ವಿಜಯ್ ದೇವರಕೊಂಡ-ರಶ್ಮಿಕಾರ ‘ರಣಬಾಲಿ’ ಸಿನಿಮಾಕ್ಕೆ ಅಣ್ಣಾಮಲೈ ಬೆಂಬಲ
ರಾಷ್ಟ್ರಪ್ರೇಮ ಎತ್ತಿಹಿಡಿಯುವ ಸಿನಿಮಾ ಇದಾಗಿದ್ದು, ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದ ಗ್ರಾಮವೊಂದರ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಅವರಿಗಂತೂ ಈ ಸಿನಿಮಾದ ಗೆಲುವು ಅತ್ಯಂತ ಅವಶ್ಯಕವಾಗಿದೆ. ಇದೀಗ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಹ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.

ಮುಖ್ಯಾಂಶಗಳು
- ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಿನಿಮಾ
- ‘ರಣಬಾಲಿ’ ಸಿನಿಮಾಕ್ಕೆ ಅಣ್ಣಾಮಲೈ ಬೆಂಬಲ
- ಅಣ್ಣಾಮಲೈ, ಸಾಯಿ ದೀಪಕ್ ‘ರಣಬಾಲಿ’ಗೆ ಬೆಂಬಲಿಸಿದ್ದಾರೆ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ‘ರಣಬಾಲಿ’ ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗಲಿದೆ. ರಾಷ್ಟ್ರಪ್ರೇಮ ಎತ್ತಿಹಿಡಿಯುವ ಸಿನಿಮಾ ಇದಾಗಿದ್ದು, ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದ ಗ್ರಾಮವೊಂದರ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಅವರಿಗಂತೂ ಈ ಸಿನಿಮಾದ ಗೆಲುವು ಅತ್ಯಂತ ಅವಶ್ಯಕವಾಗಿದೆ. ಇದೀಗ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಹ ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ.
ನಾಯಕ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯಾನ್ ಅವರೊಂದಿಗೆ ಅಣ್ಣಾಮಲೈ ಒಂದು ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಶನದಲ್ಲಿ ಸುಪ್ರೀಂ ಕೋರ್ಟ್ ವಕೀಲ, ಹಿಂದುತ್ವದ ಪ್ರತಿಪಾದಕ ಸಹ ಆಗಿರುವ ಸಾಯಿ ದೀಪಕ್ ಕೂಡ ಉಪಸ್ಥಿತರಿದ್ದಿದ್ದು ವಿಶೇಷ.
ಕೇವಲ ಸಿನಿಮಾದ ಕಥೆ ಅಥವಾ ಔಪಚಾರಿಕ ವಿಷಯಗಳಷ್ಟೇ ಅಲ್ಲದೆ, ಭಾರತೀಯ ಇತಿಹಾಸ, ಬ್ರಿಟೀಷರ ಆಡಳಿದ ಪರಿಣಾಮಗಳು ಮತ್ತು ಇತರ ಪ್ರಮುಖ ಐತಿಹಾಸಿಕ ಅಂಶಗಳ ಕುರಿತು ಈ ಇವರುಗಳು ಆಳವಾದ ಚರ್ಚೆ ನಡೆಸಿರುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ತಿಳಿಸಿದೆ. ಸಿನಿಮಾದ ಪ್ರಚಾರಕ್ಕಾಗಿ ಈ ರೀತಿಯ ರಾಜಕೀಯ ಮತ್ತು ಕಾನೂನು ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಒಂದಾಗಿರುವುದು ವಿಶೇಷ.
ಇದನ್ನೂ ಓದಿ:‘ರಣಬಾಲಿ’ ಟ್ರೇಲರ್; ಹೇಗಿದೆ ವಿಜಯ್ ದೇವರಕೊಂಡ-ರಶ್ಮಿಕಾ ಸಿನಿಮಾದ ಝಲಕ್?
1854 ರಿಂದ 1878ರ ನಡುವಿನ ಬ್ರಿಟಿಷ್ ಇಂಡಿಯಾ ಕಾಲಘಟ್ಟದಲ್ಲಿ ರಾಯಲಸೀಮೆಯಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ಆಧರಿಸಿದ ‘ರಣಬಾಲಿ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಾರಿತ್ರಿಕ ಹಿನ್ನೆಲೆಗೆ ಭರ್ಜರಿ ಆಕ್ಷನ್ ಹಾಗೂ ಭಾವನಾತ್ಮಕ ದೃಶ್ಯಗಳನ್ನು ಬೆರೆಸಿ ನಿರ್ದೇಶಕ ರಾಹುಲ್ ಸಂಕೃತ್ಯಾನ್ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಇದರಲ್ಲಿ ವಿಜಯ್ ದೇವರಕೊಂಡ ‘ಶಿಂಗನಮಲ ಬೊಬ್ಬಿಲಿ ರಣಬಾಲಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ರಶ್ಮಿಕಾ ಮಂದಣ್ಣ ಅವರ ಪತ್ನಿ ‘ಜಯಮ್ಮ’ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಲಿವುಡ್ನ ಖ್ಯಾತ ಖಳನಟ ಅರ್ನಾಲ್ಡ್ ವೋಸ್ಲೊ ಅವರು ಸಿನಿಮಾನಲ್ಲಿ ವಿಲನ್ ಆಗಿ ನಟನೆ ಮಾಡುತ್ತಿದ್ದಾರೆ.
ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 16ರಂದು ಈ ಚಿತ್ರವು ಪ್ರಪಂಚದಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಳ್ಳಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಹಾಗೂ ಪೋಸ್ಟರ್‌ಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಅಣ್ಣಾಮಲೈ ಅವರೊಂದಿಗಿನ ಈ ವಿಶೇಷ ಸಂದರ್ಶನದ ವೀಡಿಯೊವನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




