Updated on: Feb 11, 2023 | 11:51 AM
ನಟಿ ಅನನ್ಯಾ ಪಾಂಡೆ ಬಾಲಿವುಡ್ನಲ್ಲಿ ನೆಲೆಕಂಡುಕೊಳ್ಳಲು ಸಾಕಷ್ಟು ಪ್ರಯತ್ನಪಡುತ್ತಿದ್ದಾರೆ. ನಟನೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಟೀಕೆ ಮಾಡಿದವರೇ ಹೆಚ್ಚು. ಆದರೂ ಅವರು ತಮ್ಮ ಪ್ರಯತ್ನ ನಿಲ್ಲಿಸಿಲ್ಲ.
ಕಳೆದ ವರ್ಷ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ರಿಲೀಸ್ ಆಗಿ ಸೋಲು ಕಂಡಿತು. ಈ ಚಿತ್ರದ ನಂತರದಲ್ಲಿ ಅನನ್ಯಾ ಕಡೆಯಿಂದ ಹೊಸ ಸಿನಿಮಾ ಘೋಷಣೆ ಆಗಿಲ್ಲ.
ಅನನ್ಯಾ ಅವರು ಈ ಮೊದಲು ಬಾಡಿ ಶೇಮಿಂಗ್ ಎದುರಿಸಿದ್ದರು. ಎದೆ ಭಾಗ ಫ್ಲ್ಯಾಟ್ ಆಗಿದೆ ಎಂದು ಎಲ್ಲರೂ ಅವರನ್ನು ಟೀಕೆ ಮಾಡುತ್ತಿದ್ದರಂತೆ.
ಸಂದರ್ಶನ ಒಂದರಲ್ಲಿ ಈ ಬಗ್ಗೆ ಅನನ್ಯಾ ಹೇಳಿಕೊಂಡಿದ್ದರು. ‘ನನ್ನದು ಫ್ಲಾಟ್ಸ್ಕ್ರೀನ್ ಎಂದು ಎಲ್ಲರೂ ಟೀಕೆ ಮಾಡುತ್ತಿದ್ದರು. ನನಗೆ ಮಾತ್ರ ಏಕೆ ಈ ರೀತಿ ಆಗುತ್ತದೆ ಎಂದು ಕೇಳಿಕೊಳ್ಳುತ್ತಿದ್ದೆ. ನನ್ನಲ್ಲೇ ಏನೋ ತಪ್ಪಿರಬೇಕು ಎಂದು ಅನಿಸುತ್ತಿತ್ತು’ ಎಂದು ಅನನ್ಯಾ ಈ ಮೊದಲು ಹೇಳಿಕೊಂಡಿದ್ದರು.
‘ಬೆಳೆಯುತ್ತಾ ಈ ವಿಚಾರದ ಬಗ್ಗೆ ಇತರ ಯುವತಿಯರೊಂದಿಗೆ ಚರ್ಚಿಸಿದೆ. ಈ ರೀತಿಯ ಟೀಕೆಗಳು ನನಗೆ ಮಾತ್ರ ಅಲ್ಲ, ಎಲ್ಲರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ಗೊತ್ತಾಗಿತ್ತು’ ಎಂದು ಹೇಳಿಕೊಂಡಿದ್ದರು ಅನನ್ಯಾ.