AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ‘ಸಾಮಿ ಸಾಮಿ..’ ಸ್ಟೆಪ್ ಮಾಡದಿರಲು ನಿರ್ಧರಿಸಿದ ರಶ್ಮಿಕಾ ಮಂದಣ್ಣ; ಕಾರಣ ತಿಳಿಸಿದ ನಟಿ

ಇತ್ತೀಚೆಗೆ ರಶ್ಮಿಕಾ ಟ್ವಿಟರ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಮಾಡಿದ್ದರು. ಅವರಿಗೆ ಎದುರಾದ ಕೆಲ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದರು.

ಇನ್ಮುಂದೆ ‘ಸಾಮಿ ಸಾಮಿ..’ ಸ್ಟೆಪ್ ಮಾಡದಿರಲು ನಿರ್ಧರಿಸಿದ ರಶ್ಮಿಕಾ ಮಂದಣ್ಣ; ಕಾರಣ ತಿಳಿಸಿದ ನಟಿ
ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on:Mar 22, 2023 | 9:08 AM

Share

‘ಪುಷ್ಪ’ ಸಿನಿಮಾ (Pushpa Movie) ರಿಲೀಸ್ ಆಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ಚಿತ್ರದ ಬಗೆಗಿನ ಟಾಕ್ ಮಾತ್ರ ಇನ್ನೂ ನಿಂತಿಲ್ಲ. ಈ ಚಿತ್ರದ ‘ಸಾಮಿ ಸಾಮಿ..’ ಹಾಡು ಸಖತ್ ಫೇಮಸ್ ಆಯಿತು. ಇದರಲ್ಲಿ ರಶ್ಮಿಕಾ ಮಂದಣ್ಣ ಅವರ ಸ್ಟೆಪ್​ನ ಅನೇಕರು ಇಷ್ಟಪಟ್ಟಿದ್ದರು. ಈಗಲೂ ಹಲವು ವೇದಿಕೆ ಮೇಲೆ ರಶ್ಮಿಕಾ (Rashmika Mandanna) ಈ ಸ್ಟೆಪ್ ಹಾಕುತ್ತಾರೆ. ಆದರೆ, ಇನ್ಮುಂದೆ ಅವರು ಈ ಸ್ಟೆಪ್​ನ ಹಾಕದಿರಲು ನಿರ್ಧರಿಸಿದ್ದಾರೆ. ಸ್ವತಃ ಈ ವಿಚಾರವನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಇದನ್ನು ಅವರು ಗಂಭೀರವಾಗಿ ಹೇಳಿದರೋ ಅಥವಾ ಹಾಸ್ಯದ ರೀತಿಯಲ್ಲಿ ಹೇಳಿದರೋ ಎಂಬುದು ತಿಳಿದಿಲ್ಲ.

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇನ್​ಸ್ಟಾಗ್ರಾಮ್, ಟ್ವಿಟರ್​ಗಳಲ್ಲಿ ಅವರು ಪೋಸ್ಟ್​ಗಳನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ಟ್ವಿಟರ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಕೆಲಸ ಮಾಡಿದ್ದರು. ಅವರಿಗೆ ಎದುರಾದ ಕೆಲ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದರು. ಇದರಲ್ಲಿ ‘ಸಾಮಿ ಸಾಮಿ..’ ಹಾಡಿನ ವಿಚಾರವೂ ಪ್ರಸ್ತಾಪ ಆಗಿತ್ತು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದೆ ಎಂದು ಈಗ ಉಲ್ಟಾ ಹೊಡೆದ ಕ್ರಿಕೆಟರ್ ಶುಬ್​ಮನ್ ಗಿಲ್​

‘ನಾನು ನಿಮ್ಮ ಜೊತೆ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್ ಮಾಡಬೇಕು..’ ಎಂದು ಅಭಿಮಾನಿಯೋರ್ವ ಕೋರಿದ್ದ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ನಾನು ಸಾಮಿ ಸಾಮಿ ಸ್ಟೆಪ್​​ನ ತುಂಬಾ ಬಾರಿ ಮಾಡಿದ್ದೇನೆ. ವಯಸ್ಸಾದಾಗ ನನಗೆ ಬೆನ್ನಿನ ಸಮಸ್ಯೆ ಬರಬಹುದು ಎಂದು ಅನಿಸುತ್ತಿದೆ. ನಾವು ಭೇಟಿಯಾದಾಗ ಬೇರೆ ಏನಾದರೂ ಮಾಡೋಣ’ ಎಂದು ರಶ್ಮಿಕಾ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಕ್ರಿಕೆಟರ್​ಗಳ ಕ್ರಶ್​ ಆಗಿದ್ದೀರಿ’; ಶುಬ್​ಮನ್ ಗಿಲ್ ಬಗ್ಗೆ ಹೇಳಿದ್ದಕ್ಕೆ ರಶ್ಮಿಕಾ ಮಂದಣ್ಣ ರಿಯಾಕ್ಷನ್ ಹೇಗಿತ್ತು?

ಈ ಉತ್ತರ ನೋಡಿ ಹಲವರು ಹಲವು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ‘ರಶ್ಮಿಕಾಗೆ ‘ಸಾಮಿ ಸಾಮಿ’ ಸ್ಟೆಪ್ ಬೇಸರ ಬಂದಿದೆ, ಅದಕ್ಕೆ ಅವರು ಮುಂದಿನ ದಿನಗಳಲ್ಲಿ ಇದನ್ನು ಮಾಡದಿರಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಈ ರೀತಿ ಹೇಳಿರಬಹುದು’ ಎಂದು ಕೆಲವರು ಊಹಿಸಿದ್ದಾರೆ. ಕೆಲವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳ ಬಗ್ಗೆ ತೋರುವ ಪ್ರೀತಿ ಬಗ್ಗೆಯೂ ಅನೇಕರಿಗೆ ಖುಷಿ ಇದೆ.

ಇದನ್ನೂ ಓದಿ: ನೆಗೆಟಿವ್ ಜನರ ಜೊತೆ ರಶ್ಮಿಕಾ ಮಂದಣ್ಣ ಹೇಗೆ ಡೀಲ್ ಮಾಡ್ತಾರೆ? ಉತ್ತರ ಕೊಟ್ಟ ನಟಿ

ರಶ್ಮಿಕಾ ಮಂದಣ್ಣ ಅವರು ಈ ವರ್ಷದ ಆರಂಭದಲ್ಲೇ ಎರಡು ಯಶಸ್ಸು ಕಂಡಿದ್ದಾರೆ. ‘ವಾರಿಸು’ ಸಿನಿಮಾ ಯಶಸ್ಸು ಕಂಡಿದೆ. ತಮಿಳಿನಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ದಳಪತಿ ವಿಜಯ್​ಗೆ ಜೊತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಅನಿಮಲ್​’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:07 am, Wed, 22 March 23

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?