ರಾಜಮೌಳಿ (SS Rajamouli) ನಿರ್ದೇಶನದ, ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್ಟಿಆರ್ ಅಭಿನಯದ ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆಯಿತು. ಇತ್ತೀಚೆಗೆ ಈ ಚಿತ್ರ ಜಪಾನ್ನಲ್ಲೂ ರಿಲೀಸ್ ಆಗಿದೆ. ಇದರ ಪ್ರಮೋಷನ್ಗಾಗಿ ರಾಮ್ ಚರಣ್ ಅಲ್ಲಿಗೂ ತೆರಳಿದ್ದರು. ಈಗ ಅವರು ರಿಲೀಫ್ ಆಗಿದ್ದಾರೆ. ಆಫ್ರಿಕಾದಲ್ಲಿ ಅವರು ರಜೆಯ ಮಜ ಕಳೆಯುತ್ತಿದ್ದಾರೆ. ಆದರೆ, ಅವರು ವರ್ಕೌಟ್ ಮಾತ್ರ ತಪ್ಪಿಸಿಲ್ಲ. ಪಕ್ಕಾ ದೇಸಿ ಸ್ಟೈಲ್ನಲ್ಲಿ ವರ್ಕೌಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ರಾಮ್ ಚರಣ್ ಅವರು ಶೇರ್ ಮಾಡಿಕೊಂಡಿದ್ದಾರೆ.
ರಾಮ್ ಚರಣ್ ಅವರು ಈ ಮೊದಲಿನಿಂದಲೂ ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ‘ಆರ್ಆರ್ಆರ್’ ಚಿತ್ರಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದರು. ಅವರು ಆ ಚಿತ್ರಕ್ಕಾಗಿ ಹಾಕಿದ ಶ್ರಮ ಎಷ್ಟು ಎಂಬುದು ತೆರೆಮೇಲೆ ಕಾಣಿಸುತ್ತದೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬಳಿಕವೂ ಅವರು ವರ್ಕೌಟ್ ಬಿಟ್ಟಿಲ್ಲ. ಆಫ್ರಿಕಾದಲ್ಲಿಯೂ ಅವರು ವರ್ಕೌಟ್ ಮುಂದುವರಿಸಿದ್ದಾರೆ.
ಆಫ್ರಿಕಾದಲ್ಲಿ ರಾಮ್ ಚರಣ್ ಅವರಿಗೆ ವರ್ಕೌಟ್ ಮಾಡಲು ಜಿಮ್ ಸಿಕ್ಕಿಲ್ಲ. ಈ ಕಾರಣಕ್ಕೆ ಕಲ್ಲು, ರಾಡ್ಗಳನ್ನು ಬಳಕೆ ಮಾಡಿಕೊಂಡು ಡಂಬೆಲ್ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದರಲ್ಲಿಯೇ ವರ್ಕೌಟ್ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಭೇಷ್ ಎಂದಿದ್ದಾರೆ. ವರ್ಕೌಟ್ ಮಿಸ್ ಮಾಡದ ರಾಮ್ ಚರಣ್ ಬಗ್ಗೆ ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ರಾಮ್ ಚರಣ್ ಅವರು ನಿರ್ದೇಶಕ ಶಂಕರ್ ಜತೆ ಕೈ ಜೋಡಿಸುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು ನ್ಯೂಜಿಲೆಂಡ್ನಲ್ಲಿ ಶೂಟಿಂಗ್ ನಡೆಯಲಿದೆ. ವೆಕೇಶನ್ ಪೂರ್ಣಗೊಂಡ ನಂತರದಲ್ಲಿ ರಾಮ್ ಚರಣ್ ನೇರವಾಗಿ ಆಫ್ರಿಕಾದಿಂದ ನ್ಯೂಜಿಲೆಂಡ್ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಕಿಯಾರಾ ಅಡ್ವಾಣಿ ಅವರು ಚಿತ್ರದ ನಾಯಕಿ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಿಂತೇ ಹೋಯ್ತು ರಾಮ್ ಚರಣ್ ಹೊಸ ಸಿನಿಮಾ?; ರಾಜಮೌಳಿ ಎಫೆಕ್ಟ್ ಎಂದು ದೂಷಿಸಿದ ಫ್ಯಾನ್ಸ್
ರಾಮ್ ಚರಣ್ ಅವರಿಗೆ ಈ ವರ್ಷ ಗೆಲುವು ಸೋಲು ಎರಡೂ ಸಿಕ್ಕಿದೆ. ‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಬಾಚಿಕೊಂಡಿತು. ‘ಆರ್ಆರ್ಆರ್’ ಜಪಾನ್ನಲ್ಲಿ ದೊಡ್ಡ ಗೆಲುವು ಕಂಡಿದೆ. ‘ಆಚಾರ್ಯ’ ಸಿನಿಮಾ ರಿಲೀಸ್ ಆಗಿ ದೊಡ್ಡ ನಷ್ಟ ಅನುಭವಿಸಿತು.
Published On - 7:43 pm, Thu, 17 November 22