AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡ್ತೀನಿ’: ಕಲಿತ ಸಂಸ್ಕಾರದ ಬಗ್ಗೆ ರಶ್ಮಿಕಾ ಮಂದಣ್ಣ ಮಾತು

‘ನನಗೆ ಚಿಕ್ಕ ವಿಷಯಗಳು ಕೂಡ ಮುಖ್ಯವಾಗುತ್ತವೆ. ಬೆಳಗ್ಗೆ ಎದ್ದ ಬಳಿಕ ನಾನು ಸಾಕು ಪ್ರಾಣಿಗಳ ಜೊತೆ ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯುತ್ತೇನೆ. ಅದರಿಂದ ನನಗೆ ಖುಷಿ ಸಿಗುತ್ತದೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

‘ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡ್ತೀನಿ’: ಕಲಿತ ಸಂಸ್ಕಾರದ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
|

Updated on:Mar 22, 2023 | 7:46 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇಂದು ಸೂಪರ್​ ಸ್ಟಾರ್. ಹಾಗಂತ ಅವರು ಸಂಸ್ಕಾರ ಮರೆತಿಲ್ಲ. ಮನೆಯಲ್ಲಿ ಎಲ್ಲರಿಗೂ ಅವರು ಗೌರವ ನೀಡುತ್ತಾರೆ. ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡುತ್ತಾರಂತೆ. ಇದು ಗಾಸಿಪ್​ ಅಲ್ಲವೇ ಅಲ್ಲ. ಸ್ವತಃ ರಶ್ಮಿಕಾ ಮಂದಣ್ಣ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಲವೊಮ್ಮೆ ಟ್ರೋಲ್​ ಆಗುವುದುಂಟು. ಆದರೆ ಅವರ ಪರ್ಸನಲ್​ ಲೈಫ್​ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ರಶ್ಮಿಕಾ ಮಂದಣ್ಣ ಅವರು ಮನೆಯಲ್ಲಿ ಹೇಗೆ ಇರುತ್ತಾರೆ? ಹಿರಿಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ? ಈ ಎಲ್ಲ ವಿಚಾರಗಳ ಬಗ್ಗೆ ಸ್ವತಃ ಅವರೇ ವಿವರ ನೀಡಿದ್ದಾರೆ.

ಎಲ್ಲರಿಗೂ ಗೌರವ ನೀಡುವ ರಶ್ಮಿಕಾ:

‘ಮನೆಗೆ ಹೋದ ಬಳಿಕ ಗೌರವದಿಂದ ಎಲ್ಲರ ಕಾಲಿಗೂ ನಮಸ್ಕರಿಸುವ ಅಭ್ಯಾಸ ನನಗಿದೆ. ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡುತ್ತೇನೆ. ಯಾಕೆಂದರೆ ನಾನು ಬೇಧ-ಭಾವ ಮಾಡುವುದಿಲ್ಲ. ನಾನು ಎಲ್ಲರನ್ನೂ ಗೌರವಿಸುತ್ತೇನೆ. ಅದು ನನ್ನ ವ್ಯಕ್ತಿತ್ವ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಇದನ್ನೂ ಓದಿ: ಇನ್ಮುಂದೆ ‘ಸಾಮಿ ಸಾಮಿ..’ ಸ್ಟೆಪ್ ಮಾಡದಿರಲು ನಿರ್ಧರಿಸಿದ ರಶ್ಮಿಕಾ ಮಂದಣ್ಣ; ಕಾರಣ ತಿಳಿಸಿದ ನಟಿ

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಲೈಫ್​ ಸ್ಟೈಲ್​ ಹೀಗಿದೆ..

‘ನನಗೆ ಚಿಕ್ಕ ವಿಷಯಗಳು ಕೂಡ ಮುಖ್ಯವಾಗುತ್ತವೆ. ಬೆಳಗ್ಗೆ ಎದ್ದ ಬಳಿಕ ನಾನು ಸಾಕು ಪ್ರಾಣಿಗಳ ಜೊತೆ ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯುತ್ತೇನೆ. ಅದರಿಂದ ನನಗೆ ಖುಷಿ ಸಿಗುತ್ತದೆ. ಮಾತುಗಳಿಗೆ ತುಂಬ ಶಕ್ತಿ ಇದೆ. ಅದು ಒಬ್ಬರಿಗೆ ಪೂರಕವೂ ಆಗಬಹುದು ಅಥವಾ ಮಾರಕವೂ ಆಗಬಹುದು. ಅದಕ್ಕಾಗಿ.. ಕೆಲವರು ಏನಾದರೂ ಹೇಳಿದಾಗ ನನ್ನ ಮೇಲೆ ಪರಿಣಾಮ ಬೀರುತ್ತದೆ. ಡೈರಿಯಲ್ಲಿ ನಾನು ಎಲ್ಲ ಚಿಕ್ಕ ಚಿಕ್ಕ ವಿಷಯಗಳನ್ನೂ ಬರೆದಿಡುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇದನ್ನೂ ಓದಿ: ‘ಕ್ರಿಕೆಟರ್​ಗಳ ಕ್ರಶ್​ ಆಗಿದ್ದೀರಿ’; ಶುಬ್​ಮನ್ ಗಿಲ್ ಬಗ್ಗೆ ಹೇಳಿದ್ದಕ್ಕೆ ರಶ್ಮಿಕಾ ಮಂದಣ್ಣ ರಿಯಾಕ್ಷನ್ ಹೇಗಿತ್ತು?

ರಶ್ಮಿಕಾ ಮಂದಣ್ಣ ಕೈಯಲ್ಲಿವೆ ದೊಡ್ಡ ಸಿನಿಮಾಗಳು:

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರು ಖ್ಯಾತಿ ಹೊಂದಿದ್ದಾರೆ. ಅವರ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಅಲ್ಲು ಅರ್ಜುನ್​ ಜೊತೆ ಅವರು ‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾಗೂ ಅವರು ನಾಯಕಿ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಮಿಷನ್​ ಮಜ್ನು’ ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಹೊಸ ಹೊಸ ಆಫರ್​ಗಳನ್ನು ಅವರನ್ನು ಹುಡುಕಿಕೊಂಡು ಬರುತ್ತಲೇ ಇವೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆ ಕೂಡ ಜಾಸ್ತಿ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:46 pm, Wed, 22 March 23