
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಅಭಿಮಾನಿಗಳು ಇಂದು (ಏ.7) ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಆದರೆ ಆ ಶುಭ ಹಾರೈಕೆಗಳನ್ನು ಸ್ವೀಕರಿಸಲು ಆರ್ಜಿವಿ ಸಿದ್ಧರಿಲ್ಲ. ಅಷ್ಟೇ ಅಲ್ಲ, ತಮಗೆ ಜನ್ಮದಿನದ ಶುಭಾಶಯ ತಿಳಿಸಿದವರಿಗೆ ಸಿಕ್ಕಾಪಟ್ಟೆ ವಿಚಿತ್ರವಾಗಿ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದನ್ನು ನೋಡಿದ ಅನೇಕರು ಶಾಕ್ ಆಗಿದ್ದಾರೆ. ಹುಟ್ಟುಹಬ್ಬದ ದಿನವೇ ಸಾವಿನ ಮಾತು ಆಡುತ್ತಿದ್ದಾರೆ ವರ್ಮಾ!
ರಾಮ್ ಗೋಪಾಲ್ ವರ್ಮಾ ಎಂದರೆ ವಿವಾದಕ್ಕೆ, ವಿಚಿತ್ರ ವರ್ತನೆಗೆ ಫೇಮಸ್. ಬರ್ತ್ಡೇ ದಿನವೂ ಅವರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಪ್ರೀತಿಯಿಂದ ಅಭಿಮಾನಿಗಳು ವಿಶ್ ಮಾಡಿದರೆ, ಅದಕ್ಕೆ ಪ್ರತಿಯಾಗಿ ಥ್ಯಾಂಕ್ಸ್ ಎನ್ನುವ ಬದಲು, ವರ್ಮಾ ‘ನೋ ಥ್ಯಾಂಕ್ಸ್’ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ‘ಇದು ನನ್ನ ಡೆತ್ ಡೇ’ ಎಂದು ಅಮಂಗಳದ ಮಾತುಗಳನ್ನು ವರ್ಮಾ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.
ರಾಮ್ ಗೋಪಾಲ್ ವರ್ಮಾ ಅವರ ಲಾಜಿಕ್ ಪ್ರಕಾರ ಜನ್ಮದಿನ ಎಂದರೆ ಅದು ಸಾವಿನ ದಿನ. ‘ಇಂದು ನನ್ನ ಬರ್ತ್ಡೇ ಅಲ್ಲ. ಇದು ಡೆತ್ ಡೇ. ಯಾಕೆಂದರೆ, ನನ್ನ ಜೀವನದ ಇನ್ನೊಂದು ವರ್ಷ ಸತ್ತುಹೋಯಿತು’ ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ. ಅಂದಹಾಗೆ, ವರ್ಮಾ ಈ ರೀತಿ ಹೇಳಿರುವುದು ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಅವರು ಈ ಮಾತನ್ನು ಹೇಳುತ್ತ ಬಂದಿದ್ದಾರೆ. ‘ನಾನು ಮಾಡಿರುವ ಪಾಪಗಳಿಂದ ನಾನು ಯಾವಾಗಲೋ ಸತ್ತು ಹೋಗಿದ್ದೇನೆ’ ಎಂದು 2013ರಲ್ಲಿಯೇ ಆರ್ಜಿವಿ ಟ್ವೀಟ್ ಮಾಡಿದ್ದರು.
ರಾಮ್ ಗೋಪಾಲ್ ವರ್ಮಾ ಅವರ ಈ ಹುಚ್ಚಾಟಗಳನ್ನು ನೋಡಿದ ಅವರ ಅಭಿಮಾನಿಗಳು ತಮ್ಮ ವರಸೆ ಕೂಡ ಬದಲಾಯಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್ಡೇ ಎಂದು ವಿಶ್ ಮಾಡುವುದು ಸಹಜ. ಆದರೆ ರಾಮ್ ಗೋಪಾಲ್ ವರ್ಮಾಗೆ ಎಲ್ಲರೂ ಅನ್ಹ್ಯಾಪಿ ಬರ್ತ್ಡೇ ಎಂದು ವಿಶ್ ಮಾಡುತ್ತಿದ್ದಾರೆ!
ಆರ್ಜಿವಿ ರೀತಿಯೇ ಅವರ ಅಭಿಮಾನಿಗಳು ಕೂಡ ವಿಲಕ್ಷಣವಾಗಿ ವರ್ತಿಸುತ್ತಿದ್ದಾರೆ, ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಹಾರೈಸುತ್ತಿದ್ದಾರೆ. #unhappybirthdayrgv ಎಂಬ ಹ್ಯಾಶ್ಟ್ಯಾಗ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Happy Birthday Ram Gopal Varma: ವಿಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಅಷ್ಟೇ ವಿಚಿತ್ರವಾದ ಬರ್ತ್ಡೇ ವಿಶ್!
Ram Gopal Varma Top 5 Movies: ಸಿನಿಮಾ ರಂಗದ ದೈತ್ಯ ಪ್ರತಿಭೆ ರಾಮ್ ಗೋಪಾಲ್ ವರ್ಮಾರ 5 ವಿಲಕ್ಷಣ ಸಿನಿಮಾಗಳಿವು
(Ram Gopal Varma Birthday: it’s not my birthday but it’s my death day says RGV)