‘ಪಾರು ಪಾರ್ವತಿ’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡು ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ ಖುಷ್
ಕಿರುತೆರೆಯಲ್ಲಿ ಮಿಂಚಿದ ನಟಿ ದೀಪಿಕಾ ದಾಸ್ ಅವರು ಹಿರಿತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಸೀರಿಯಲ್ ಬಳಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ದೀಪಿಕಾ ದಾಸ್ ನಟನೆಯ ‘ಪಾರು ಪಾರ್ವತಿ’ ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ.

ವರ್ಷದ ಆರಂಭಿಕ ತಿಂಗಳುಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಪ್ರತಿ ವಾರ ತೆರೆ ಕಾಣುವ ಹಲವು ಸಿನಿಮಾಗಳ ನಡುವೆ ಜನರ ಮೆಚ್ಚುಗೆ ಪಡೆಯುವುದು ನಿಜಕ್ಕೂ ಚಾಲೆಂಜಿಂಗ್. ಹೀಗಿರುವಾಗ ‘ಪಾರು ಪಾರ್ವತಿ’ ಸಿನಿಮಾಗೆ ಜನರು ನೀಡಿದ ಪಾಸಿಟಿವ್ ಪ್ರತಿಕ್ರಿಯೆಯಿಂದ ಚಿತ್ರತಂಡಕ್ಕೆ ಸಂತಸ ಆಗಿದೆ. ಈ ಸಿನಿಮಾದಲ್ಲಿ ನಟಿ ದೀಪಿಕಾ ದಾಸ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಕನ್ನಡ ಸೀರಿಯಲ್ಗಳು ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆಮಾತಾದ ದೀಪಿಕಾ ದಾಸ್ ಅವರು ಈಗ ಸಿನಿಮಾಗಳ ಮೂಲಕವೂ ಮಿಂಚುತ್ತಿದ್ದಾರೆ.
ಜನವರಿ 31ರಂದು ‘ಪಾರು ಪಾರ್ವತಿ’ ಸಿನಿಮಾ ಬಿಡುಗಡೆ ಆಯಿತು. ಎಲ್ಲ ವರ್ಗದ ಪ್ರೇಕ್ಷಕರು ಬಂದು ಸಿನಿಮಾ ನೋಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಕೂಡ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ದೀಪಿಕಾ ದಾಸ್ ಅವರು ಈ ಸಿನಿಮಾದಲ್ಲಿ ಟ್ರಾವೆಲ್ ಇನ್ಫ್ಲೂಯೆನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಮೂಲಕವೇ ಈ ಸಿನಿಮಾ ಗಮನ ಸೆಳೆದಿತ್ತು. ಒಂದು ಜರ್ನಿಯ ಕಥೆ ಈ ಸಿನಿಮಾದಲ್ಲಿದೆ.
View this post on Instagram
ಕರ್ನಾಟಕ ಮಾತ್ರವಲ್ಲದೇ ಯುಕೆ ಮತ್ತು ಐರ್ಲ್ಯಾಂಡ್ನಲ್ಲಿ ಕೂಡ ‘ಪಾರು ಪಾರ್ವತಿ’ ರಿಲೀಸ್ ಆಯಿತು. ಸೀಮಿತ ಸಂಖ್ಯೆಯ ಚಿತ್ರಮಂದಿಗಳಲ್ಲಿ ಪ್ರದರ್ಶನ ಕಂಡರೂ ಆರಂಭದಲ್ಲಿ 60 ಲಕ್ಷ ರೂಪಾಯಿ ಗಳಿಕೆ ಆಯಿತು. ಹೊಸ ಸಿನಿಮಾಗಳ ಬಿಡುಗಡೆ ನಡುವೆಯೂ ಎರಡನೇ ವಾರಕ್ಕೆ ‘ಪಾರು ಪಾರ್ವತಿ’ ಕಾಲಿಟ್ಟಿದೆ. ದೀಪಿಕಾ ದಾಸ್ ಜೊತೆ ಹಿರಿಯ ನಟಿ ಪೂನಂ, ಫವಾದ್ ಅಶರ್ಫ್, ಪ್ರಶಾಂತ್ ನಟನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರದರ್ಶನ ಆಗುತ್ತಿರುವ ಹಲವು ಚಿತ್ರಮಂದಿರಗಳಿಗೆ ದೀಪಿಕಾ ದಾಸ್ ಅವರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು
‘ಪಾರು ಪಾರ್ವತಿ’ ಸಿನಿಮಾಗೆ ರೋಹಿತ್ ಕೀರ್ತಿ ಅವರು ನಿರ್ದೇಶನ ಮಾಡಿದ್ದಾರೆ. ‘Eighteen Thirty-Six Pictures’ ಬ್ಯಾನರ್ ಮೂಲಕ ಪಿ.ಬಿ. ಪ್ರೇಮನಾಥ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಕಥೆ ಡಿಫರೆಂಟ್ ಆಗಿದೆ. ಸಿನಿಮಾದ ಸಂಗೀತ, ಛಾಯಾಗ್ರಹಣಕ್ಕೂ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳಾ ಪ್ರಧಾನ ಕಥೆ ಹೊಂದಿರುವ ಈ ಚಿತ್ರವನ್ನು ಮಹಿಳಾ ಪ್ರೇಕ್ಷಕರು ಮೆಚ್ಚಿಕೊಂಡಿರುವುದು ದೀಪಿಕಾ ದಾಸ್ ಅವರಿಗೆ ಖುಷಿ ನೀಡಿದೆ. ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿಸುವ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




