AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ತಿರುಪತಿ ಸನ್ನಿಧಿಗೆ ‘ರಣಬಾಲಿ’ ಲುಕ್​​ನಲ್ಲೇ ಬಂದ ವಿಜಯ್ ದೇವರಕೊಂಡ-ರಶ್ಮಿಕಾ

Vijay Deverakonda Rashmika Mandanna Visit TTD: ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ‘ರಣಬಾಲಿ’ ಯ ಪ್ರಚಾರವನ್ನು ಬಲು ಜೋರಾಗಿ ಮಾಡಲಾಗುತ್ತಿದೆ. ಇದೀಗ ಈ ಜೋಡಿ ಜಂಟಿಯಾಗಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ್ದು, ತಿಮ್ಮಪ್ಪನ ಆಶೀರ್ವಾದವನ್ನು ಪಡೆದಿದ್ದಾರೆ. ದಂಪತಿ ತಿರುಮಲ ದೇವಾಲಯಕ್ಕೆ ಆಗಮಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

Rashmika Mandanna: ತಿರುಪತಿ ಸನ್ನಿಧಿಗೆ ‘ರಣಬಾಲಿ’ ಲುಕ್​​ನಲ್ಲೇ ಬಂದ ವಿಜಯ್ ದೇವರಕೊಂಡ-ರಶ್ಮಿಕಾ
Vijay Deverakonda Rashmika
ಮಂಜುನಾಥ ಸಿ.
|

Updated on:Oct 13, 2026 | 11:11 AM

Share

ಮುಖ್ಯಾಂಶಗಳು

  • ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ
  • ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ದಂಪತಿ
  • ‘ರಣಬಾಲಿ’ ಸಿನಿಮಾದ ಪ್ರಚಾರದ ಭಾಗವಾಗಿ ಭೇಟಿ

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ದಂಪತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರು ತಮ್ಮ ಹೊಸ ಸಿನಿಮಾ ‘ರಣಬಾಲಿ’ಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಬ್ಬರೂ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಚಾರವನ್ನು ಬಲು ಜೋರಾಗಿ ಮಾಡುತ್ತಿದ್ದಾರೆ. ಇದೀಗ ಈ ಜೋಡಿ ಜಂಟಿಯಾಗಿ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದ್ದು, ತಿಮ್ಮಪ್ಪನ ಆಶೀರ್ವಾದವನ್ನು ಪಡೆದಿದ್ದಾರೆ. ದಂಪತಿ ತಿರುಮಲ ದೇವಾಲಯಕ್ಕೆ ಆಗಮಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

ವಿಶೇಷವೆಂದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರು ‘ರಣಬಾಲಿ’ ಸಿನಿಮಾದ ಲುಕ್​​ನಲ್ಲಿಯೇ ದೇವಾಲಯಕ್ಕೆ ಭೇಟಿ ನೀಡಿದ್ದರು. ವಿಶೇಷವಾಗಿ ವಿಜಯ್ ದೇವರಕೊಂಡ ಅವರು ‘ರಣಬಾಲಿ’ ಸಿನಿಮಾನಲ್ಲಿ ಧರಿಸಿರುವ ರೀತಿಯ ದೋತಿ, ಬಿಳಿಯ ಕುರ್ತಾ ಮಾದರಿಯ ಶರ್ಟ್ ಧರಿಸಿ ಬಂದಿದ್ದರು. ಇನ್ನು ರಶ್ಮಿಕಾ ಮಂದಣ್ಣ, ಹಸಿರು ಬಣ್ಣದ ಸುಂದರ ಸೀರೆಯುಟ್ಟು ಆಗಮಿಸಿದ್ದರು. ದೇವಾಲಯಕ್ಕೆ ಆಗಮಿಸಿದ ಸ್ಟಾರ್ ನಟ-ನಟಿಯರನ್ನು ಕಾಣಲು ಜನ ಮುಗಿಬಿದ್ದಿದ್ದರು. ಈ ವೇಳೆ ತುಸು ನೂಕಾಟ-ತಳ್ಳಾಟವೂ ನಡೆದಿದ್ದು, ವಿಜಯ್ ಅವರು ಪತ್ನಿ ರಶ್ಮಿಕಾರನ್ನು ಜಾಗೃತೆಯಿಂದ ಕರೆದುಕೊಂಡು ಹೋಗುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.

ರಶ್ಮಿಕಾ-ವಿಜಯ್ ತಿರುಪತಿ ಭೇಟಿ ವಿಡಿಯೋ

ರಶ್ಮಿಕಾ ಮತ್ತು ವಿಜಯ್ ಅವರು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರಿ ಅದ್ಧೂರಿಯಾಗಿ ವಿವಾಹವಾದರು. ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆಯಾದ ಬಳಿಕವೂ ಸಹ ಇವರು ಕೆಲ ದೇವಾಲಯಗಳಿಗೆ ಒಟ್ಟಿಗೆ ತೆರಳಿದ್ದರು.

ನಿನ್ನೆ (ಅಕ್ಟೋಬರ್ 13) ವಿಜಯ್ ಮತ್ತು ರಶ್ಮಿಕಾ ಅವರು ತಮಿಳುನಾಡು ಸಿಎಂ ವಿಜಯ್ ಅವರನ್ನು ಸಹ ಭೇಟಿ ಮಾಡಿದ್ದಾರೆ. ‘ರಣಬಾಲಿ’ ಸಿನಿಮಾ ಪ್ರಚಾರಕ್ಕಾಗಿ ತಮಿಳುನಾಡಿಗೆ ತೆರಳಿದ್ದಾಗ ಅಲ್ಲಿಯೇ ಸಿಎಂ ಅವರನ್ನು ಸಹ ಭೇಟಿ ಮಾಡಿ ಕೆಲ ಸಮಯ ಮಾತನಾಡಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ಅವರು ಒಟ್ಟಿಗೆ ‘ರಣಬಾಲಿ’ ಸಿನಿಮಾನಲ್ಲಿ ನಟಿಸಿದ್ದು, ಬ್ರಿಟೀಷರ ವಿರುದ್ಧದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ವಿಲನ್ ಆಗಿ ಹಾಲಿವುಡ್​​ನ ಸ್ಟಾರ್ ನಟ ಅರ್ನಾಲ್ಡ್ ವೋಸ್ಲೊ ನಟನೆ ಮಾಡಿರುವುದು ವಿಶೇಷ. ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 am, Tue, 13 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ