ವಿಜಯ್ ದೇವರಕೊಂಡ ಅಲ್ಲ, ತೆಲುಗಿನ ಈ ನಟನ ಜೊತೆ ರಶ್ಮಿಕಾ ಮಂದಣ್ಣ ಸುತ್ತಾಟ

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ಶ್ರೀನಿವಾಸ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತಿದೆ.

ವಿಜಯ್ ದೇವರಕೊಂಡ ಅಲ್ಲ, ತೆಲುಗಿನ ಈ ನಟನ ಜೊತೆ ರಶ್ಮಿಕಾ ಮಂದಣ್ಣ ಸುತ್ತಾಟ
ಸಾಯಿ ಶ್ತೀನಿವಾಸ್-ರಶ್ಮಿಕಾ

Updated on: Apr 01, 2023 | 3:03 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬೇಡಿಕೆಯ ನಟಿ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ತೆಲುಗು, ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ವಿಜಯ್ ದೇವರಕೊಂಡ ಜೊತೆ ಅವರು ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಈಗ ಈ ವಿಚಾರದ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ. ವಿಜಯ್ ದೇವರಕೊಂಡ ಅಲ್ಲ, ಟಾಲಿವುಡ್ ಹೀರೋ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ಸುದ್ದಿ ಹುಟ್ಟಲು ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ಶ್ರೀನಿವಾಸ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತಿದೆ. ಈ ವಿಚಾರ ಕೇಳಿ ಒಂದು ವರ್ಗದ ಫ್ಯಾನ್ಸ್​ಗೆ ಶಾಕ್ ಆಗಿದೆ. ಈ ಸುದ್ದಿ ನಿಜವಾಗದಿರಲಿ ಎಂದು ಕೋರಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮುಂಬೈ ಏರ್​ಪೋರ್ಟ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರೂ ಪಾಪರಾಜಿಗಳಿಗೆ ಪೋಸ್ ನೀಡಿದ್ದರು. ಅಷ್ಟೇ ಅಲ್ಲ ಅವಾರ್ಡ್ ಫಂಕ್ಷನ್​ನಲ್ಲೂ ಈ ಜೋಡಿ ಜೊತೆಯಾಗಿ ಹಾಜರಿ ಹಾಕಿದೆ.

‘ವಿಜಯ್ ದೇವರಕೊಂಡ ಜೊತೆ ಪ್ರೀತಿ ಇಲ್ಲ. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್’ ಎಂದು ರಶ್ಮಿಕಾ ಮಂದಣ್ಣ ಅನೇಕ ಬಾರಿ ಹೇಳಿದ್ದಾರೆ. ಅವರು ಹೇಳಿದ್ದರಲ್ಲಿ ನಿಜ ಇರಬಹುದೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಈಗ ಕಾಡುತ್ತಿದೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆಗಿನ ಫ್ರೆಂಡ್​ಶಿಪ್ ಬಗ್ಗೆ ರಶ್ಮಿಕಾ ಅವರೇ ಮಾತನಾಡಬೇಕಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ನಿತಿನ್​ ನಟನೆಯ ಹೊಸ ಚಿತ್ರಕ್ಕೆ ಚಾಲನೆ; ಮುಹೂರ್ತಕ್ಕೆ ಬಂದು ಹಾರೈಸಿದ ಚಿರಂಜೀವಿ

ರಶ್ಮಿಕಾ ಮಂದಣ್ಣ ಅವರು ಸದ್ಯ ‘ಅನಿಮಲ್​’ ಹಾಗೂ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ನಿತೀನ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಅಂದಹಾಗೆ, ರಶ್ಮಿಕಾ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಒಟ್ಟಾಗಿ ಯಾವುದೇ ಸಿನಿಮಾ ಮಾಡಿಲ್ಲ. ಆದಾಗ್ಯೂ ಇವರ ಮಧ್ಯೆ ಪರಿಚಯ ಬೆಳೆದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಕೊಡಗಿನ ಹುಡುಗಿ ಉತ್ತರ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ
ಇದನ್ನೂ ಓದಿ:

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us