ಹಳೆಯ ಸಿನಿಮಾ ಸೋಲನ್ನು ನೆನಪಿಸಿಕೊಂಡ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ‘ರಣಬಾಲಿ’ ಸಿನಿಮಾನಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು, ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಯನ್ನು ವಿಜಯ್ ಇರಿಸಿಕೊಂಡಿದ್ದಾರೆ. ಸಿನಿಮಾದ ಪ್ರೀ-ರಿಲೀಸ್ ನಿನ್ನೆ (ಅಕ್ಟೋಬರ್ 13) ನಡೆದಿದ್ದು, ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಹಳೆಯ ಸಿನಿಮಾದ ಸೋಲನ್ನು ನೆನಪು ಮಾಡಿಕೊಂಡಿದ್ದಾರೆ.

ಮುಖ್ಯಾಂಶಗಳು
- ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಸಿನಿಮಾ
- ಪ್ರೀ ರಿಲೀಸ್ನಲ್ಲಿ ಹಳೆ ಸಿನಿಮಾ ನೆನಪಿಸಿಕೊಂಡ ವಿಜಯ್
- ಫ್ಲಾಫ್ ಸಿನಿಮಾ ‘ನೋಟಾ’ ನೆನಪಿಸಿಕೊಂಡ ವಿಜಯ್
ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಸಿನಿಮಾ ಇನ್ನೆರಡು ದಿನಗಳಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಈ ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಹಿಂದೆ ಅವರು ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾನಲ್ಲಿ ನಟಿಸಿದ್ದರು. ಆ ಎರಡೂ ಸಿನಿಮಾ ಹಿಟ್ ಆಗಿದ್ದವು. ಅದಾದ ಬಳಿಕ ವಿಜಯ್ ನಟಿಸಿರುವ ಯಾವೊಂದು ಸಿನಿಮಾ ಸಹ ದೊಡ್ಡ ಹಿಟ್ ಆಗಿಲ್ಲ. ಇದೀಗ ‘ರಣಬಾಲಿ’ ಸಿನಿಮಾನಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು, ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಯನ್ನು ವಿಜಯ್ ಇರಿಸಿಕೊಂಡಿದ್ದಾರೆ. ಸಿನಿಮಾದ ಪ್ರೀ-ರಿಲೀಸ್ ನಿನ್ನೆ (ಅಕ್ಟೋಬರ್ 13) ನಡೆದಿದ್ದು, ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಹಳೆಯ ಸಿನಿಮಾದ ಸೋಲನ್ನು ನೆನಪು ಮಾಡಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ತಮ್ಮ 2018ರ ಸಿನಿಮಾ ‘ನೋಟಾ’ ಅನ್ನು ನೆನಪು ಮಾಡಿಕೊಂಡರು. ಆ ಸಿನಿಮಾ ದೊಡ್ಡ ಫ್ಲಾಪ್ ಆಗಿತ್ತು. ಅದಾದ ಬಳಿಕ ಅವರು ‘ಟ್ಯಾಕ್ಸಿವಾಲಾ’ ಸಿನಿಮಾನಲ್ಲಿ ನಾಯಕನಾಗಿ ನಟಿಸಿದರು. ಆ ಸಿನಿಮಾವನ್ನು ಈಗ ‘ರಣಬಾಲಿ’ ಸಿನಿಮಾ ನಿರ್ದೇಶಿಸಿರುವ ರಾಹುಲ್ ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಪ್ರೀ ರಿಲೀಸ್ನಲ್ಲಿ ಮಾತನಾಡಿದ್ದ ವಿಡಿಯೋ ಅನ್ನು ‘ರಣಬಾಲಿ’ ಪ್ರೀ ರಿಲೀಸ್ನಲ್ಲಿ ಪ್ರದರ್ಶಿಸಲಾಯ್ತು.
‘ಟ್ಯಾಕ್ಸಿವಾಲಾ’ ಇವೆಂಟ್ನಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ, ‘ಐ ವಿಲ್ ಬಿ ಬ್ಯಾಕ್’ ಎಂದಿದ್ದರು. ಆ ಬಗ್ಗೆ ಈಗ ಮಾತಾಡಿದ ವಿಜಯ್ ದೇವರಕೊಂಡ, ‘ಆಗ ನನ್ನ ‘ನೋಟಾ’ ಸಿನಿಮಾ ಸೋತಿತ್ತು. ಆ ಕಾರಣಕ್ಕಾಗಿ ಕೆಲವು ಜನರ ನನ್ನ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಬಳಿಕ ರಾಹುಲ್ ಜೊತೆಗೆ ‘ಟ್ಯಾಕ್ಸಿವಾಲಾ’ ಮಾಡಿದೆ ಆ ಸಿನಿಮಾದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದ್ದೆ. ಅದರತೆ ನಾನು ಮತ್ತೆ ಬಂದಿದ್ದೇನೆ. ಈ ಸಿನಿಮಾಕ್ಕೂ ನಾನು ಅದೇ ಮಾತನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ವಿಜಯ್ ದೇವರಕೊಂಡ.
ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾರ ‘ರಣಬಾಲಿ’ ಸಿನಿಮಾಕ್ಕೆ ಅಣ್ಣಾಮಲೈ ಬೆಂಬಲ
ಅದೇ ಕಾರ್ಯಕ್ರಮದಲ್ಲಿ ಪತ್ನಿ, ನಟಿ ರಶ್ಮಿಕಾ ಬಗ್ಗೆಯೂ ಮಾತನಾಡಿದ ವಿಜಯ್, ‘ರಶ್ಮಿಕಾ ನಾನು ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದು. ಈ ಸಿನಿಮಾದ ನಾಯಕಿಯಾದ ಜಯಮ್ಮ ಪಾತ್ರಕ್ಕೆ ರಶ್ಮಿಕಾ ಅವರೇ ಇರಬೇಕು ಎಂದು ನಾವು ಮೊದಲಿನಿಂದಲೂ ಅಂದುಕೊಂಡೆವು. ಈ ಪಾತ್ರದ ತೂಕವನ್ನು ಅವರೇ ನಿಭಾಯಿಸಬಲ್ಲರು. ಚಿತ್ರರಂಗದಲ್ಲಿ, ವೃತ್ತಿಯಲ್ಲಿ, ಪ್ರತಿಭೆಯಲ್ಲಿ ಬೆಳೆದಿರುವ ರೀತಿ ಅದ್ಭುತವಾದುದು. ಅವರ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ’ ಎಂದಿದ್ದಾರೆ ವಿಜಯ್.
‘ರಣಬಾಲಿ’ ಸಿನಿಮಾ ಸ್ವಾತಂತ್ರ್ಯ ಪೂರ್ವದ ಕತೆ ಹೊಂದಿದ್ದು, ಸಿನಿಮಾನಲ್ಲಿ ವಿಜಯ್, ರಶ್ಮಿಕಾ ಜೊತೆಗೆ ಹಾಲಿವುಡ್ ಸ್ಟಾರ್ ನಟ ಅರ್ನಾಲ್ಡ್ ವೋಸ್ಲೊ ವಿಲನ್ ಆಗಿ ನಟನೆ ಮಾಡಿದ್ದಾರೆ. ರಾಹುಲ್ ನಿರ್ದೇಶಿಸಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




