ವಿಜಯ್-ರಶ್ಮಿಕಾ ಮಾನ್ಯವರ್ ‘ಮೇಡ್ ಫಾರ್ ಈಚ್ ಒದರ್ ’ ಕ್ಯಾಂಪೇನ್; 300 ಮಿಲಿಯನ್ ವೀಕ್ಷಣೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಮಾನ್ಯವರ್ ಮೋಹೆ ಜೊತೆ 'ಮೇಡ್ ಫಾರ್ ಈಚ್ ಅದರ್' ಹೆಸರಿನ ಹೊಸ ಜಾಹೀರಾತು ಅಭಿಯಾನ ಪ್ರಾರಂಭಿಸಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 72 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ, ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 300 ಮಿಲಿಯನ್ ವೀಕ್ಷಣೆ ಪಡೆದಿದೆ. ಭಾರಿ ಎಂಗೇಜ್‌ಮೆಂಟ್ ಗಳಿಸಿರುವ ಈ ಅಭಿಯಾನ ಡಿಜಿಟಲ್ ನಂತರ ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗಳಿಗೂ ಲಗ್ಗೆ ಇಡಲಿದೆ.

ವಿಜಯ್-ರಶ್ಮಿಕಾ ಮಾನ್ಯವರ್ ‘ಮೇಡ್ ಫಾರ್ ಈಚ್ ಒದರ್ ’ ಕ್ಯಾಂಪೇನ್; 300 ಮಿಲಿಯನ್ ವೀಕ್ಷಣೆ
ರಶ್ಮಿಕಾ-ವಿಜಯ್

Updated on: Mar 10, 2026 | 9:32 AM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಂತೆ ಅನೇಕ ಜಾಹೀರಾತು ಕಂಪನಿಗಳಿಂದ ಆಫರ್ ಪಡೆದರು. ಈ ಪೈಕಿ ಎಥ್ನಿಕ್ ಬಟ್ಟೆ ಬ್ರ್ಯಾಂಡ್ ಮಾನ್ಯವರ್ ಜೊತೆ ದಂಪತಿ ಕೈ ಜೋಡಿಸಿದರು. ಈಗ ಮಾನ್ಯಾವರ್ ಮೋಹೆ ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ‘ಮೇಡ್ ಫಾರ್ ಈಚ್ ಒದರ್’ ಹೆಸರಲ್ಲಿ ರಚಿಸಿರೋ ಈ ಅಭಿಯಾನ ಭರ್ಜರಿ ಮೆಚ್ಚುಗೆ ಪಡೆದಿದೆ.

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮಾನ್ಯವರ್ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಈ ಪೋಸ್ಟ್ ಇನ್​​ಸ್ಟಾಗ್ರಾಮ್ ಅಲ್ಲಿ 72 ಗಂಟೆಗಳಲ್ಲಿ 100 ಮಿಲಿಯನ್​ ವೀವ್ಸ್ ದಾಟಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ, ಈ ಅಭಿಯಾನವು ಈಗ 300 ಮಿಲಿಯನ್ ವೀವ್ಸ್ ಪಡೆದಿದೆ. ಅಲ್ಲದೆ, 250 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ತಲುಪಿದೆ.

ಪೋಸ್ಟ್ ಎಂಗೇಜ್‌ಮೆಂಟ್ ಬಗ್ಗೆ ನೋಡೋದಾದರೆ, ಈ ವಿಡಿಯೋ 4 ಲಕ್ಷಕ್ಕೂ ಹೆಚ್ಚು ಶೇರ್, 65 ಸಾವಿರ ರಿಪೋಸ್ಟ್‌ ಮತ್ತು 29,500 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಪ್ರಚಾರ್ ಕಮ್ಯುನಿಕೇಷನ್ ವ್ಯವಸ್ಥಾಪಕರು ಈ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ‘ಮೇಡ್ ಫಾರ್ ಈಚ್ ಒದರ್’ ಅಭಿಯಾನವು ಪ್ರಸ್ತುತ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾತ್ರ ನಡೆಯುತ್ತಿದೆ. ಈ ಅಭಿಯಾನವನ್ನು ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗಳಿಗೂ ಲಗ್ಗೆ ಇಡಲಿದೆ.

ಪ್ರಚಾರ್ ಕಮ್ಯುನಿಕೇಷನ್ಸ್ ನಿರ್ದೇಶಕ ರಕ್ಷಿತ್ ಜೈನ್ ಈ ಬಗ್ಗೆ ಮಾತನಾಡಿ, ‘ಕೇವಲ ಮೂರು ದಿನಗಳಲ್ಲಿ ಇಂತಹ ಅಭಿಯಾನವನ್ನು ಕಲ್ಪಿಸಿ, ಅದನ್ನು ಜಾರಿಗೊಳಿಸಲಾಗಿದೆ. ಈ ಕಲ್ಪನೆಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದಕ್ಕೆ ನಮಗೆ ಸಂತೋಷವಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ದಂಪತಿ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’; ರಶ್ಮಿಕಾ ಭಾವುಕ ಪೋಸ್ಟ್

‘ಮಾನ್ಯವರ್ ಮೋಹೆ ಅವರ ಮದುವೆ ಉಡುಗೆ ಬಗ್ಗೆ ರಶ್ಮಿಕಾ ಹಾಗೂ ವಿಜಯ್ ಸಂತಸ ಹೊರಹಾಕಿದ್ದಾರೆ. ಮಾನ್ಯವರ್ ಮೋಹೆ ಭಾವನೆಗಳು ಮತ್ತು ಕಥೆ ಹೇಳುವ ಮೂಲಕ ಮದುವೆಗಳನ್ನು ಆಚರಿಸುವ ಸುಂದರವಾದ ವಿಧಾನ’ ಎಂದಿದ್ದಾರೆ ರಶ್ಮಿಕಾ ಹಾಗೂ ವಿಜಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us