‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ

ರಾಜಮೌಳಿ ಹಾಗೂ ಸ್ಟೀವನ್​ ಸ್ಪೀಲ್​ಬರ್ಗ್ ಅವರು ಈ ವರ್ಷದ ಆರಂಭದಲ್ಲಿ ಭೇಟಿ ಆಗಿದ್ದರು. ಲಾಸ್ ಏಂಜಲೀಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಭೇಟಿ ನಡೆದಿತ್ತು. ಈ ಸಂದರ್ಭದಲ್ಲಿ ಅವರು ‘ಆರ್​ಆರ್​ಆರ್​’ ಚಿತ್ರವನ್ನು ನೋಡಿರಲಿಲ್ಲ.

‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ
ಸ್ಟೀವನ್​ ಸ್ಪೀಲ್​ಬರ್ಗ್-ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Feb 11, 2023 | 10:25 AM

ಹಾಲಿವುಡ್​ ಸಿನಿಮಾಗಳನ್ನು ನೋಡಿ ಭಾರತದ ನಿರ್ದೇಶಕರು ಅಚ್ಚರಿ ಪಡುತ್ತಿದ್ದ ಕಾಲವೊಂದಿತ್ತು. ಈ ಸಿನಿಮಾಗಳ ಮೇಕಿಂಗ್ ಬಗ್ಗೆ ಅಚ್ಚರಿ ಮೂಡುವಂತೆ ಅವರು ಮಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಭಾರತದ ನಿರ್ದೇಶಕರ ಕೆಲಸವನ್ನು ವಿದೇಶಿಗರು ಮೆಚ್ಚಿಕೊಳ್ಳುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಸೇರಿ ಭಾರತದ ಅನೇಕ ಸಿನಿಮಾಗಳಿಗೆ ವಿದೇಶದಲ್ಲಿ ಮನ್ನಣೆ ಸಿಗುತ್ತಿದೆ. ವಿಶೇಷ ಎಂದರೆ, ‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ ಎಂಬುದನ್ನು ನನಗೂ ತಿಳಿಸಿ ಎಂದು ರಾಜಮೌಳಿಗೆ (SS Rajamouli) ಹಾಲಿವುಡ್​ ದಿಗ್ಗಜ ಸ್ಟೀವನ್​ ಸ್ಪೀಲ್​ಬರ್ಗ್ ಕೋರಿದ್ದಾರೆ.

ರಾಜಮೌಳಿ ಹಾಗೂ ಸ್ಟೀವನ್​ ಸ್ಪೀಲ್​ಬರ್ಗ್ ಅವರು ಈ ವರ್ಷದ ಆರಂಭದಲ್ಲಿ ಭೇಟಿ ಆಗಿದ್ದರು. ಲಾಸ್ ಏಂಜಲೀಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಭೇಟಿ ನಡೆದಿತ್ತು. ಈ ಸಂದರ್ಭದಲ್ಲಿ ಅವರು ‘ಆರ್​ಆರ್​ಆರ್​’ ಚಿತ್ರವನ್ನು ನೋಡಿರಲಿಲ್ಲ. ಹೀಗಾಗಿ, ಈ ಸಿನಿಮಾ ಬಗ್ಗೆ ಅವರಿಗೆ ಏನನ್ನೂ ಹೇಳೋಕೆ ಸಾಧ್ಯವಾಗಿರಲಿಲ್ಲ. ಆಗ ಇಬ್ಬರೂ ಉಭಯಕುಶಲೋಪರಿ ಮಾತನಾಡಿಕೊಂಡಿದ್ದರು. ಈಗ ಸ್ಟೀವನ್​ ಸ್ಪೀಲ್​ಬರ್ಗ್ ಅವರು ‘ಆರ್​ಆರ್​ಆರ್​’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

‘ಆರ್​ಆರ್​ಆರ್​ ಸಿನಿಮಾ ಅದ್ಭುತವಾಗಿದೆ. ನನ್ನ ಕಣ್ಣುಗಳಲ್ಲೇ ಅದನ್ನು ನಂಬಲು ಸಾಧ್ಯವಾಗಿಲ್ಲ. ರಾಮ್ ಚರಣ್, ಜ್ಯೂ.ಎನ್​ಟಿಆರ್​, ಆಲಿಯಾ ಭಟ್ ಅವರ ನಟನೆ ಅದ್ಭುತವಾಗಿತ್ತು. ಚಿತ್ರದ ಕ್ಲೈಮ್ಯಾಕ್ಸ್ ಇಷ್ಟವಾಯಿತು. ‘ಆರ್​ಆರ್​ಆರ್​’ ಚಿತ್ರಕ್ಕೆ ಅಭಿನಂದನೆಗಳು’ ಎಂದು ಸ್ಟೀವನ್​ ಸ್ಪೀಲ್​ಬರ್ಗ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜಮೌಳಿ ಅವರು, ‘ಧನ್ಯವಾದಗಳು. ನಿಮ್ಮ ಈ ಮಾತಿನಿಂದ ಕುರ್ಚಿ ಬಿಟ್ಟು ಡ್ಯಾನ್ಸ್ ಮಾಡಬೇಕು ಎನಿಸುತ್ತಿದೆ’ ಎಂದಿದ್ದಾರೆ ರಾಜಮೌಳಿ.

ಇದನ್ನೂ ಓದಿ
Image
ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?
Image
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
Image
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ
Image
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?

‘ಆರ್​ಆರ್​​ಆರ್​’ ಚಿತ್ರದ ಮೇಕಿಂಗ್ ಬಗ್ಗೆ ಸ್ಟೀವನ್​ ಸ್ಪೀಲ್​ಬರ್ಗ್ ಅವರಿಗೆ ಒಂದಷ್ಟು ಪ್ರಶ್ನೆಗಳು ಉಳಿದುಕೊಂಡಿವೆ. ಮುಖತಃ ಭೇಟಿ ಆದಾಗ ಈ ಪ್ರಶ್ನೆಗಳನ್ನು ಕೇಳುವುದಾಗಿ ರಾಜಮೌಳಿಗೆ ಸ್ಟೀವನ್​ ಸ್ಪೀಲ್​ಬರ್ಗ್ ಹೇಳಿದ್ದಾರೆ. ಇದನ್ನು ಕೇಳಿ ರಾಜಮೌಳಿ ಖುಷಿ ಆಗಿದ್ದಾರೆ.

ಇದನ್ನೂ ಓದಿ: ‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ

‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು.. ಹಾಡು ಆಸ್ಕರ್​ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್​ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ. ಅವಾರ್ಡ್ ಕಾರ್ಯಮದಲ್ಲಿ ‘ಆರ್​ಆರ್​ಆರ್’ ತಂಡ ಭಾಗಿ ಆಗಲಿದೆ. ಭಾರತಕ್ಕೆ ಒಂದು ಅವಾರ್ಡ್ ತರುವ ಕನಸನ್ನು ರಾಜಮೌಳಿ ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ