
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಯಶಸ್ಸಿನ ಓಟ ಮುಂದುವರಿದಿದೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಅವರಿಗೆ ಹೊಸ ಹೊಸ ಆಫರ್ಗಳು ಸಿಗುತ್ತಲೇ ಇವೆ. ಸ್ಟಾರ್ ನಟರ ಜೊತೆ ಅಭಿನಯಿಸುತ್ತ ಅವರು ಭದ್ರವಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ನಿತಿನ್ (Nithiin) ಜೊತೆ ರಶ್ಮಿಕಾ ಮಂದಣ್ಣ ಅವರು ಹೊಸದೊಂದು ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಾರೆ ಎಂದು ಇತ್ತೀಚೆಗಷ್ಟೇ ಸುದ್ದಿ ಆಗಿತ್ತು. ಈಗ ಆ ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ. ತೆಲುಗು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ಹೊಸ ಚಿತ್ರಕ್ಕೆ ಶುಭ ಕೋರಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ನಿತಿನ್ ಅವರು ಜೊತೆಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಈ ಮೊದಲು ಅವರು ‘ಭೀಷ್ಮ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸಖತ್ ಬೇಡಿಕೆ ಇದೆ. ಅವರು ಲಕ್ಕಿ ಹೀರೋಯಿನ್ ಎನಿಸಿಕೊಂಡಿದ್ದಾರೆ. ಅವರ ಕಾಲ್ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ನಿತಿನ್-ರಶ್ಮಿಕಾ ಕಾಂಬಿನೇಷನ್ನ ಹೊಸ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ. ಅದ್ದೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಜಿವಿ ಪ್ರಕಾಶ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡ್ತೀನಿ’: ಕಲಿತ ಸಂಸ್ಕಾರದ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ವೆಂಕಿ ಕುದುಮುಲ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರಾದ ಗೋಪಿಚಂದ್ ಮಲಿನೇನಿ, ಹನು ರಾಘವಪುಡಿ ಮುಂತಾದವರು ಕೂಡ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದಾರೆ. ‘ಮೆಗಾ ಸ್ಟಾರ್’ ಚಿರಂಜೀವಿ ಅವರು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ನಟನೆ ಬಗ್ಗೆ ತಂದೆ-ತಾಯಿಗೆ ಹೆಮ್ಮೆ ಇಲ್ವಾ? ಸಂದರ್ಶನದಲ್ಲಿ ಬಹಿರಂಗ ಆಯ್ತು ವಿಷಯ
ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಖ್ಯಾತಿ ಹೆಚ್ಚಿತು. ಈಗ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಹಿಂದಿಯ ‘ಅನಿಮಲ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
ಸಿದ್ದಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ ‘ಮಿಷನ್ ಮಜ್ನು’ ಸಿನಿಮಾ ಈ ವರ್ಷ ಆರಂಭದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಿ ಜನಮೆಚ್ಚುಗೆ ಪಡೆದುಕೊಂಡಿತು. ಅದರ ಬೆನ್ನಲ್ಲೇ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಆ ಮೂಲಕ 2023ರ ವರ್ಷ ಅವರಿಗೆ ಸಖತ್ ಆಶಾದಾಯಕವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.