‘ನಾನು ಒಮ್ಮೆ ಮಾತನಾಡಿದ್ರೆ ಮೂರು ವಿವಾದ ಆಗುತ್ತೆ’; ಹೊಸ ಸಿನಿಮಾ ಘೋಷಿಸಿ ಬೇಸರಗೊಂಡ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ಮೈತ್ರಿ ಮೂವಿ ಮೇಕರ್ಸ್ ‘ಪುಷ್ಪ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ‘ಪುಷ್ಪ 2’ ಚಿತ್ರದ ಕೆಲಸಗಳು ನಡೆಯುತ್ತಿರುವಾಗಲೇ ಅವರು ರಶ್ಮಿಕಾ ಜೊತೆ ಕೈ ಜೋಡಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ಪ್ರತಿ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ರಶ್ಮಿಕಾ ಕೈಯಲ್ಲಿ ಎರಡು ದೊಡ್ಡ ಬಜೆಟ್ ಚಿತ್ರ ಕೂಡ ಇದೆ. ಹೀಗಿರುವಾಗಲೇ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಯುಗಾದಿ ಪ್ರಯುಕ್ತ ಈ ವಿಚಾರ ರಿವೀಲ್ ಆಗಿದೆ. ಇದು ಹಿಟ್ ಕಾಂಬಿನೇಷನ್​​ನ ಸಮಾಗಮ ಅನ್ನೋದು ವಿಶೇಷ. ಸಿನಿಮಾ ಬಗ್ಗೆ ಮಾಹಿತಿ ನೀಡೋಕೆ ಮಾಡಿದ ಹೊಸ ವಿಡಿಯೋ ಸಖತ್ ಫನ್ನಿ ಆಗಿದೆ. ಇದರಲ್ಲಿ ರಶ್ಮಿಕಾ ವಿವಾದಗಳ ಬಗ್ಗೆ ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿದ್ದು ‘ಚಲೋ’ ಸಿನಿಮಾ ಮೂಲಕ. ವೆಂಕಿ ಕುಡುಮುಲ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ವೆಂಕಿ ನಿರ್ದೇಶನದ, ರಶ್ಮಿಕಾ-ನಿತೀನ್ ನಟನೆಯ ‘ಭೀಷ್ಮ’ ಸಿನಿಮಾ ಕೂಡ ಗೆದ್ದಿತು. ಈಗ ನಿತೀನ್, ವೆಂಕಿ ಹಾಗೂ ರಶ್ಮಿಕಾ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ಪುಷ್ಪ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.

ವೆಂಕಿ ನಿರ್ದೇಶನದ ಸಿನಿಮಾ ಹಾಸ್ಯ ಪ್ರಧಾನವಾಗಿರುತ್ತದೆ. ಜೊತೆಗೆ ರೊಮ್ಯಾಂಟಿಕ್ ಅಂಶವೂ ಇರುತ್ತದೆ. ‘ಚಲೋ’ ಹಾಗೂ ‘ಭೀಷ್ಮ’ ಗೆಲ್ಲಲು ಇದೇ ಅಂಶ ಕಾರಣ ಆಗಿತ್ತು. ಈಗ ವೆಂಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಕಾಮಿಡಿ ಹೈಲೈಟ್ ಆಗಲಿದೆ. ಅವರು ರಶ್ಮಿಕಾ ಜೊತೆ ಮಾಡುತ್ತಿರುವ ಮೂರನೇ ಸಿನಿಮಾ ಇದು ಅನ್ನೋದು ವಿಶೇಷ.

ಇದನ್ನೂ ಓದಿ: ‘ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡ್ತೀನಿ’: ಕಲಿತ ಸಂಸ್ಕಾರದ ಬಗ್ಗೆ ರಶ್ಮಿಕಾ ಮಂದಣ್ಣ ಮಾತು

ರಶ್ಮಿಕಾ ಮಂದಣ್ಣ ಹಾಗೂ ಮೈತ್ರಿ ಮೂವಿ ಮೇಕರ್ಸ್ ‘ಪುಷ್ಪ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ‘ಪುಷ್ಪ 2’ ಚಿತ್ರದ ಕೆಲಸಗಳು ನಡೆಯುತ್ತಿರುವಾಗಲೇ ಅವರು ರಶ್ಮಿಕಾ ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕಾಗಿ ರಶ್ಮಿಕಾ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ಅಂತಿಮವಾಗಬೇಕಿದೆ. ಈ ಸಿನಿಮಾದ ಪ್ರೋಮೋ ಹೈಲೈಟ್ ಆಗಿದೆ.

ಇದನ್ನೂ ಓದಿ: ಇನ್ಮುಂದೆ ‘ಸಾಮಿ ಸಾಮಿ..’ ಸ್ಟೆಪ್ ಮಾಡದಿರಲು ನಿರ್ಧರಿಸಿದ ರಶ್ಮಿಕಾ ಮಂದಣ್ಣ; ಕಾರಣ ತಿಳಿಸಿದ ನಟಿ

ನಿತೀನ್ ವಿವಾದದ ವಿಚಾರ ಎತ್ತುತ್ತಾರೆ. ‘ವಿವಾದದ ಬಗ್ಗೆ ಮಾತ್ರ ಮಾತನಾಡಬೇಡಿ. ನಾನು ಒಮ್ಮೆ ಮಾತನಾಡಿದರೆ ಮೂರು ವಿವಾದ ಆಗುತ್ತದೆ’ ಎಂದು ಬೇಸರಗೊಳ್ಳುತ್ತಾರೆ ರಶ್ಮಿಕಾ. ಇದಕ್ಕೆ ಉತ್ತರಿಸಿರೋ ನಿತೀನ್, ‘ನಿಮ್ಮದೇ ಬೆಟರ್. ನಾನು ಒಂದು ಸಿನಿಮಾ ಹಿಟ್ ಕೊಟ್ಟರೆ ಮೂರು ಫ್ಲಾಪ್ ಕೊಡ್ತೀನಿ’ ಎಂದು ನಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us