Sign In

By signing in or creating an account, you agree with Associated Broadcasting Company's Terms & Conditions and Privacy Policy.

‘RRR’ ಚಿತ್ರತಂಡದಲ್ಲಿ ಒಳಜಗಳ; ಆಸ್ಕರ್​ ಗೆದ್ದ ಬಳಿಕ ಬಯಲಾಯ್ತು ಅಸಮಾಧಾನ

DVV Danayya | SS Rajamouli: ಗೋಲ್ಡನ್​ ಗ್ಲೋಬ್ಸ್​, ಆಸ್ಕರ್​ ಮುಂತಾದ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ‘ಆರ್​ಆರ್​ಆರ್’ ತಂಡ ತೆರಳಿತ್ತು. ಆದರೆ ಅಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಕಾಣಿಸಿಕೊಳ್ಳಲೇ ಇಲ್ಲ.

‘RRR’ ಚಿತ್ರತಂಡದಲ್ಲಿ ಒಳಜಗಳ; ಆಸ್ಕರ್​ ಗೆದ್ದ ಬಳಿಕ ಬಯಲಾಯ್ತು ಅಸಮಾಧಾನ
ರಾಜಮೌಳಿ, ಡಿವಿವಿ ದಾನಯ್ಯ, ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್
Follow us
ಮದನ್​ ಕುಮಾರ್​
|

Updated on:Mar 14, 2023 | 10:08 PM

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಚಿತ್ರ ಸೌಂಡು ಮಾಡಿದೆ. ಭಾರತೀಯ ಸಿನಿಮಾಗಳತ್ತ ಹಾಲಿವುಡ್​ ಮಂದಿ ತಿರುಗಿ ನೋಡುವಂತಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ‘ನಾಟು ನಾಟು..’ ಹಾಡಿನ (Naatu Naatu Song) ಆಸ್ಕರ್​ ಗೆಲುವು. ಇತ್ತೀಚೆಗೆ ನಡೆದ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಈ ಗೀತೆಗೆ ‘ಬೆಸ್ಟ್​ ಒರಿಜಿನಲ್​ ಸಾಂಗ್​’ ಆಸ್ಕರ್​ ಪ್ರಶಸ್ತಿ ಒಲಿಯಿತು. ಅದರ ಬೆನ್ನಲ್ಲೇ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ‘ಆರ್​ಆರ್​ಆರ್​’ ಚಿತ್ರತಂಡದಲ್ಲೇ ಒಳಜಗಳ ಇದೆ. ಈ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ (DVV Danayya) ಅವರು ಅಸಮಾಧಾನ ಮಾಡಿಕೊಂಡಿದ್ದಾರೆ. ಆ ಬಗ್ಗೆ ಟಾಲಿವುಡ್​ ಅಂಗಳಲ್ಲಿ ಗುಸುಗುಸು​ ಹಬ್ಬಿದೆ.

‘ಆರ್​ಆರ್​ಆರ್’ ಸಿನಿಮಾ ಆಸ್ಕರ್​ ಪ್ರಶಸ್ತಿ ಗೆಲ್ಲಲು ನಡೆಸಿದ ಪ್ರಯತ್ನಗಳ ಬಗ್ಗೆ ಹಲವು ಬಗೆಯ ಮಾತುಗಳು ಕೇಳಿಬಂದಿವೆ. ಈ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್​ ಸ್ಪರ್ಧೆಗೆ ಕಳಿಸಲು ನಿರ್ದೇಶಕ ರಾಜಮೌಳಿ ಸಾಕಷ್ಟು ಹಣ ಕರ್ಚು ಮಾಡಿದ್ದಾರೆ ಎಂದು ಕೂಡ ಕೆಲವರು ಆರೋಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಅವರ ಜೊತೆ ಚಿತ್ರತಂಡ ಸಂಪರ್ಕದಲ್ಲೇ ಇಲ್ಲ ಎಂಬ ಸತ್ಯ ಈಗ ಬಯಲಾಗಿದೆ.

ಇದನ್ನೂ ಓದಿ: Naatu Naatu: ಮಗನ ಸಿನಿಮಾದ ಹಾಡಿಗೆ ಆಸ್ಕರ್​ ಪ್ರಶಸ್ತಿ; ಮೆಗಾಸ್ಟಾರ್​ ಜಿರಂಜೀವಿ ಮೊದಲ ರಿಯಾಕ್ಷನ್​

ಇದನ್ನೂ ಓದಿ
Image
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Image
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
Image
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Image
Ram Charan: ‘ಭಾರತೀಯರಿಗೆ ಆಸ್ಕರ್​ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್​ ಗೋಲ್ಡ್​ ಮೆಡಲ್​ ಇದ್ದಂಗೆ’: ರಾಮ್​ ಚರಣ್​

ಗೋಲ್ಡನ್​ ಗ್ಲೋಬ್ಸ್​, ಆಸ್ಕರ್​ ಮುಂತಾದ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ‘ಆರ್​ಆರ್​ಆರ್’ ತಂಡ ತೆರಳಿದ್ದಾಗ ಅಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಕಾಣಿಸಿಕೊಳ್ಳಲೇ ಇಲ್ಲ. ರಾಜಮೌಳಿ ಜೊತೆ ಅವರಿಗೆ ಇರುವ ಅಸಮಾಧಾನದ ಕಾರಣದಿಂದಲೇ ಅವರು ತಂಡದಿಂದ ಹೊರಗೆ ಉಳಿದರು ಎಂದು ಹೇಳಲಾಗುತ್ತಿದೆ. ಈಗ ಎಎನ್​ಐ ಸುದ್ದಿ ಸಂಸ್ಥೆಗೆ ದಾನಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಶಸ್ತಿ ಬಂದಿದ್ದಕ್ಕೆ ಖುಷಿ ಇದೆ. ಆದರೆ ನಾನು ಯಾರ ಜೊತೆಯೂ ಸಂಪರ್ಕದಲ್ಲಿ ಇಲ್ಲ’ ಎಂದು ಅವರು ಹೇಳಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ

‘ಫಾರ್​ ಯುವರ್​ ಕನ್ಸಿಡರೇಷನ್​’ ಕ್ಯಾಂಪೇನ್​ ಮೂಲಕ ರಾಜಮೌಳಿ ಅವರು ‘ಆರ್​ಆರ್​ಆರ್​’ ಚಿತ್ರವನ್ನು ಆಸ್ಕರ್​ ಅಂಗಳದ ತನಕ ತೆಗೆದುಕೊಂಡು ಹೋದರು. ಇದಕ್ಕೆ ದುಡ್ಡು ಖರ್ಚು ಮಾಡುವುದು ಡಿವಿವಿ ದಾನಯ್ಯ ಅವರಿಗೆ ಇಷ್ಟ ಇರಲಿಲ್ಲ ಎನ್ನಲಾಗುತ್ತಿದೆ. ಆ ಕಾರಣದಿಂದಲೇ ಅವರು ತಂಡದಿಂದ ಹೊರಗೆ ಉಳಿದುಕೊಂಡರು ಎಂಬ ಸುದ್ದಿ ಹರಡಿದೆ. ಈ ಬಗ್ಗೆ ರಾಜಮೌಳಿ ಅಥವಾ ಚಿತ್ರತಂಡದ ಯಾರಾದರೂ ಸ್ಪಷ್ಟನೆ ನೀಡಬೇಕಿದೆ.

‘ನಾಟು ನಾಟು..’ ಹಾಡಿಗೆ ಆಸ್ಕರ್​ ಪ್ರಶಸ್ತಿ ಬಂದಿದ್ದನ್ನು ಭಾರತದ ಅನೇಕ ಸೆಲೆಬ್ರಿಟಿಗಳು ಸಂಭ್ರಮಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೂಡ ‘ಆರ್​ಆರ್​ಆರ್​’ ತಂಡಕ್ಕೆ ಶುಭ ಕೋರಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:04 pm, Tue, 14 March 23

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ