು ಅಸಮಾಧಾನ

ಇದನ್ನೂ ಓದಿ
ನರ್ತನ್ ಚಿತ್ರಕ್ಕೆ ರಾಮ್​ ಚರಣ್ ಗ್ರೀನ್ ಸಿಗ್ನಲ್​? ಕೇಳಿ ಬರ್ತಿದೆ ಹೊಸ ಸುದ್ದಿ
‘ಆರ್​ಆರ್​ಆರ್​’ನಿಂದ ರಾಮ್​ ಚರಣ್​ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್​ನಿಂದ ಬಂತು ಎರಡೆರಡು ಆಫರ್​
ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ
ವಿವಾದದಲ್ಲಿ ರಾಮ್​ ಚರಣ್​ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

‘ಹಲವು ವೇದಿಕೆಗಳಲ್ಲಿ, ಹಲವು ಸಂದರ್ಭಗಳಲ್ಲಿ ನಾನು ಆ ಹಾಡಿಗೆ ಡ್ಯಾನ್ಸ್​ ಮಾಡಿದ್ದೇನೆ. ಈಗ ಭಾರತಕ್ಕಾಗಿ ಬೇರೆಯವರು ಡ್ಯಾನ್ಸ್​ ಮಾಡುವುದನ್ನು ನಾವು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ನೋಡುವ ಸಮಯ. ಇದು ನಮ್ಮ ಹಾಡು ಮಾತ್ರವಲ್ಲ. ಅದು ಇಡೀ ಭಾರತದ ಹಾಡು’ ಎಂದಿದ್ದಾರೆ ರಾಮ್​ ಚರಣ್​.

ಜ್ಯೂನಿಯರ್​ ಎನ್​ಟಿಆರ್​ ಹೇಳಿದ್ದೇ ಬೇರೆ:

ಆಸ್ಕರ್​ ಸಮಾರಂಭದಲ್ಲಿ ಏನೆಲ್ಲ ನಡೆಯಿತು ಅಂತ ಹತ್ತಿರದಿಂದ ಕಂಡವರು ‘ಆರ್​ಆರ್​ಆರ್​’ ತಂಡದವರು. ಆ ವೇದಿಕೆಯಲ್ಲಿ ‘ನಾಟು ನಾಟು..’ ಹಾಡಿಗೆ ಯಾಕೆ ಡ್ಯಾನ್ಸ್​ ಮಾಡಿಲ್ಲ ಎಂಬುದಕ್ಕೆ ಜ್ಯೂನಿಯರ್​ ಎನ್​ಟಿಆರ್​ ಅವರು ಬೇರೆಯದೇ ಕಾರಣ ನೀಡಿದ್ದರು. ಸೂಕ್ತ ತಯಾರಿ ಮಾಡಿಕೊಳ್ಳದ ಕಾರಣ ತಾವು ಡ್ಯಾನ್ಸ್​ ಮಾಡಿಲ್ಲ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:‘RRR’ ಕಿರಿಕ್​ ಬಗ್ಗೆ ಹೆಚ್ಚಿತು ಅನುಮಾನ; ಕ್ಷಮೆ ಕೇಳಿದ ‘ನಾಟು ನಾಟು..’ ಗಾಯಕ ಕಾಲ ಭೈರವ

‘ನಾನು ಡ್ಯಾನ್ಸ್​ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ರಿಹರ್ಸಲ್​ ಮಾಡಲು ನಮಗೆ ಸಮಯ ಸಿಕ್ಕಿಲ್ಲ. ನಾವು ಸೂಕ್ತ ತಯಾರಿ ಮಾಡಿಕೊಳ್ಳದೇ ಜಗತ್ತಿನ ಅತಿ ದೊಡ್ಡ ವೇದಿಕೆ ಏರಲು ಆಗುವುದಿಲ್ಲ. ನಾನು ಬ್ಯುಸಿ ಆಗಿದ್ದೆ. ರಾಮ್​ ಚರಣ್​ ಕೂಡ ಮೊದಲೇ ಒಪ್ಪಿಕೊಂಡ ಕೆಲಸಗಳ ಕಾರಣದಿಂದ ಬ್ಯುಸಿ ಆಗಿದ್ದರು. ರಿಹರ್ಸಲ್​ ಮಾಡಿಲ್ಲದ ಕಾರಣ ನಾವು ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಪರ್ಫಾರ್ಮ್​ ಮಾಡುವುದಿಲ್ಲ’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us