‘ಪೋಷಕರು ಕಬ್ಬಡಿ ಆಡೋದು ನೋಡಿ ಮಕ್ಕಳು ಮಲಗ್ತಾರೆ’; ರಣವೀರ್ ಬಳಿಕ ಇಕ್ಕಟಿಗೆ ಸಿಲುಕಿದ ಕಪಿಲ್ ಶರ್ಮಾ

|

Updated on: Feb 14, 2025 | 7:28 AM

ರಣವೀರ್ ಅಲಾಹಾಬಾದಿಯಾ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಕಪಿಲ್ ಶರ್ಮಾ ಅವರ ಹಿಂದಿನ ಹೋಲುವ ಹೇಳಿಕೆಯೂ ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿವೆ. ‘ನೀವು ರಣವೀರ್ ಹಾಗೂ ಸಮಯ್ ರೈನಾ ಬಗ್ಗೆ ಟೀಕೆ ಹೊರ ಹಾಕುತ್ತೀರಿ ಎಂದಾದರೆ ಕಪಿಲ್ ಶರ್ಮಾ ಅವರನ್ನು ಬ್ಯಾನ್ ಮಾಡಿ’ ಎಂದು ಕೆಲವರು ಹೇಳಿದ್ದಾರೆ.

‘ಪೋಷಕರು ಕಬ್ಬಡಿ ಆಡೋದು ನೋಡಿ ಮಕ್ಕಳು ಮಲಗ್ತಾರೆ’; ರಣವೀರ್ ಬಳಿಕ ಇಕ್ಕಟಿಗೆ ಸಿಲುಕಿದ ಕಪಿಲ್ ಶರ್ಮಾ
ಕಪಿಲ್-ರಣವೀರ್
Follow us on

ಇತ್ತೀಚೆಗೆ ರಣವೀರ್ ಅಲಾಹಾಬಾದಿಯಾ ಅವರು ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ನೀಡಿದ ಹೇಳಿಕೆಯಿಂದ ಸಾಕಷ್ಟು ಚರ್ಚೆಗೆ ಒಳಗಾದರು. ‘ತಂದೆ ತಾಯಿ ಲೈಂಗಿಕೆ ಕ್ರಿಯೆ ನಡೆಸೋದನ್ನು ನೋಡುತ್ತ ಇರುತ್ತೀರಾ ಅಥವಾ ಒಮ್ಮೆ ಹೋಗಿ ಅದನ್ನು ಸ್ಟಾಪ್ ಮಾಡ್ತೀರಾ’ ಎಂದು ಕೇಳವು ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಈ ಮೊದಲು ಕಪಿಲ್ ಶರ್ಮಾ ಅವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಮುನ್ನೆಲೆಗೆ ತಂದು ಟ್ರೋಲ್ ಮಾಡಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಪಿಲ್ ಶರ್ಮಾ ಅವರ ಹಳೆಯ ವಿಡಿಯೋ ವೈರಲ್ ಮಾಡಲಾಗಿದೆ. ಮುಂಜಾನೆ ಕ್ರಿಕೆಟ್ ಮ್ಯಾಚ್ ಇದ್ದರೆ ಏನಾಗುತ್ತದೆ ಎಂಬುದನ್ನು ಕಪಿಲ್ ಶರ್ಮಾ ಅವರು ವಿವರಿಸಿದ್ದರು. ‘ಬೆಳಿಗ್ಗೆ ನಾಲ್ಕು ಗಂಟೆಗೆ ಕ್ರಿಕೆಟ್ ಮ್ಯಾಚ್ ಶುರು ಆಗುತ್ತದೆ. ಆದರೆ, ಮಕ್ಕಳು ತಂದೆ-ತಾಯಿ ಆಡೋ ಕಬ್ಬಡಿ ಮ್ಯಾಚ್ ನೋಡಿ ಮಲಗುತ್ತಾರೆ’ ಎಂದು ಹೇಳಿದ್ದರು.

ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿವೆ. ‘ನೀವು ರಣವೀರ್ ಹಾಗೂ ಸಮಯ್ ರೈನಾ ಬಗ್ಗೆ ಟೀಕೆ ಹೊರ ಹಾಕುತ್ತೀರಿ ಎಂದಾದರೆ ಕಪಿಲ್ ಶರ್ಮಾ ಅವರನ್ನು ಬ್ಯಾನ್ ಮಾಡಿ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಕಪಿಲ್ ಶರ್ಮಾ ಪರ ಬ್ಯಾಟ್ ಬೀಸಿದ್ದಾರೆ.

‘ಇಲ್ಲಿ ಕಬ್ಬಡಿ ಎಂದರೆ ನೀವು ಬೇರೆ ಅರ್ಥವನ್ನು ಏಕೆ ಕಲ್ಪಿಸಿಕೊಳ್ಳುತ್ತೀರಿ? ಅದು ಫೈಟ್ ಕೂಡ ಇರಬಹುದಲ್ಲ. ಇದು ಬ್ಯಾಡ್ ಜೋಕ್ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಈ ರೀತಿಯ ಹಾಸ್ಯಗಳು ಇಷ್ಟ ಆಗದೆ ಇದ್ದರೆ ನೀವು ಇದರಿಂದ ದೂರವೇ ಇರಿ’ ಎಂದು ಕೆಲವರು ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಪೋಷಕರ ಲೈಂಗಿಕತೆ ಬಗ್ಗೆ ಅಶ್ಲೀಲ ಹೇಳಿಕೆ; ಬ್ರೇಕಪ್​ನಲ್ಲಿ ಕೊನೆ ಆಯ್ತು ರಣವೀರ್ ಅಲಾಹಾಬಾದಿಯಾ ಪ್ರೀತಿ?

ರಣವೀರ್ ಅಲಾಹಾಬಾದಿಯಾ ವಿವಾದದ ಬಳಿಕ ಎಆರ್ ರೆಹಮಾನ್, ಬೋನಿ ಕಪೂರ್, ರಾಜ್​ಪಾಲ್ ಯಾದವ್​, ವೀರ್ ದಾಸ್ ಮೊದಲಾದವರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಬಹುತೇಕ ಎಲ್ಲರೂ ರಣವೀರ್ ಬಗ್ಗೆ ಟೀಕೆ ಹೊರಹಾಕಿದ್ದಾರೆ. ಇದರಿಂದ ರಣವೀರ್ ಸಾಕಷ್ಟು ಹಿನ್ನಡೆ ಅನುಭವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.