AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಯಾನ ಆರಂಭಿಸಿದ ರಶ್ಮಿಕಾ: ಏಕಕಾಲಕ್ಕೆ 400 ಬಡ ಕುಟುಂಬಗಳನ್ನು ದತ್ತು ಪಡೆದ ನಟಿ

‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು ದಸರಾ ಪ್ರಯುಕ್ತ ವಿಶ್ವಾದ್ಯಂತ ಗ್ರಾಂಡ್‌ ಆಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ್‌ ಕಾರ್ಯಗಳಲ್ಲಿ ಜೋಡಿಯಾಗಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ನಿರ್ಣಯವೊಂದನ್ನು ಪ್ರಕಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಬರೋಬ್ಬರಿ 400 ಕುಟುಂಬಗಳನ್ನು ಸುಮಾರು ಮೂರು ತಿಂಗಳಿಗೆ ದತ್ತು ಪಡೆಯಲಿದ್ದಾರೆ.

ಅಭಿಯಾನ ಆರಂಭಿಸಿದ ರಶ್ಮಿಕಾ: ಏಕಕಾಲಕ್ಕೆ 400 ಬಡ ಕುಟುಂಬಗಳನ್ನು ದತ್ತು ಪಡೆದ ನಟಿ
Rashmika Mandanna
ಮಂಜುನಾಥ ಸಿ.
|

Updated on: Oct 14, 2026 | 3:30 PM

Share

ಮುಖ್ಯಾಂಶಗಳು

  • ರಶ್ಮಿಕಾ ಮಂದಣ್ಣ ಹೃದಯ ವೈಶಾಲ್ಯ
  • 400 ಬಡ ಕುಟುಂಬಗಳ ದತ್ತು ಪಡೆದ ನಟಿ
  • ಮೂರು ತಿಂಗಳ ಕಾಲ ದಿನಸಿ ಕೊಡಿಸುತ್ತಿರುವ ನಟಿ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ನಟಿಸಿರುವ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು ದಸರಾ ಪ್ರಯುಕ್ತ ವಿಶ್ವಾದ್ಯಂತ ಗ್ರಾಂಡ್‌ ಆಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ್‌ ಕಾರ್ಯಗಳಲ್ಲಿ ಜೋಡಿಯಾಗಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ನಿರ್ಣಯವೊಂದನ್ನು ಪ್ರಕಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಬರೋಬ್ಬರಿ 400 ಕುಟುಂಬಗಳನ್ನು ಸುಮಾರು ಮೂರು ತಿಂಗಳಿಗೆ ದತ್ತು ಪಡೆಯಲಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ‘ಅನ್ನಪೂರ್ಣ’ ಹೆಸರಿನಲ್ಲಿ ಹೊಸ ಸಾಮಾಜಿಕ ಕಾರ್ಯ ಅಭಿಯಾನ ಘೋಷಿಸಿದ್ದು, ಏಕಕಾಲಕ್ಕೆ ಬಡ ಹಾಗೂ ನಿರ್ಗತಿಕ 400 ಕುಟುಂಬಗಳನ್ನು ದತ್ತು ಪಡೆದುಕೊಂಡಿದ್ದಾರೆ. ಈ ಅಭಿಯಾನದ ಮೂಲಕ ಆ 400 ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಅಗತ್ಯ ನಿತ್ಯೋಪಯೋಗಿ ವಸ್ತುಗಳು ಹಾಗೂ ರೇಷನ್‌ ಒದಗಿಸುವುದಾಗಿ ಘೋಷಿಸಿದ್ದಾರೆ. ಈ ಮಹತ್ವದ ಸೇವೆಯನ್ನು ಮುಂದಿನ ಒಂದು ವರ್ಷದವರೆಗೆ ನಿರಂತರವಾಗಿ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ, ‘ನಾವು ಮಾಡುವ ಸಣ್ಣ ಸಹಾಯ ಯಾರೋ ಒಬ್ಬರ ಬದುಕಿಗೆ ಬೆಳಕಾಗಬಹುದು. ಅಭಿಮಾನಿಗಳು ನನ್ನ ಮೇಲೆ ತೋರುತ್ತಿರುವ ಪ್ರೀತಿಗೆ ಪ್ರತಿಯಾಗಿ ನಾನೂ ಸಮಾಜಕ್ಕೆ ಏನಾದರೂ ಮರಳಿ ನೀಡಬೇಕು ಎಂದುಕೊಂಡಿದ್ದೆ. ಈ ಸಹಾಯದಿಂದ ಆ ಕುಟುಂಬಗಳು ತಮ್ಮ ಅಗತ್ಯ ವಸ್ತುಗಳ ಜೊತೆಗೆ ಭವಿಷ್ಯದ ಉಳಿತಾಯಕ್ಕೂ ಒತ್ತು ನೀಡಬಹುದು ಎಂಬ ಆಶಯವಿದೆ’ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಅವರ ಈ ಸಾಮಾಜಿಕ ಕಳಕಳಿಗೆ ಸಿನಿರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾರ ‘ರಣಬಾಲಿ’ ಸಿನಿಮಾಕ್ಕೆ ಅಣ್ಣಾಮಲೈ ಬೆಂಬಲ

ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಇದು ಮೊದಲೇನೂ ಅಲ್ಲ. ಫೆಬ್ರವರಿ ತಿಂಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಅವರು ಮದುವೆ ಆಗುವ ಸಮಯದಲ್ಲಿಯೂ ಸಹ ‘ದೇವರಕೊಂಡ ಫೌಂಡೇಶನ್’ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಅವರು ಆರಂಭಿಸಿದ್ದರು. ವಿಶೇಷವಾಗಿ ವಿದ್ಯಾರ್ಥಿ ವೇತನಗಳನ್ನು ಅವರಿಬ್ಬರೂ ಜಂಟಿಯಾಗಿ ನೀಡಿದ್ದರಲ್ಲದೆ, ಇನ್ನು ಮುಂದೆ ಪ್ರತಿವರ್ಷವೂ ನೀಡುವುದಾಗಿ ಘೋಷಣೆ ಮಾಡಿದ್ದರು. ಈಗ ರಶ್ಮಿಕಾ ಅವರು ಒಟ್ಟಿಗೆ 400 ಕುಟುಂಬಗಳಿಗೆ ದಿನಸಿ, ದಿನನಿತ್ಯದ ಸಾಮಗ್ರಿಗಳನ್ನು ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ರಶ್ಮಿಕಾ ಸಹ ಆಶ್ರಯ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More