ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದೆ ಎಂದು ಈಗ ಉಲ್ಟಾ ಹೊಡೆದ ಕ್ರಿಕೆಟರ್ ಶುಬ್​ಮನ್ ಗಿಲ್​

Rashmika Mandanna: ‘ರಶ್ಮಿಕಾ ಮಂದಣ್ಣ ಮೇಲೆ ನನಗೆ ಕ್ರಶ್ ಇದೆ’ ಎಂದು ಶುಬ್​ಮನ್​ ಗಿಲ್ ಅವರು ಹೇಳಿಕೊಂಡಿರುವುದಾಗಿ ಇತ್ತೀಚೆಗೆ ವರದಿ ಆಗಿತ್ತು. ಇದಾದ ಬೆನ್ನಲ್ಲೇ ಟ್ರೋಲ್​ ಪೇಜ್​ಗಳು ಹಬ್ಬ ಮಾಡಿದ್ದವು.

ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದೆ ಎಂದು ಈಗ ಉಲ್ಟಾ ಹೊಡೆದ ಕ್ರಿಕೆಟರ್ ಶುಬ್​ಮನ್ ಗಿಲ್​
ಶುಬ್​ಮನ್​ ಗಿಲ್​-ರಶ್ಮಿಕಾ ಮಂದಣ್ಣ
Follow us
ರಾಜೇಶ್ ದುಗ್ಗುಮನೆ
|

Updated on:Mar 08, 2023 | 7:25 AM

ಕ್ರಿಕೆಟರ್ ಶುಬ್​ಮನ್​ ಗಿಲ್  (Shubman Gill) ಕಳೆದ ಕೆಲ ಸಮಯದಿಂದ ಹುಡುಗಿಯರ ವಿಚಾರಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಬ್ಯಾಟ್​ನಿಂದ ಶತಕ ಸಿಡಿದಷ್ಟೇ ವೇಗದಲ್ಲಿ ವದಂತಿಗಳು ಕೂಡ ಸಿಡಿಯುತ್ತಿವೆ. ಅವರ ಹೆಸರು ಸಾರಾ ತೆಂಡೂಲ್ಕರ್, ಸಾರಾ ಅಲಿ ಖಾನ್ ಜೊತೆ ತಳಕು ಹಾಕಿಕೊಳ್ಳುತ್ತಿದೆ. ಈಗ ಶುಬ್​ಮನ್ ಗಿಲ್ ಅವರ ಹೆಸರು ರಶ್ಮಿಕಾ ಜೊತೆ ಸೇರಿಕೊಂಡಿತ್ತು. ‘ರಶ್ಮಿಕಾ ಮಂದಣ್ಣ (Rashmika Mandanna) ಮೇಲೆ ಕ್ರಶ್ ಇದೆ’ ಎಂದು ಅವರು ಹೇಳಿಕೊಂಡಿರುವುದಾಗಿ ವರದಿ ಆಗಿತ್ತು. ಆದರೆ, ಈಗ ಶುಬ್​ಮನ್​ ಉಲ್ಟಾ ಹೊಡೆದಿದ್ದಾರೆ. ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಯಾವುದು ನಿಜ ಯಾವುದು ಸುಳ್ಳು ಎಂಬ ಗೊಂದಲ ಮೂಡಿದೆ.

‘ರಶ್ಮಿಕಾ ಮಂದಣ್ಣ ಮೇಲೆ ನನಗೆ ಕ್ರಶ್ ಇದೆ’ ಎಂದು ಶುಬ್​ಮನ್​ ಗಿಲ್ ಅವರು ಹೇಳಿಕೊಂಡಿರುವುದಾಗಿ ಇತ್ತೀಚೆಗೆ ವರದಿ ಆಗಿತ್ತು. ಇದಾದ ಬೆನ್ನಲ್ಲೇ ಟ್ರೋಲ್​ ಪೇಜ್​ಗಳು ಹಬ್ಬ ಮಾಡಿದ್ದವು. ಶುಬ್​ಮನ್ ಗಿಲ್​ ಹಾಗೂ ರಶ್ಮಿಕಾ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡೋಕೆ ಆರಂಭಿಸಿದ್ದವು. ಸಾಲು ಸಾಲು ಪೋಸ್ಟ್​ಗಳು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಿದ್ದವು. ಇದು ಶುಬ್​ಮನ್ ಗಿಲ್ ಕಣ್ಣಿಗೂ ಬಿದ್ದಿದೆ. ಅವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ
Image
Rashmika Mandanna: ಅವಾರ್ಡ್ ಫಂಕ್ಷನ್​ಗೆ ಚಿಕ್ಕ ಡ್ರೆಸ್ ಹಾಕಿ ಬಂದ ರಶ್ಮಿಕಾ ಮಂದಣ್ಣ; ಟ್ರೋಲ್ ಮಂದಿಗೆ ಹಬ್ಬ
Image
Rashmika Mandanna: ಮಿಲಾನ್ ಫ್ಯಾಷನ್​ ವೀಕ್​​ನಲ್ಲಿ ಬಿಟಿಎಸ್​ ನಾಯಕನ ಭೇಟಿ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?
Image
Rashmika Mandanna: ಮಿಲಾನ್​ಗೆ ಹಾರುವ ಮುನ್ನ ತಮ್ಮ ಸೌಂದರ್ಯದ ಗುಟ್ಟು ರಟ್ಟು ಮಾಡಿದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮೇಲಿನ ಪ್ರೀತಿ ಬಹಿರಂಗಪಡಿಸಿದ ಸ್ಟಾರ್ ಕ್ರಿಕೆಟಿಗ

ವೆಬ್​ಸೈಟ್ ಒಂದು ವರದಿ ಮಾಡಿರುವ ಪೋಸ್ಟ್​ಗೆ ಕಮೆಂಟ್ ಮಾಡಿರುವ ಶುಬ್​ಮನ್ ಗಿಲ್​, ‘ಅದು ಯಾವ ಮಾಧ್ಯಮ ಜೊತೆಗಿನ ಸಂದರ್ಶನ? ನನಗೆ ಆ ಬಗ್ಗೆ ಗೊತ್ತಿಲ್ಲ’ ಎಂದು ಗಿಲ್ ಹೇಳಿದ್ದಾರೆ. ಮೊದಲು ಹೇಳಿಕೆ ನೀಡಿ ಅದು ವೈರಲ್ ಆದ ಬಳಿಕ ಶುಬ್​ಮನ್​ ಈ ರೀತಿ ಹೇಳಿದರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: 3 ಪಂದ್ಯದಲ್ಲಿ 205 ಬಾರಿಸಿದರೂ ಶುಭ್​ಮನ್ ಗಿಲ್​ಗೆ ಭಾರತದ ಬಿ ತಂಡದಲ್ಲೂ ಇಲ್ಲ ಭದ್ರ ಸ್ಥಾನ

ಶುಬ್​ಮನ್ ಗಿಲ್ ಹಾಗೂ ಸಚಿನ್ ಮಗಳು ಸಾರಾ ತೆಂಡೂಲ್ಕರ್ ನಡುವೆ ಏನೋ ನಡೆಯುತ್ತಿದೆ ಎಂಬುದು ಕೆಲವರ ಅಭಿಪ್ರಾಯ. ಕೆಲವೇ ಕೆಲವು ಕಮೆಂಟ್​ಗಳ ಮೂಲಕ ಈ ರೀತಿಯ ಊಹೆ ಸೃಷ್ಟಿ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ನಡೆಯುವಾಗ ಶುಬ್​ಮನ್ ಗಿಲ್​ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ನೆರೆದಿದ್ದ ಪ್ರೇಕ್ಷಕರು ‘ಸಾರಾ ಸಾರಾ’ ಎಂದು ಕೂಗಿದ್ದರು. ಇದನ್ನು ವಿರಾಟ್ ಕೊಹ್ಲಿ ಎಂಜಾಯ್ ಮಾಡಿದ್ದರು. ಈ ಮೊದಲು ನಟಿ ಸಾರಾ ಅಲಿ ಖಾನ್ ಜೊತೆ ಶುಬ್​ಮನ್ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿ ಸಾಕಷ್ಟು ಅಚ್ಚರಿಗೆ ಕಾರಣ ಆಗಿತ್ತು.

ರಶ್ಮಿಕಾ ಮಂದಣ್ಣ ಅವರು ಈ ವರ್ಷದ ಆರಂಭದಲ್ಲೇ ಎರಡು ಯಶಸ್ಸು ಕಂಡಿದ್ದಾರೆ. ‘ವಾರಿಸು’ ಸಿನಿಮಾ ಯಶಸ್ಸು ಕಂಡಿದೆ. ತಮಿಳಿನಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ದಳಪತಿ ವಿಜಯ್​ಗೆ ಜೊತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಅನಿಮಲ್​’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:16 am, Wed, 8 March 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ