BAFTA 2023: ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ನಲ್ಲಿ ‘ಆರ್ಆರ್ಆರ್’ ಚಿತ್ರಕ್ಕೆ ಸಿಕ್ಕಿಲ್ಲ ಮನ್ನಣೆ; ಕಾರಣ ಏನು?
BAFTA Awards 2023 | RRR Movie: ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಇದರಲ್ಲಿ ‘ಆರ್ಆರ್ಆರ್’ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಭಾರತದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿಯೂ ಯಶಸ್ವಿ ಆಗುತ್ತಿವೆ. ‘ಆರ್ಆರ್ಆರ್’ (RRR Movie) ಚಿತ್ರಕ್ಕೆ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಸಿಕ್ಕಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿಗೂ ನಾಮಿನೇಟ್ ಆಗಿದೆ. ಆದರೆ ಈ ಸಿನಿಮಾವನ್ನು ‘ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್’ (British Academy Film Awards) ಕಡೆಗಣಿಸಿದೆ. 77ನೇ ಸಾಲಿನ BAFTA ಸಮಾರಂಭದಲ್ಲಿ ‘ಆರ್ಆರ್ಆರ್’ ಚಿತ್ರಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಒಂದು ವಿಭಾಗದಲ್ಲೂ ನಾಮಿನೇಟ್ ಆಗಿಲ್ಲ. ಇದು ಭಾರತೀಯರ ಕೋಪಕ್ಕೆ ಕಾರಣ ಆಗಿದೆ. ಹಾಗಾಗಿ ಈ ಪ್ರಶಸ್ತಿ ಬಗ್ಗೆ ನೆಟ್ಟಿಗರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಹಾಗಾದರೆ ‘ಆರ್ಆರ್ಆರ್’ ಚಿತ್ರವನ್ನು BAFTA (BAFTA 2023) ಅವಾರ್ಡ್ಸ್ನಲ್ಲಿ ಕಡೆಗಣಿಸಲು ಕಾರಣ ಏನು? ಇಲ್ಲಿದೆ ಉತ್ತರ..
‘ಆರ್ಆರ್ಆರ್’ ಸಿನಿಮಾದಲ್ಲಿ ಸ್ವಾತಂತ್ರ್ಯಪೂರ್ವದ ಕಥೆಯನ್ನು ಹೇಳಲಾಗಿದೆ. ಬ್ರಿಟಿಷರು ಭಾರತೀಯರ ಮೇಲೆ ಮಾಡಿದ ದಬ್ಬಾಳಿಕೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಬ್ರಿಟಿಷರ ಶೋಷಣೆ ವಿರುದ್ಧ ಹೋರಾಡಿದ ಕೊಮರಮ್ ಭೀಮ್ ಮತ್ತು ಅಲ್ಲುರಿ ಸೀತಾರಾಮ ರಾಜು ಅವರ ಪಾತ್ರಗಳು ಈ ಚಿತ್ರದಲ್ಲಿ ವಿಜೃಂಭಿಸಿವೆ. ಬ್ರಿಟಿಷರ ಕರಾಳ ಇತಿಹಾಸವನ್ನು ತೋರಿಸಿದ್ದರಿಂದಲೇ ‘ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್’ಗೆ ‘ಆರ್ಆರ್ಆರ್’ ಸಿನಿಮಾ ನಾಮಿನೇಟ್ ಆಗಿಲ್ಲ ಮತ್ತು ಯಾವುದೇ ಪ್ರಶಸ್ತಿ ಸಿಕ್ಕಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ಗೋಲ್ಡನ್ ಗ್ಲೋಬ್’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್ಆರ್ಆರ್’ ಚಿತ್ರ
ರಾಜಮೌಳಿ ಅವರು ನಿರ್ದೇಶನದಲ್ಲಿ ಮೂಡಿಬಂದ ‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಗೆದ್ದ ಬಳಿಕ ಅನೇಕರು ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಾಲಿವುಡ್ ನಿರ್ದೇಶಕರಾದ ಜೇಮ್ಸ್ ಕ್ಯಾಮೆರಾನ್, ಸ್ಟೀವನ್ ಸ್ಪೀಲ್ಬರ್ಗ್ ಸೇರಿದಂತೆ ಅನೇಕ ದಿಗ್ಗಜರು ಈ ಚಿತ್ರವನ್ನು ಕೊಂಡಾಡಿದ್ದಾರೆ. ಆದರೆ ಬ್ರಿಟಿಷ್ ಮಂದಿ ಮಾತ್ರ ನಿರ್ಲಕ್ಷ್ಯ ಮಾಡಿದ್ದಾರೆ.
ಇದನ್ನೂ ಓದಿ: SS Rajamouli: ಎಸ್ಎಸ್ ರಾಜಮೌಳಿ ಬಿಜೆಪಿ ಪರವೇ? ಮೌನ ಮುರಿದ ನಿರ್ದೇಶಕ
ಆಸ್ಕರ್ ಗೆಲ್ಲುವ ಭರವಸೆಯಲ್ಲಿ ‘ನಾಟು ನಾಟು..’ ಸಾಂಗ್:
ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ನಾಟು ನಾಟು..’ ಹಾಡು ಜನಮನ ಗೆದ್ದಿದೆ. ಈ ಹಾಡಿಗೆ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಸಿಕ್ಕಿದೆ. ಈಗ ಆಸ್ಕರ್ಗೂ ನಾಮಿನೇಟ್ ಆಗಿದೆ. ಈ ಹಾಡಿಗೆ ಖಂಡಿತವಾಗಿಯೂ ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Well BAFTA didn’t have the courage to even get RRR in any categories. Is the reasoning that RRR shows British ancestors in a bad light? Are u telling the world that there is no elevated artistry in anything that even remotely points out that your past is built on oppression?
— Hemanth (@hemanth_kundeti) February 19, 2023
ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರು ‘ನಾಟು ನಾಟು..’ ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಪ್ರೇಮ್ ರಕ್ಷಿತ್ ಅವರು ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Tue, 21 February 23