AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಣಬಾಲಿ’ ಟ್ರೇಲರ್; ಹೇಗಿದೆ ವಿಜಯ್ ದೇವರಕೊಂಡ-ರಶ್ಮಿಕಾ ಸಿನಿಮಾದ ಝಲಕ್?

ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ 'ರಣಬಾಲಿ' ಸಿನಿಮಾದ ಅದ್ಧೂರಿ ಟ್ರೇಲರ್ ಬಿಡುಗಡೆಯಾಗಿದೆ. ಬ್ರಿಟಿಷ್ ಕಾಲದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಜಯ್ ರಗಡ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ಅಕ್ಟೋಬರ್ 16 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.

‘ರಣಬಾಲಿ’ ಟ್ರೇಲರ್; ಹೇಗಿದೆ ವಿಜಯ್ ದೇವರಕೊಂಡ-ರಶ್ಮಿಕಾ ಸಿನಿಮಾದ ಝಲಕ್?
ವಿಜಯ್-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Oct 09, 2026 | 9:02 AM

Share

ಮುಖ್ಯಾಂಶಗಳು

  • 'ರಣಬಾಲಿ' ಟ್ರೇಲರ್ ಧಮಾಕ
  • ವಿಜಯ್ ದೇವರಕೊಂಡ ರಗಡ್ ಅವತಾರಕ್ಕೆ ಫ್ಯಾನ್ಸ್ ಫಿದಾ
  • ರಾಯಲಸೀಮಾ ಶೈಲಿ, ಭೀಕರ ಆಕ್ಷನ್  

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಿರ್ದೇಶಕ ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಟ್ರೇಲರ್ ಗಮನ ಸೆಳೆದಿದೆ. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ನಡೆದ ಶೋಷಣೆಯ ವಿರುದ್ಧ ರೂಪುಗೊಳ್ಳುವ ಹೋರಾಟದ ಕಥೆಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ವಿಜಯ್-ರಶ್ಮಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಆಗಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಸಾಮಾನ್ಯವಾಗಿ ಟ್ರೇಲರ್ ಆರಂಭದಲ್ಲಿ ನಾಯಕನ ಅಬ್ಬರ ತೋರಿಸಲಾಗುತ್ತದೆ. ಆದರೆ, ‘ರಣಬಾಲಿ’ ಟ್ರೇಲರ್​​ನಲ್ಲಿ ಜನರ ಸಂಕಟ ಮತ್ತು ನೋವನ್ನು ತೋರಿಸಲಾಗಿದೆ. ಈ ಭಾವುಕ ಸನ್ನಿವೇಶವೇ ನಾಯಕನ ಬದಲಾವಣೆಗೆ ಕಾರಣವಾಗುತ್ತದೆ. ಆ ನಂತರ ನಟ ವಿಜಯ್ ದೇವರಕೊಂಡ ಸಿಂಗನಮಲ ಬೊಬ್ಬಿಲಿ ರಣಬಾಲಿ ಪಾತ್ರದಲ್ಲಿ ಅಖಾಡಕ್ಕೆ ಧುಮುಕುತ್ತಾರೆ. ತಮ್ಮ ರಗಡ್ ಲುಕ್ ಮೂಲಕ ಅವರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ.

ರಾಯಲಸೀಮಾ ಶೈಲಿಯ ತೆಲುಗು ಸಂಭಾಷಣೆಗಳು ‘ರಣಬಾಲಿ’ ಚಿತ್ರದಲ್ಲಿ ಬಳಕೆ ಆಗಿದೆ. ವ್ಯವಸ್ಥೆಯ ವಿರುದ್ಧ ರಣಬಾಲಿ ಯಾವ ರೀತಿ ಹೋರಾಡುತ್ತಾರೆ ಎಂಬುದು ಸಿನಿಮಾದ ಕಥೆ. ಚಿತ್ರದ ಸಾಹಸ ಸನ್ನಿವೇಶಗಳು ಗಮನ ಸೆಳೆದಿವೆ. ರಶ್ಮಿಕಾ ಮಂದಣ್ಣ ವಿಜಯ್ ಅವರ ಪತ್ನಿ ಜಯಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಸಿನಿಮಾ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳನ್ನು ಅಪ್ಪಳಿಸಲಿದೆ. ಈ ಚಿತ್ರವನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ವಿಜಯ್ ದೇವರಕೊಂಡ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರಿಗೆ ಒಂದು ದೊಡ್ಡ ಗೆಲುವು ಬೇಕಿದೆ. ‘ರಣಬಾಲಿ’ ಅವರಿಗೆ ದೊಡ್ಡ ಗೆಲುವು ಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More