ರಾಮಾಯಣ ಆಧರಿಸಿ ಸಿದ್ಧವಾದ ‘ಆದಿಪುರುಷ್’ (Adipurush Movie) ದೊಡ್ಡ ಮಟ್ಟದಲ್ಲಿ ಫ್ಲಾಪ್ ಆಯಿತು. ಈ ಚಿತ್ರದಿಂದ ಪ್ರಭಾಸ್ ವೃತ್ತಿ ಜೀವನಕ್ಕೆ ಹಿನ್ನಡೆ ಆಯಿತು. ಈಗ ಬಾಲಿವುಡ್ನಲ್ಲಿ ಮತ್ತೊಂದು ರಾಮಾಯಣದ ಕುರಿತ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ನಿತೀಶ್ ತಿವಾರಿ ಅವರು ರಾಮಾಯಾಣವನ್ನು ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡರೆ, ಯಶ್ ರಾವಣನಾಗಿ ಆರ್ಭಟಿಸಲಿದ್ದಾರೆ ಎಂದು ವರದಿ ಆಗಿದೆ. ಈಗ ಆಹಾರ ಕ್ರಮ ಬದಲಿಸಿಕೊಳ್ಳಲು ರಣಬೀರ್ ಕಪೂರ್ ನಿರ್ಧರಿಸಿದ್ದಾರೆ.
ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ನಟಿ ಕಂಗನಾ ಕೂಡ ಈ ಬಗ್ಗೆ ಟೀಕೆ ಮಾಡಿದ್ದರು. ಈ ವಿಚಾರದಲ್ಲಿ ರಣಬೀರ್ ಕಪೂರ್ ಅವರು ಗಂಭೀರವಾಗಿ ಸ್ವೀಕರಿಸಿದಂತಿದೆ. ಅವರು ರಾಮನ ಪಾತ್ರ ಮಾಡಲು ಮಾಂಸ ಸೇವನೆ ಹಾಗೂ ಮದ್ಯಪಾನ ತೊರೆದಿದ್ದಾರಂತೆ. ಶೂಟಿಂಗ್ ಮುಗಿಯುವವರೆಗೂ ಅವರು ಇದೇ ರೀತಿ ಇರಲಿದ್ದಾರೆ.
ಬೇರೆಯವರು ಹೇಳಿದ್ದಾರೆ ಎನ್ನುವ ಕಾರಣಕ್ಕೆ ರಣಬೀರ್ ಕಪೂರ್ ಬದಲಾಗುತ್ತಿದ್ದಾರಾ ಅಥವಾ ಇದೊಂದು ಪಬ್ಲಿಸಿಟಿ ಸ್ಟಂಟ್? ಇದಕ್ಕೆ ಉತ್ತರವೂ ಸಿಕ್ಕಿದೆ. ‘ಶೂಟಿಂಗ್ ಶುರುವಾದ ಬಳಿಕ ರಣಬೀರ್ ಅವರು ಸಂಪೂರ್ಣವಾಗಿ ಆಲ್ಕೋಹಾಲ್ ತೊರೆಯಲಿದ್ದಾರೆ. ಮಾಂಸವನ್ನೂ ಮುಟ್ಟುವುದಿಲ್ಲ. ಇದೆಲ್ಲ ಪಬ್ಲಿಸಿಟಿ ಸ್ಟಂಟ್ ಅಲ್ಲ. ತಮ್ಮನ್ನು ತಾವು ಶುದ್ಧವಾಗಿಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ’ ಎಂದು ಮೂಲಗಳು ಹೇಳಿರುವುದಾಗಿ ವರದಿ ಆಗಿದೆ.
ಇದನ್ನೂ ಓದಿ: ‘ಬ್ರಹ್ಮಾಸ್ತ್ರ 2’ ಸೆಟ್ಟೇರಿತಾ? ವೈರಲ್ ಆಗುತ್ತಿದೆ ದೀಪಿಕಾ-ರಣಬೀರ್ ಕಪೂರ್ ಪೋಸ್ಟರ್
ರಣಬೀರ್ ಕಪೂರ್ ಅವರು ‘ಅನಿಮಲ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ